ಮಂಜೇಶ್ವರ: ಕಾಸರಗೋಡು ಜಿಲ್ಲಾ ಪಂಚಾಯತು ಅನುದಾನದಿಂದ ಕಡಂಬಾರು ಸರ್ಕಾರಿ ಪ್ರೌಢಶಾಲೆಗೆ ಮಂಜೂರಾದ ನೂತನ ಅಡುಗೆ ಕೋಣೆ ಕಟ್ಟಡ ಹಾಗೂ ಆವರಣ ಗೋಡೆಯ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಶನಿವಾರ ನೆರವೇರಿಸಿದರು.
ಮೀಂಜ ಗ್ರಾಮ ಪಂಚಾಯತು ಅಧ್ಯಕ್ಷೆ ಶಂಷಾದ್ ಶುಕೂರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಶಿವಕುಮಾರ್.ಕೆ, ಬಾಬು ಮಾಸ್ತರ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಯದುನಂದನ ಆಚಾರ್ಯ, ಶಾಲಾ ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಮುತ್ತಲಿಬ್, ಮಾತೃಸಂಘದ ಅಧ್ಯಕ್ಷೆ ಝೌರಾ ಕಡಂಬಾರು, ಸಂಕಬೈಲು ಸತೀಶ ಅಡಪ ಮುಂತಾದವರು ಉಪಸ್ಥಿತರಿದ್ದರು.
ಕಳೆದ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿ ನಿಖಿತಾ ಶೆಟ್ಟಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಭಾರ ಪ್ರಾಂಶುಪಾಲ ಮೂಸಕುಂಞ.ಡಿ.ಸ್ವಾಗತಿಸಿ, ಅಧ್ಯಾಪಕ ಇಸ್ಮಾಯಿಲ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಅಧ್ಯಾಪಕ ನಾಗರಾಜ.ಬಿ.ವಂದಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತು ನಿಧಿಯಿಂದ 10 ಲಕ್ಷ.ರೂ.ವ್ಯಯಿಸಿ ಅಡುಗೆ ಕೋಣೆ ಕಟ್ಟಡ ಹಾಗೂ 15 ಲಕ್ಷ.ರೂ.ವ್ಯಯಿಸಿ ಆವರಣ ಗೋಡೆಯನ್ನು ನಿರ್ಮಿಸಲಾಗಿದೆ.