HEALTH TIPS

ಕರೋನಾ ಬಾಧಿತೆಯ ಅತ್ಯಾಚಾರ ಪ್ರಕರಣ ಖಂಡಿಸಿ ಮಂಜೇಶ್ವರ ಪ್ರಖಂಡ ವಿ.ಹಿಂ.ಪ.ಬಜರಂಗದಳ ಮಾತೃಶಕ್ತಿಯಿಂದ ಮಂಗಲ್ಪಾಡಿಯಲ್ಲಿ ಬೃಹತ್ ಪ್ರತಿಭಟನೆ

  

        ಮಂಜೇಶ್ವರ:ಕರೋನಾ ಬಾಧಿತೆಯಾದ ಯುವತಿಯನ್ನು ಚಿಕಿತ್ಸೆಗೆ ಕರೆದುಕೊಂಡೊಯ್ಯುವ ನಡುವೆ ಅಂಬುಲೆನ್ಸ್ ಚಾಲಕ ಅತ್ಯಾಚಾರ ಎಸಗಿದ ನಾಡನ್ನು ಬೆಚ್ಚಿಬೀಳಿಸಿದ ಕೃತ್ಯವನ್ನು ಖಂಡಿಸಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಮುಂಭಾಗ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಂಜೇಶ್ವರ ಪ್ರಖಂಡ  ಇದರ ವತಿಯಿಂದ ಮಂಗಳವಾರ ಬೃಹತ್ ಪ್ರತಿಭಟನಾ ಸಭೆ ನಡೆಯಿತು.  

        ಮಂಗಳವಾರ ಸಂಜೆ ನಯಾಬಜಾರ್ ನಲ್ಲಿರುವ ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ನಡೆದ  ಸಭೆಯನ್ನು ಧಾರ್ಮಿಕ ಮುಂದಾಳು  ರವೀಶ್ ತಂತ್ರಿ ಕುಂಟಾರು ಉದ್ಘಾಟಿಸಿ ಮಾತನಾಡಿ ಕೇರಳ ರಾಜ್ಯ ಸರ್ಕಾರದ ಆಡಳಿತೆಯ ಕಾಲದಲ್ಲಿ ಗೂಂಡಾ ಮಾಫಿಯ,ಮಾದಕ ದ್ರವ್ಯ ಜಾಲ,ಕಳ್ಳ ಸಾಗಾಟದ ವ್ಯಕ್ತಿಗಳನ್ನು ವಿವಿಧ ಇಲಾಖೆಗಳಲ್ಲಿ ಸೇರ್ಪಡಿಸಿ ಸರ್ಕಾರಿ ಉದ್ಯೋಗ ನೀಡುತ್ತಿದ್ದು ಅವರ ಪೂರ್ವಪರ ತಿಳಿಯದೆ ಇರುವುದರಿಂದ ಇಂತಹ  ನೀಚ ಕೃತ್ಯಗಳು ಅಧಿಕವಾಗಲು ಕಾರಣವಾಗಿದೆ ಎಂದು ಆರೋಪಿಸಿದರು. ಕರೋನ ಕಾಲದಲ್ಲಿ ಜನ ಸಾಮಾನ್ಯರಿಗೆ ಭದ್ರತೆ ನೀಡಬೇಕಾದ ಸರ್ಕಾರ ಇದೀಗ ವಂಚಕರನ್ನು, ಅತ್ಯಾಚಾರಿಗಳನ್ನು ರಕ್ಷಿಸಲು ಯತ್ನಿಸುತ್ತಿರುವುದು ಖಂಡನೀಯ ಎಂದರು. ಮಾತೃದೇವೋ ಭವ ಎಂಬ ಸಂಸ್ಕøತಿಯಿಂದ ಹೆಣ್ಮಕ್ಕಳನ್ನು ಅತ್ಯಂತ ಗೌರವಿಸಿಸುವ ವಿಶ್ವ ಹಿಂದು ಬಜರಂಗದಳ ಮಾತೃ ವಾಹಿನಿಯಂತಹ ಪರಿವಾರ ಸಂಘಟನೆಗಳು ಇದನ್ನು ತೀವ್ರವಾಗಿ ಖಂಡಿಸುತ್ತಿದ್ದು ಆರೋಪಿಗೆ ಸೂಕ್ತ ಶಿಕ್ಷೆ ನೀಡದಿದ್ದರೆ ಮುಂದೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಮುನ್ನೆಚ್ಚರಿಕೆ ನೀಡಿದರು. 


         ಪ್ರತಿಭಟನೆಯ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಪರಂಕಿಲ ವಹಿಸಿದ್ದರು. ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸತ್ಸಂಗ ಪ್ರಮುಖ್ ಜಯಾನಂದ ಹೊಸದುರ್ಗ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಂಕರ ಭಟ್ ಉಳುವಾನ, ಜಿಲ್ಲಾ ಸಹ ಕಾರ್ಯದರ್ಶಿ ಸಂಕಪ್ಪ ಭಂಡಾರಿ ಬಳ್ಳಂಬೆಟ್ಟು, ಭಜರಂಗದಳ ಜಿಲ್ಲಾ ಸಹ ಸಂಚಾಲಕ ಪವನ್ ಕುಮಾರ್ ಅಂಗಡಿಪದವು, ವಿಶ್ವ ಹಿಂದೂ ಪರಿಷತ್ ಮಂಜೇಶ್ವರ ಪ್ರಖಂಡ ಕಾರ್ಯದರ್ಶಿ ಯಾದವ ಕೀರ್ತೇಶ್ವರ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರ್ ರೈ, ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಪದ್ಮನಾಭ ಕಡಪ್ಪರ, ಉಪಾಧ್ಯಕ್ಷೆ  ಜಯಂತಿ ಶೆಟ್ಟಿ, ಸರೋಜಾ ಆರ್ ಬಲ್ಲಾಳ್, ಓ.ಬಿ.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಲ್ಸರಾಜ್ ಕೆ.ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಐಲ್, ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ವಸಂತ್ ಮಯ್ಯ ತಿಂಬರ, ಯುವಮೋರ್ಚಾ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಕಿಶೋರ್ ಭಗವತೀ, ಸೇವಾ ಭಾರತಿ ಮಂಗಲ್ಪಾಡಿ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಒಡ್ಡ0ಬೆಟ್ಟು, ವಿ.ಎಚ್.ಪಿ ಪ್ರಮುಖರಾದ ಜಯ ಶರ್ಮಿಳಾ ಪಂಜ,  ಚಂದ್ರಕಲಾ ಶೆಟ್ಟಿ, ರಶ್ಮಿ ಇಚ್ಲಂಗೋಡು, ಯಶ ಪ್ರಭಾ ಉಪ್ಪಳ, ಕುಸುಮ ಕೋಡಿಬೈಲ್, ಜ್ಯೋತಿ ಉದ್ಯಾವರ, ಆಶಾ ತೂಮಿನಾಡು ಮೊದಲಾದವರು ಉಪಸ್ಥಿತರಿದ್ದರು.

        ವಿಶ್ವ ಹಿಂದೂ ಪರಿಷತ್ ಮಾತೃ ಶಕ್ತಿ ಜಿಲ್ಲಾ ಪ್ರಮುಖ್ ಮೀರಾ ಆಳ್ವ ಸ್ವಾಗತಿಸಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲ್ ವಂದಿಸಿದರು.

     ಕಾರ್ಯಕ್ರಮದ ಮುಂಚಿತ ಕೈಕಂಬದಿಂದ- ನಯಾಬಜಾರ್ ನಲ್ಲಿರುವ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಮೆರವಣಿಗೆಗೆ ನೇತಾರರಾದ ಸತ್ಯ ವೀರನಗರ, ವೇಣುಗೋಪಾಲ ಶೆಟ್ಟಿ ಪುತ್ತಿಗೆ, ಮೋಹನ್ ದಾಸ್ ಐಲ, ಎಸ್. ಆರ್. ಜನಾರ್ಧನ ಆಚಾರ್ಯ ಮಜಿಬೈಲ್, ಲೋಹಿತ್ ಮಜಿಬೈಲ್ ಕಟ್ಟೆ, ಬಾಬು ಕುಬಣೂರು, ರದೀಸ್ ಮಂಜೇಶ್ವರ, ಲೋಕೇಶ್ ಕಡಪ್ಪರ ಉಪ್ಪಳ, ಹರಿನಾಥ ಭಂಡಾರಿ, ರಾಘವೇಂದ್ರ ಮಯ್ಯ ದೈಗೋಳಿ, ಕಿಶೋರ್ ಬಂದ್ಯೋಡ್, ಸೌರವ್ ಹೊಸಂಗಡಿ, ದೀಕ್ಷಿತ್ ಐಲ, ಶೇಷಪ್ಪ ಅರಿಂಗುಳ, ಕೌಶಿಕ್ ಮಾಡ,ರಾಮಚಂದ್ರ ಬಲ್ಲಾಳ್ ಕುಬಣೂರು, ಭರತ್ ರೈ ಕೋಡಿಬೈಲ್, ಅನಿಲ್ ರಾಜ್ ಐಲ, ಪ್ರಜ್ವಲ್ ಶೆಟ್ಟಿ ಮಾಡ, ಅನಿಲ್ ಅಂಜರೆ, ಶ್ರೀಶ ಮಾಡ ಮೊದಲಾದವರು ನೇತೃತ್ವ ನೀಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries