ಕೋಟ್ಟಯಂ: ಪತ್ತನಂತಿಟ್ಟು ಅರಣ್ಮುಲಾದಲ್ಲಿ 108 ಆಂಬ್ಯುಲೆನ್ಸ್‍ನಲ್ಲಿ ಕ್ರೂರವಾಗಿ ಕಿರುಕುಳಕ್ಕೊಳಗಾದ ಬಾಲಕಿಯೊಬ್ಬಳು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಕೋವಿಡ್ ಐಸೊಲೇಷನ್ ವಾರ್ಡ್‍ನಲ್ಲಿ ಕತ್ತು ಹಿಸುಕಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ 1.30 ರ ಸುಮಾರಿಗೆ ವೈದ್ಯಕೀಯ ಕಾಲೇಜು ಐಸೊಲೇಷನ್ ವಾರ್ಡ್‍ನ ಬಾತ್ ರೂಮ್‍ಗೆ ಹತ್ತಿ ಬಾಲಕಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಳು. ಬಾಲಕಿಯನ್ನು ಕರ್ತವ್ಯದ ಪರಿಚಾರಕರು ಮತ್ತು ಸಿಬ್ಬಂದಿ ರಕ್ಷಿಸಿದ್ದಾರೆ.
ಸೆಪ್ಟೆಂಬರ್ ಆರಂಭದಲ್ಲಿ ಪತ್ತನಂತಿಟ್ಟು ಜಿಲ್ಲೆಯ ಅರಣ್ಮುಲಾದಲ್ಲಿ ಬಾಲಕಿಯನ್ನು 108 ಆಂಬುಲೆನ್ಸ್ ಚಾಲಕ ನೌಫಾಲ್ ಅಮಾನುಷವಾಗಿ ಕಿರುಕುಳ ನೀಡಿದ್ದನು. ಬಾಲಕಿಯನ್ನು ಮನೆಯಿಂದ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದಾಗ ಚಾಲಕ ನೌಫಲ್ ಅಮಾನುಷವಾಗಿ ಕೃತ್ಯವೆಸಗಿದ್ದ.
ಗಂಭೀರವಾದ ಗಾಯಗಳ ಹಿನ್ನೆಲೆಯಲ್ಲಿ ಬಾಲಕಿಯನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇಲ್ಲಿಗೆ ಕರೆತಂದ ನಂತರವೂ ಬಾಲಕಿ ಕಿರುಕುಳದಿಂದ ಮಾನಸಿಕ ಖಿನ್ನತೆಗೊಳಗಾಗಿ ಬಸವಳಿದಿದ್ದಳೆಂದು ವೈದ್ಯಕೀಯ ತಂಡ ತಿಳಿಸಿದೆ. ಬಳಿಕ ಕೋವಿಡ್ ಸೋಂಕುಂಟಾದ ಬಾಲಕಿಯನ್ನು ಪ್ರತ್ಯೇಕ ವಾರ್ಡ್‍ಗೆ ಸ್ಥಳಾಂತರಿಸಲಾಗಿತ್ತು. ಜೊತೆಗೆ ಕೌನ್ಸೆಲಿಂಗ್ ಸಹ ನೀಡಲಾಗಿತ್ತು.
ಏತನ್ಮಧ್ಯೆ, ಬಾಲಕಿ ಇಂದು ಮಧ್ಯಾಹ್ನ 1.30 ಕ್ಕೆ ಬಾತ್ ರೂಂ ಗೆ ತೆರಳಿ ಕತ್ತು ಹಿಸುಕಿಕೊಂಡಳು. ಭಾರೀ ಶಬ್ದ ಕೇಳಿದ ಪರಿಚಾರಕರು ಬಾಲಕಿಯನ್ನು ದೌಡಾಯಿಸಿ ರಕ್ಷಿಸಿದರು. ತಕ್ಷಣ ಅವಳನ್ನು ವಾರ್ಡ್‍ಗೆ ವರ್ಗಾಯಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಾಲಕಿಗೆ ಗಂಭೀರ ಗಾಯಗಳಾಗಿಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಕಿರುಕುಳದ ಬಳಿಕ ಮಾನಸಿಕ ಒತ್ತಡ ದೂರವಾಗದ ಕಾರಣ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದಳೆಂದು ತಿಳಿಯಲಾಗಿದೆ.
ಬದನೆಕಾಯಿ ಸಂಘಗಳೆಲ್ಲ ಎಲ್ಲಿ:
ಸಾಸಿವೆ ಕಾಳು ನೆಲಕ್ಕೆ ಬಿದ್ದರೂ ಒದರಾಡುವ ವಿವಿಧ ಸಂಘಟನೆಗಳು ರಾಜ್ಯದಲ್ಲುಂಟಾದ ಇಂತಹ ಭೀಭತ್ಸ ಘಟನೆಯ ಬಳಿಕ ಎಲ್ಲಿ ಹೋಗಿವೆ ಎಂದೇ ಆಶ್ಚರ್ಯಕ್ಕೆ ಎಡೆಮಾಡಿದೆ. ಮಾನವಹಕ್ಕು, ಮಕ್ಕಳ ಹಕ್ಕು ಮೊದಲಾದ ಹೆಸರಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವ, ಮಕ್ಕಳ ಮೂಲಕ ಮೈಯಲ್ಲಿ ಲೈಂಗಿಕ ಚಿತ್ರ ಬರೆಸಿ ಜಗತ್ತು ಬದಲಾಯಿಸಲು ಹೊರಟಿರುವ ಮತ್ತು ಅಂತವರನ್ನು ಪೋಶಿಸುವ ಸಂಘಟನೆಗಳು ರಾಜ್ಯದಲ್ಲಿ ಇತ್ತೀಚೆಗೆ ಕಂಡುಬಂದಿರುವ ಲೈಂಗಿಕ ಶೋಷಣೆಗಳ ಹೊತ್ತು ಮೌನವಾಗಿರುವುದು ಸಂಶಯಗಳಿಗೆ ಎಡೆಮಾಡಿದೆ.