ನವದೆಹಲಿ: ಎರಡೂಕಡೆಗಳಿಂದ ಬಾಹ್ಯ ಬೆದರಿಕೆಗಳನ್ನು ಎದುರಿಸಲು ಭಾರತ ಸಿದ್ಧವಿದೆ ಎಂದು ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಹೇಳಿದ್ದಾರೆ.
ಉತ್ತರ ಹಾಗೂ ಪಶ್ಚಿಮ ಗಡಿಗಳಿಂದ ಬರುವ ದಾಳಿಗಳನ್ನು ಎದುರಿಸಲು ಭಾರತ ಸಿದ್ಧವಿದೆ, ಸಶಕ್ತವಾಗಿದ್ದು, ನಮ್ಮ ಗಡಿಗಳ ಮೇಲೆ ಕಣ್ಣು ಹಾಕಲು ಯಾರಿಗೂ ಬಿಡುವುದಿಲ್ಲ ಎಂದು ರಾವತ್ ತಿಳಿಸಿದ್ದಾರೆ.
ಗಡಿ ಭಾಗದ ಉದ್ವಿಗ್ನತೆ ಕುರಿತು ಮಾತನಾಡಿರುವ ರಾವತ್, ತಕ್ಷಣವೇ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ನಮ್ಮ ರಕ್ಷಣಾ ಪಡೆಗಳು ಸನ್ನದ್ಧಗೊಂಡಿವೆ. ಗಡಿ ಭಾಗದಲ್ಲಿ ನಮಗೆ ಶಾಂತಿ ಅಗತ್ಯವಿದೆ. ಚೀನಾದಿಂದ ಕೆಲವು ಆಕ್ರಮಣಕಾರಿ ನಡೆಗಳನ್ನು ನೋಡುತ್ತಿದ್ದೇವೆ. ಆದರೆ ಅವುಗಳನ್ನು ನಿಭಾಯಿಸಲು ನಾವು ಶಕ್ತರಾಗಿದ್ದೇವೆ ಎಂದು ರಾವತ್ ಹೇಳಿದ್ದಾರೆ.