ಕಾಸರಗೋಡು: ಸಮಾಜದ ಒಗ್ಗಟ್ಟಿನ ಬಲದಿಂದ ರಾಜ್ಯದ ಆರೋಗ್ಯ ವಲಯದ ಏಳಿಗೆ ನಡೆದಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅಭಿಪ್ರಾಯಪಟ್ಟರು.
ಚೆಮ್ನಾಡಿನಲ್ಲಿ ಬುಧವಾರ ನಡೆದ ಟಾಟಾ ಕೋವಿಡ್ ಆಸ್ಪತ್ರೆ ಹಸ್ತಾಂತರ ಸಮಾರಂಭದಲ್ಲಿ ಪ್ರಧಾನ ಭಾಷಣ ನಡೆಸಿದರು.
ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ವಿಭಾಗಗಳ ಯತ್ನಗಳ ಫಲವಾಗಿ ಅನೇಕ ಸುಧಾರಣೆಗಳು ಜಾರಿಗೊಂಡಿವೆ. ಈ ಕಾರಣದಿಂದಲೇ ದೇಶದಲ್ಲಿ ರಾಜ್ಯ ಮುನ್ನಡೆ ಸಾಧಿಸಿದೆ ಎಂದರು.
ಇದೇ ವೇಳೆ ಕೊರೊನಾ ಸೋಂಕಿನ ಬಗ್ಗೆ ರಾಜ್ಯದಲ್ಲಿ ಹೆಚ್ಚುವರಿ ಜಾಗ್ರತೆಯ ಅಗತ್ಯವಿದೆ. ಸಿಹಿಮೂತ್ರ, ಕೊಲೆಸ್ಟ್ರಾಲ್, ಥೈರಾಯ್ಡ್ ಸಹಿತ ರೋಗಿಗಳಿಗೆ ಕೋವಿಡ್ ತುಂಬಾ ಅಡ್ಡಪರಿಣಾಮ ನೀಡುತ್ತಿದೆ. ರಾಜ್ಯದಲ್ಲಿ ನಡೆದಿರುವ 320ಕ್ಕೂ ಅಧಿಕ ಮರಣಗಳಲ್ಲಿ ಶೇ 80 ಮಂದಿ 60ಕ್ಕಿಂತ ಅಧಿಕ ವಯೋಮಾನದವರು. ಹಾಗೆಂದು ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಮರಣ ಸಂಖ್ಯೆ ಕಡಿಮೆ ಎಂದು ನುಡಿದರು.
ಕೋವಿಡ್ ಆಸ್ಪತ್ರೆ ದೊಡ್ಡ ಕೊಡುಗೆ:
ಕಾಸರಗೋಡಿನಲ್ಲಿ ಟಾಟಾ ಸಮೂಹ ಸಂಸ್ಥೆ ನಿರ್ಮಿಸಿರುವ ಕೋವಿಡ್ ಆಸ್ಪತ್ರೆ ಕೇರಳದ ಆರೋಗ್ಯ ವಲಯಕ್ಕೆ ದೊಡ್ಡ ಕೊಡುಗೆಯಾಗಿದೆ. ತಿರುವನಂತಪುರಂನಲ್ಲಿ ನಿರ್ಮಿಸಲಾಗುತ್ತಿರುವ ಅತ್ಯಾಧುನಿಕ ಸಿಮ್ಯುಲಿಸೇಷನ್ ಸೆಂಟರ್ ಗೂ ಟಾಟಾ ಸಂಸ್ಥೆಯ ಬೆಂಬಲವಿದೆ. ಇದನ್ನು ತರಬೇತಿ ಮತ್ತು ಅಧ್ಯಯನ ಕೇಂದ್ರವಾಗಿಯೂ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಪೆÇೀಸ್ಟ್ ಮೋಡೆಲ್ ತಂತ್ರಜ್ಞಾನ ಮೂಲಕ ಈ ಕೇಂದ್ರವನ್ನು ಜಾಗತಿಕ ಮಟ್ಟಕ್ಕೇರಿಸಬಹುದಾಗಿದೆ ಎಂದು ತಿಳಿಸಿದರು.
ಸ್ವಗೃಹಗಳಲ್ಲೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ : ಕಾಸರಗೋಡು ಜಿಲ್ಲೆ ಮಾದರಿ
ಸ್ವಗೃಹಗಳಲ್ಲೇ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಮೂಲಕ ಕಾಸರಗೋಡು ಜಿಲ್ಲೆ ಮಾದರಿಯಾಗಿದೆ ಎಂದು ಆರೋಗ್ಯ ಸಚಿವೆ ಈ ವೇಳೆ ಶ್ಲಾಘಿಸಿದರು. ಈಗಾಗಲೇ 800 ಮಂದಿ ರೋಗಿಗಳು ಈ ರೀತಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಇನ್ನೂ ಅನೇಕ ಮಂದಿ ಚಿಕಿತ್ಸೆ ಪಡೆಯಯುತ್ತಿದ್ದಾರೆ. ಕಾಸರಗೋಡು ಮೆಡಿಕಲ್ ಕಾಲೇಜಿನ ಮೂಲಕ 273 ಮಂದಿಗೆ ನೌಕರಿ ಸೃಷ್ಟಿಯಾಗಿದೆ. ಇದಲ್ಲದೆ ಜಿಲ್ಲೆಯ ಕುಟುಂಬ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು, ಜನರಲ್ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ 200ಕ್ಕೂ ಅಧಿಕ ನೌಕರಿ ಸೃಷ್ಟಿಯಾಗಿದೆ. ಬರಿದಾಗಿರುವ ಹುದ್ದೆಗಳಲ್ಲಿ ನೇಮಕಾತಿಗೆ ಭಗೀರಥ ಯತ್ನವನ್ನು ಆರೋಗ್ಯ ಇಲಾಖೆ ನಡೆಸುತ್ತಿದೆ ಎಂದು ಅವರು ಹೇಳಿದರು.