HEALTH TIPS

ಕಾಸರಗೋಡು ಪತ್ರಕರ್ತರಿಂದ ಎರಡು ಕೊಲೆಪಾತಕ!

     

       ಕಾಸರಗೋಡು: ಕೋವಿಡ್ ಲಾಕ್ ಡೌನ್ ಸಂದರ್ಭ ಗಡಿನಾಡು ಕಾಸರಗೋಡು ಇನ್ನಿಲ್ಲದಂತೆ ಎಲ್ಲಾ ಕ್ಷೇತ್ರಗಳಲ್ಲೂ ವ್ಯಾಪಕ ಸಂಕಷ್ಟವನ್ನು ಅನುಭವಿಸಿತು. ರಾಷ್ಟ್ರದಲ್ಲೇ ಮೊತ್ತಮೊದಲು ಕರೊನಾ ಸದ್ದು ಮಾಡಿದ್ದು ಕಾಸರಗೋಡಿನಿಂದಲೆ. ಆದರೆ ಈ ಮಧ್ಯೆ ಇಲ್ಲಿಯ ಪತ್ರಕರ್ತರಿಂದ ಎರಡು ಕೊನೆಪಾತಕಗಳು ನಡೆದಿದ್ದು ಯಾರ ಗಮನಕ್ಕೂ ಬಂದಿಲ್ಲ. ಬಹುಷಃ ಸುದ್ದಿ ಮಾಡುವ ಪತ್ರಕರ್ತರಿಂದಲೇ ಆಗಿದ್ದರಿಂದಲೇ ಇರಬೇಕು. 

     ಆದರೆ ಇದು ಅಂತಹ ಕೊಲೆಯಲ್ಲ. ಕ್ರಿಯಾತ್ಮಕವಾದ ಕೊಲೆ. ಹಾಗೆಂದು ಗಾಬರಿಗೊಳ್ಳಬೇಕಿಲ್ಲ. ಕಾರಣ ಕಾಸರಗೋಡಿನ  ಪತ್ರಕರ್ತರು ರಚಿಸಿ, ನಿರ್ದೇಶಿಸಿ, ಅಭಿನಯಿಸಿದ ಮಲೆಯಾಳ ಕಿರುಚಿತ್ರ ಲಾಕ್ ಡೌನ್ ಸಂದರ್ಭದ ಕೊಲೆ.!

     ಹೌದು...ಲಾಕ್ ಡೌನ್ ಸಂದರ್ಭ ಕಾಸರಗೋಡಿನ ಒಂದಷ್ಟು ಪತ್ರಕರ್ತರು ಸುಮ್ಮನಿರದೆ ಕಿರುಚಿತ್ರ ನಿರ್ಮಿಸಿದರು.ಅದು ಲಾಕ್ ಡೌನ್ ಕೊಲಪಾತಕಂ ಎಂಬ ಮಲೆಯಾಳ ಭಾಷೆಗಳ ಎರಡು ಕಿರುಚಿತ್ರಗಳು. ಆರಂಭದ ಕಿರುಚಿತ್ರ 9 ನಿಮಿಷ 41 ಸೆಕೆಂಡ್ ಗಳಷ್ಟಿದ್ದು ಕಾಯ್ಚ(ದೃಷ್ಟಿ)ಕ್ರಿಯೆಶನ್ಸ್ ಬ್ಯಾನರ್ ಅಡಿಯಲ್ಲಿ ಪತ್ರಕರ್ತ ಶಾಫಿ ತೆರುವತ್ತ್ ಬರೆದು ನಿರ್ದೇಶಿಸಿದ್ದಾರೆ. 


   ಪತ್ರಕರ್ತನೋರ್ವನ ವಸತಿಗೆ ಇನ್ನೊಬ್ಬ ಪತ್ರಕರ್ತ ಆಗಮಿಸಿದಾಗ ಕೊಠಡಿಯಲ್ಲಿ ರಕ್ತಸಿಕ್ತ ಬಟ್ಟೆಯೊಂದನ್ನು ಕಂಡು ಅಲ್ಲಿಂದ ಕಾಲ್ಕಿತ್ತು ಪೋಲೀಸರಿಗೆ ವಿಷಯ ಮುಟ್ಟಿಸುತ್ತಾನೆ. ಪೋಲೀಸರು ಆಗಮಿಸಿ ವಿಷದ ತನಿಖೆಯಲ್ಲಿ ಕೊನೆಗೂ ಅದು ಬೆಕ್ಕೊಂದು ಮರಿ ಹಾಕಿದಾಗ ಆಗಿರುವ ರಕ್ತಸಿಕ್ತ ಬಟ್ಟೆ ಎನ್ನುವುದು ಬಯಲಾಗುತ್ತದೆ.  

      ಎರಡನೇ ಕಥೆಯಲ್ಲಿ ಪತ್ರಕರ್ತನೋರ್ವನ ಕೊಠಡಿಗೆ ಅಪರಾಧ ಹಿನ್ನೆಲೆಯ ವ್ಯಕ್ತಿಯೋರ್ವ ಗೌಪ್ಯ ಚೀಲವೊಂದನ್ನು ತಂದು ಅಡಗಿಸಿಡುತ್ತಾನೆ. ಅಕ್ಕಪಕ್ಕದ ಇತರರಿಗೂ ಇದು ಗಮನಕ್ಕೆ ಬಂದು ಪೋಲೀಸರಿಗೆ ದೂರಲಾಗುತ್ತದೆ. ಇಲ್ಲಿಯೂ ಎಲ್ಲರನ್ನೂ ಬಂಧಿಸುವ ಪೋಲೀಸರು ಕೊನೆಗೆ ನ್ಯಾಯಾಲಯದಲ್ಲಿ ಅಪರಾಧ ಪ್ರಕರಣ ಬಯಲಾಗುತ್ತದೆ. ಲಾಕ್ ಡೌನ್ ಆರಂಭದಲ್ಲಿ ಕರ್ನಾಟಕದಲ್ಲಿದ್ದ ಅಪರಾಧ ಹಿನ್ನೆಲೆಯ ವ್ಯಕ್ತಿ ಗಡಿಗಳ ಮೂಲಕ ಗ್ರಾಮೀಣ ಪ್ರದೇಶದಿಂದಾಗಿ ಕಾಸರಗೋಡಿಗೆ ಮರಳುತ್ತಿದ್ದಾಗ ಹಳ್ಳಿಯೊಂದರಲ್ಲಿ ಕಾಡು ಬೆಕ್ಕೊಂದು ಆಕ್ರಮಣಕ್ಕೆ ಮುಂದಾದಾಗ ಅದನ್ನು ಮಣಿಸಿ ಗೋಣಿಚೀಲದಲ್ಲಿ ಕಾಸರಗೋಡಿಗೆ ಸಾಗಿಸುತ್ತಾನೆ. ಬಳಿಕ ಮಿತ್ರನಾದ ಪತ್ರಕರ್ತನ ಮನೆಯಲ್ಲಿ ಆ ಚೀಲವನ್ನಿರಿಸಿ ಅದನ್ನು ಏನು ಮಾಡಬೇಕೆಂದು ತೋಚದಿದ್ದು ಕೊನೆಗೆ ಆ ಕಾಡುಬೆಕ್ಕು ಸಾಯುತ್ತದೆ. ಪ್ರಕರಣ ಅಪರಾಧವಾಗಿದ್ದರೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಅಪರಾಧಿಗಳನ್ನು ಬಿಡಲಾಗುತ್ತದೆ. ಇದು 17 ನಿಮಿಷ 6 ಸೆಕೆಂಡ್ ಗಳ ಉತ್ತಮ ಕಿರುಚಿತ್ರವಾಗಿ ಜನಪ್ರಶಂಸೆಪಡೆದಿದೆ.    


      ಖಾಲಿದ್ ಪೊವ್ವಲ್(ಅಜಯನ್), ಶಾಫಿ ತೆರುವತ್(ಎಸ್.ಐ), ಝುಬೈರ್ ಪಳ್ಳಿಕ್ಕಾಲ್(ಇಡಿವೆಟ್ಟು ಝುಬೈರ್), ಅಶ್ರಫ್ ಕೈಂದಾರ್(ಉಸ್ಮಾನ್) ಪಾತ್ರಗಳಲ್ಲಿ ಮೊದಲ ಚಿತ್ರದಲ್ಲಿ ಅಭಿನಯಿಸಿದ್ದರೆ ಒಂದನೇ ಚಿತ್ರದ ಕಥೆಯನ್ನು ಖಾಲಿದ್ ಪೊವ್ವಲ್ ಬರೆದಿದ್ದಾರೆ. ಕ್ಯಾಮರಾದಲ್ಲಿ ಅಭಿದ್ ಕಾಞಂಗಾಡ್ ಸಹಕರಿಸಿದ್ದು, ಕೆಸಿಸಿ ಪ್ಲಸ್ ಕಾಸರಗೋಡು ಸ್ಟುಡಿಯೋದಲ್ಲಿ ಸಂಕಲನ ನಡೆಸಲಾಗಿದೆ. ಎರಡೂ ಕಿರುಚಿತ್ರಕ್ಕೆ ಐ.ಎಸ್ ಖಾಕೀರ್ ಹುಸೈನ್, ರಶೀದ್ ಪರವೂರ್, ವಿನಯಕುಮಾರ್ ನೆರವು ನೀಡಿದ್ದಾರೆ.  ಎರಡನೇ ಚಿತ್ರಕ್ಕೆ ಫಾತಿಮಾ  ಅಬ್ದುಲ್ಲ ಮೊಗ್ರಾಲ್ ಕಥೆ ಬರೆದಿದ್ದು,  ವೈದ್ಯ-ಅಶ್ರಫ್ ಕೈಂದಾರ್, ಅಪರಾಧ ಪತ್ತೆ ವಿಭಾಗದ ಸಿ.ಐ.ಯಾಗಿ ಜೋರ್ಜ್, ಅಜಯ್ ಪಾತ್ರದಲ್ಲಿ ಖಾಲಿದ್ ಪೊವ್ವಲ್, ಕರಡಿ ಅದ್ರಾಮನ ಪಾತ್ರದಲ್ಲಿ-ಅಶೋಕ್ ನೀರ್ಚಾಲು, ಇಡಿವೆಟ್ಟ ಝುಬೈರ್ ಪಾತ್ರದಲ್ಲಿ -ಝುಬೈರ್ ಪಳ್ಳಿಕ್ಕಾವಿಲ್, ರೋಗಿಯಾಗಿ ಹಮೀದ್ ಮೊಗ್ರಾಲ್, ದಾದಿಯ ಪಾತ್ರದಲ್ಲಿ ಸೀತಾ ನುಳ್ಳಿಪ್ಪಾಡಿ ಮನೋಜ್ಞ ಅಭಿನಯ ನೀಡಿದ್ದಾರೆ. ಡಿಟ್ಟಿ ವರ್ಗೀಸ್, ಕುಮಾರ್ ಕಾಸರಗೋಡು, ಕೆ.ವಿ.ಪದ್ಮೇಶ್, ಅಶೋಕ್ ಕರಂದಕ್ಕಾಡ್ ಮೊದಲಾದವರು ನೆರವು ನೀಡಿದ್ದಾರೆ. ಈ ಕಿರುಚಿತ್ರಗಳು ಸರಳ ಸಂಕಲನದ ಮೂಲಕ ಅತ್ಯಪೂರ್ವ ಕಿರುಚಿತ್ರವಾಗಿ ಮೂಡಿಬಂದು ಯೂಟ್ಯೂಬ್ ನಲ್ಲಿ ಈಗಾಗಲೇ ಸಾವಿರಾರು ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries