ಕಾಸರಗೋಡು: ಜಿಲ್ಲಾ ಪ್ರವಾಸೋದ್ಯಮ ಮಂಡಳಿಯು ಚೆಂಗಳ ಪಾಣಾರ್ ಕುಳಂ ನಲ್ಲಿ ನಿರ್ಮಿಸಿರುವ ಕಾಸ್ರೋಡ್ ಕೆಫೆ ಇಂದು(ಸೆ.8) ಮಧ್ಯಾಹ್ನ 3 ಗಂಟೆಗೆ ಉದ್ಘಟನೆಗೊಳ್ಳಲಿದೆ. ವೀಡಿಯೋ ಕಾನ್ ಫೆರೆನ್ಸ್ ಮೂಲಕ ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್ ಉದ್ಘಾಟಿಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮುಖ್ಯ ಅತಿಥಿಯಾಗಿರುವರು. ಶಾಸಕ ಎನ್.ಎ.ನೆಲ್ಲಿಕುನ್ನು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಷಾಹಿನಾ ಸಲೀಂ ಮುಖ್ಯ ಅತಿಥಿಯಾಗಿರುವರು.