ಕಾಸರಗೋಡು: ಮಂಜೇಶ್ವರ ಗ್ರಾಮ ಪಂಚಾಯತಿಯ ಜನಪರ ಯೋಜನೆ ಯಲ್ಲಿ ಅಳವಡಿಸಿ ನಿರ್ಮಾಣ ಪೂರ್ತಿಗೊಳಿಸಿರುವ ಮೆಟೀರಿಯಲ್ ಕಲೆಕ್ಷನ್ ಸೆಂಟರ್(ಎಂ.ಸಿ.ಎಫ್) ನ ಉದ್ಘಾಟನೆ ಜರುಗಿತು.
ಶಾಸಕ ಎಂ.ಸಿ. ಕಮರುದ್ದೀನ್ ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷ ಮುಕ್ತಾರ್ ಎ., ಎ.ಷಂಸೀನಾ, ವಾರ್ಡ್ ಸದಸ್ಯ ಮೂಸಾ, ಸದಸ್ಯರಾದ ಅಬ್ದುಲ್ಲ ಗುಡ್ಡಕೇರಿ, ಇಬ್ರಾಹಿಂ ಫೈಝಲ್, ವಿವಿಧ ಸಮಘಟನಾ ಪ್ರತಿನಿಧಿಗಳು ಉಪಸ್ಥಿತರಿದ್ದರು.ಹಾಯಕ ಅಭಿಯಂತರ ಜಿಯೋ ಆಂಟನಿ ವರದಿ ವಾಚಿಸಿದರು. ಕಾರ್ಯದರ್ಶಿ ಅಶ್ರಫ್ ಎನ್.ಬಿ. ಸ್ವಾಗತಿಸಿ, ಉಪಾಧ್ಯಕ್ಷೆ ಶಶಿಕಲಾ ಹರೀಶ್ ವಂದಿಸಿದರು.