ಉಪ್ಪಳ: ಮಾಜಿ ರಾಷ್ಟ್ರಪತಿ ಭಾರತರತ್ನ ಪ್ರಣವ್ ಮುಖರ್ಜಿಯವರ ನಿಧನಕ್ಕೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಶಿಕ್ಷಕರಾಗಿ ಭಾವಿ ಪ್ರಜೆಗಳನ್ನು ಬೆಳೆಸುತ್ತಿದ್ದ ಶ್ರೀಯುತರು ರಾಜಕಾರಣಕ್ಕಿಳಿದರೂ ಸಜ್ಜನ, ನೇರ ನಡೆ ನುಡಿಯವರಾಗಿ ಪಕ್ಷಾತೀತರಾಗಿದ್ದ ಇವರು ಸರ್ವಪಕ್ಷಗಳಲ್ಲೂ ಮಿತ್ರರನ್ನು ಹೊಂದಿದ್ದರು. ಅಗಲಿದ ಪ್ರಣವ್ ಮುಖರ್ಜಿಯವರ ಆತ್ಮಕ್ಕೆ ಪರಮಪದ ಪ್ರಾಪ್ತಿಯಾಗಲಿ ಎಂದು ಶ್ರೀಗಳವರು ಹಾರೈಸಿದ್ದಾರೆ.