ಬೆಂಗಳೂರು: ಕನ್ನಡದ ಪ್ರಸಿದ್ದ ಲೇಖಕ ಚಿದಾನಂದ ಸಾಲಿ ಹಾಗೂ ಶ್ರೀದೇವಿ ಕೆರೆಮನೆ ಅವರುಗೆ ಈ ಬಾರಿಯ "ಶೀವಿಜಯ ಸಾಹಿತ್ಯ ಪ್ರಶಸ್ತಿ" ಸಂದಿದೆ.
ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಮೃದ್ಧ, ಮೌಲಿಕವಾಗಿ ಕೊಡುಗೆ ನೀಡಿದ 45 ವರ್ಷದೊಳಗಿನ ಯುವ ಸಾಹಿತಿಗಳಿಗೆ ಈ ಪ್ರಶಸ್ತಿ ನೀಡುತ್ತದೆ.
ಪ್ರಶಸ್ತಿ ತಲಾ 60 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆಯ ಆಯ್ಕೆ ಸಮಿತಿ ಈ ಪ್ರಶಸ್ತಿಗಾಗಿ ಸಾಹಿತಿಗಳ ಆಯ್ಕೆ ನಡೆಸಿತು.