HEALTH TIPS

ಐ.ಎಲ್.ಜಿ.ಎಂ.ಎಸ್. ಇ-ಗವರ್ನೆನ್ಸ್ ವಲಯದಲ್ಲಿ ರಾಜ್ಯ ನಡೆಸಿದ್ದು ನೂತನ ಹೆಜ್ಜೆಗಾರಿಕೆ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

           ಕಾಸರಗೋಡು: ಐ.ಎಲ್.ಜಿ.ಎಂ.ಎಸ್. ಇ-ಗವರ್ನೆನ್ಸ್ ವಲಯದಲ್ಲಿ ರಾಜ್ಯ ನೂತನ ಹೆಜ್ಜೆಗಾರಿಕೆ ನಡೆಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. 

           ರಾಜ್ಯ ಸರಕಾರದ ನೂರು ದಿನಗಳ ಕ್ರಿಯಾ ಯೋಜನೆಗಳ ಅಂಗವಾಗಿ 150 ಗ್ರಾಮ ಪಂಚಾಯತ್ ಗಳಲ್ಲಿ ಜಾರಿಗೊಳಿಸುವ ಇಂಟಗ್ರೇಟೆಡ್ ಲೋಕಲ್ ಗವರ್ನೆನ್ಸ್ ಮೆನೇಜ್ ಮೆಂಟ್ ಸಿಸ್ಟಂ(ಐ.ಎಲ್.ಜಿ.ಎಂ.ಎಸ್.) ಉದ್ಘಾಟಿಸಿ ಅವರು ಮಾತನಾಡಿದರು. 

        ತಿರುವನಂತಪುರ ಜಿಲ್ಲೆಯ ಚೆಮ್ಮರುತ್ತಿ ಗ್ರಾಮ ಪಂಚಾಯತ್ ನಲ್ಲಿ ಪ್ರಯೋಗಾರ್ಥವಾಗಿ ಯಶಸ್ವಿಯಾದ ಸಾಫ್ಟ್ ವೇರ್ ಮೊದಲ ಹಂತದಲ್ಲಿ 150 ಗ್ರಾಮ ಪಂಚಾಯತ್ ಗಳಲ್ಲಿ ಜಾರಿಗೊಳಿಸಲಾಗುವುದು. ನಂತರ ರಾಜ್ಯದ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಿಗೂ ವಿಸ್ತರಿಸಲಾಗುವುದು. ಎಲ್ಲ ವಿಭಾಗದ ಜನತೆಗೂ ಸರಕಾರಿ ಸೇವೆ ಯಥಾಸಮಯಕ್ಕೆ ಲಭ್ಯವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕಟಿಬದ್ಧವಾಗಿರುವುದನ್ನು ಐ.ಎಲ್.ಜಿ.ಎಸ್.ಎಸ್. ಯೋಜನೆ ಸಾಬೀತುಪಡಿಸಲಿದೆ. ಗ್ರಾಮ ಪಂಚಾಯತ್ ಗಳಿಂದ ಲಭಿಸುವ 200 ಕ್ಕೂ ಅಧಿಕ ಸೇವೆಗಳ ಅರ್ಜಿಗಳು, ದೂರುಗಳು, ಅಪೀಲುಗಳು, ಸಲಹೆಗಳು ಆನ್ ಲೈನ್ ಮೂಲಕ ಸಲ್ಲಿಸಬಹುದಾದ ಸೌಲಭ್ಯ ಈ ಮೂಲಕ ಸಾಧ್ಯವಾಗಲಿದೆ. ಸ್ಥಳೀಯಾಡಳಿತ ಸಂಸ್ಥಗಳ ಸೇವೆಗಳು ಹೆಚ್ಚುವರಿ 

ಸೇವೆಗಳನ್ನು ಸುಧಾರಿತಗೊಳಿಸುವ ನಿಟ್ಟಿನಲ್ಲಿ ಈ ವೆಬ್ ಕೇಂದ್ರತ ಸೌಲಭ್ಯ ಸಹಕಾರಿಯಾಗಲಿದೆ. ಓಪನ್ ಸೋರ್ಸ್ ತಾಂತ್ರಿಕತೆ ಬಳಸಿರುವ ಸೌಲಭ್ಯ ವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಲೈಸನ್ಸ್ ಪೀ ರೂಪದಲ್ಲಿ ಲಭಿಸುವ ಮೊಬಲಗು ಹೊರತುಗೊಳ್ಳಲಿದೆ. ಜೊತೆಗೆ ಮಾಹಿತಿಗಳೂ ಸುರಕ್ಷಿತವಾಗಲಿವೆ ಎಂದರು. 

        1957ರ ಅಧಿಕಾರ ವಿಕೇಂದ್ರೀಕರಣಕ್ಕಿರುವ ಸಮಗ್ರ ನಿಯಮದಿಂದ  ಜನಪರ ಯೋಜನೆ ವರೆಗಿನ ದೇಶಕ್ಕೆ ಮಾದರಿಯಾಗಬಲ್ಲ ಚಟುವಟಿಕೆಗಳು ಇಂದು ರಾಜ್ಯದಲ್ಲಿ ನಡೆದುಬರುತ್ತಿದೆ. ಇದರ ಮುಂದುವರಿಕೆಯಾಗಿ ಸ್ಥಳೀಯಾಡಳಿತ ಸಂಸ್ಥೆಗಳನ್ನು ಜನಸೌಹಾರ್ದಗೊಳಿಸುವ, ಸೇವೆಗಳನ್ನು ಸುಧಾರಿತಗೊಳಿಸುವ  ಕ್ರಮ ಕೈಗೊಳ್ಳಲಾಗಿದೆ. ಪ್ರಂಟ್ ಆಪೀಸ್ ಆಶಯ ಗ್ರಾಮ ಪಂಚಾಯತ್ ಗಳ ಸೇವೆಗಳಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿವೆ. ನಂತರ ಹಲವು ಹಂತಗಳಲ್ಲಿ ಇನ್ ಫಾರ್ಮೇಷನ್ ಕೇರಳ ಮಿಷನ್ ಗ್ರಾಮ ಪಂಚಾಯತ್ ಗಳ ಇ-ನೆಟ್ ವರ್ಕ್ ಗಳ ಅಂಗವಾಗುವತ್ತ ಸಾಗಿವೆ. ಇದು ಹೆಚ್ಚುವರಿ ಫಲದಾಯಕವಾಗುವ ನಿಟ್ಟಿನಲ್ಲಿ ನೂತನ ಸೌಲಭ್ಯ ಒದಗಿಸಲಾಗುತ್ತಿದೆ. ಕೋವಿಡ್ ವಿರುದ್ಧ ಮಹಾ ಪ್ರತಿರೋಧ ನಡೆಸುವ ನಿಟ್ಟಿನಲ್ಲಿ ಜನಪರ ಯೋಜನೆ ಪ್ರಕ್ರಿಯೆ ಸುಧಾರಿತಗೊಳಿಸಲು ರಾಜ್ಯ ಸರಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. 

      ಸಮಾರಂಭದಲ್ಲಿ ಸ್ಥಳೀಯಾಡಳಿತ ಸಚಿವ ಎ.ಸಿ.ಮೊಯ್ದೀನ್ ಅಧ್ಯಕ್ಷತೆ ವಹಿಸಿದ್ದರು. ಜನಪರ ಯೋಜನೆಯ 256ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯ ಹೆಚ್ಚುವರಿ ಸಾಧನೆಯೊಂದಿಗೆ ಮುನ್ನಡೆ ಸಾಧಿಸುತ್ತಿದೆ ಎಂದು ಅವರು ತಿಳಿಸಿದರು.

       ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ರಾಜ್ಯ ಸದಾ ದೇಶಕ್ಕೆ ಮಾದರಿಯಾಗಿದೆ. ಐ.ಎಲ್.ಜಿ.ಎಂ.ಎಸ್. ಯೋಜನೆ  ಜಾರಿ ಮೂಲಕ ರಾಜ್ಯ ಸರಕಾರಿ ಸೇವೆಗಳು ಸುಲಭದಲ್ಲಿ ಜನತೆಗೆ ಲಭ್ಯವಾಗಲಿವೆ. ಜೊತೆಗೆ ಸ್ಥಳೀಯಾಡಳಿತ ಸಂಸ್ಥೆಗಳ ಚಟುವಟಿಕೆಗಳು ಸುಧಾರಿತಗೊಳ್ಳಲಿವೆ ಎಂದು ನುಡಿದರು.  

    ಜಿಲ್ಲಾ ಪಂಚಾಯತ್ ಅಧ್ಯಕ್ಷರ ಛೇಂಬರ್ ಅಧ್ಯಕ್ಷ ವಿ.ಕೆ.ಮಧು, ಬ್ಲೋಕ್ ಪಂಚಾಯತ್ ಅಧ್ಯಕ್ಷರ ಅಸೋಸಿಯೆಶನ್ ಅಧ್ಯಕ್ಷ ನ್ಯಾಯವಾದಿ ತುಳಸಿ ಭಾಯಿ, ಮೇಯರ್ ಕೌನ್ಸಿಲ್ ಅಧ್ಯಕ್ಷ ತೋಟತ್ತಿಲ್ ರವೀಂದ್ರನ್, ಛೇಂಬರ್ ಆಫ್ ಮುನಿಸಿಪಲ್ ಛೇರ್ ಮೆನ್ ಅಧ್ಯಕ್ಷ ವಿ.ವಿ.ರಮೇಶನ್, ಎಸ್.ಆರ್.ಜಿ. ಅಧ್ಯಕ್ಷ ಕೆ.ಎಲ್.ಹರಿಲಾಲ್, ವಿವಿಧ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ವಿವಿಧ ಗ್ರಾಮಪಂಚಾಯತ್ ಕೇಂದ್ರಗಳಲ್ಲಿ ಈ ಸಂಬಂಧ ನಡೆದ ಸಮಾರಂಭಗಳಲ್ಲಿ ಆಯಾ ಸಂಸ್ಥೆಗಳ ಅಧ್ಯಕ್ಷರು ನೇತೃತ್ವ ವಹಿಸಿದ್ದರು. ಸದಸ್ಯರು, ಸಿಬ್ಬಂದಿ ಮೊದಲಾದವರು ಉಪಸ್ಥಿತರಿದ್ದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries