ಕೊರೋನಾಸ್ತ್ರ ಯಕ್ಷಗಾನ ಬಿಡುಗಡೆ
ಬದಿಯಡ್ಕ: ಪಡುಮಲೆ ಯಕ್ಷಾಭಿಮಾನಿ ಬಳಗ ಸಾದರಪಡಿಸುವ ಕರ್ನಾಟಕ ಜಾನಪದ ಲೋಕ ಪ್ರಶಸ್ತಿ ಪುರಸ್ಕøತ ಯಕ್ಷಗುರು ಜಯರಾಮ ಪಾಟಾಳಿ ಪಡುಮಲೆ ರಚಿಸಿ ನಿರ್ದೇಶಿಸಿರುವ ಪ್ರಸ್ತುತ ಈ ಕಾಲಘಟ್ಟದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆ ಬಗ್ಗೆ ಮಾಹಿತಿಯನ್ನೊಳಗೊಂಡ ಕೊರೋನಾಸ್ತ್ರ ಎಂಬ ಯಕ್ಷಗಾನವು ಕಿಳಿಂಗಾರು ಸಾಯಿ ಮಂದಿರದಲ್ಲಿ ಬಿಡುಗಡೆಗೊಂಡಿತು.
ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ, ಬದಿಯಡ್ಕ ಗ್ರಾ.ಪಂ.ಅಧ್ಯಕ್ಷ ಕೆ.ಎನ್. ಕೃಷ್ಣಭಟ್ ಕಿಳಿಂಗಾರು, ನ್ಯಾಯವಾದಿ. ಪ್ರಕಾಶ್ ಅಮ್ಮಣ್ಣಾಯ, ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಪರಿಷತ್ತಿನ ಅಧ್ಯಕ್ಷ ಎಂ.ಶಂಕರ್ ರೈ ಮಾಸ್ತರ್, ಬ್ರಹ್ಮಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಯ ಶ್ರೀನಿಲಯ ಕೊಲ್ಲಂಗಾನ, ಯಕ್ಷ ಪೋಷಕ ವೈ. ರಾಘವೇಂದ್ರ ಪ್ರಸಾದ್, ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ, ಬಾಲಕೃಷ್ಣ ಅಚ್ಚಾಯಿ, ಕೃಷ್ಣ ಬದಿಯಡ್ಕ, ರಾಜಗೋಪಾಲ, ಮಂಜುನಾಥ ಮಾನ್ಯ, ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಮೂಲಡ್ಕ ನಾರಾಯಣ ಸ್ವಾಗತಿಸಿ, ಸುಧೀರ್ ಕುಮಾರ್ ರೈ ವಂದಿಸಿದರು. ನಾಳೆ(ಸೆ. 6. ರಂದು) ಸಂಜೆ 6 ಗಂಟೆಗೆ ಫೋಕ್ಸ್*24 ಲೈವ್ ಯೂಟ್ಯೂಬ್ ಚಾನೆಲ್‍ನಲ್ಲಿ ಯಕ್ಷಗಾನ ಪ್ರಸಾರಗೊಳ್ಳಲಿದೆ.