ಪೆರ್ಲ: ಮದ್ಯದ ನಶೆಯೇರಿದ ಪತಿ ಪತ್ನಿಯ ತಲೆಗೆ ಬಡಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ಪೆರ್ಲ ಸನಿಹದ ಅಜಿಲಡ್ಕದಲ್ಲಿ ಇಂದು ಸಂಜೆ ನಡೆದಿದೆ.
ಕಜಂಪಾಡಿ ನಿವಾಸಿ, ಸುಶೀಲಾ(38)ಮೃತಪಟ್ಟ ಗೃಹಿಣಿ. ಪ್ರಕರಣಕ್ಕೆ ಸಂಬಂಧಿಸಿ ಈಕೆಯ ಪತಿ ಜನಾರ್ದನ(45)ಎಂಬಾತನನ್ನು ಬದಿಯಡ್ಕ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಣ್ಮಕಜೆ ಪಂಚಾಯಿತಿಯ ಕಜಂಪಾಡಿ ನಿವಾಸಿಗಳಾಗಿರುವ ದಂಪತಿ ಅಜಿಲಡ್ಕದಲ್ಲಿ ಕೆಲವು ವರ್ಷಗಳಿಂದ ಮನೆ ನಿರ್ಮಿಸಿ ವಾಸಿಸುತ್ತಿದ್ದು, ಇಬ್ಬರೂ ಕೂಲಿ ಕೆಲಸ ನಡೆಸುತ್ತಿದ್ದರು. ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಸೋಮವಾರ ಸಂಜೆ ಮದ್ಯಸೇವಿಸಿ ಆಗಮಿಸಿದ ಜನಾರ್ದನ ಹಾಗೂ ಪತ್ನಿ ಸುಶೀಲಾ ಅವರ ಮಧ್ಯೆ ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ಜಗಳ ನಡೆದಿದ್ದು, ಪರಿಣಾಮ ಪತಿ ತಲೆಗೆ ಹೊಡೆದಿದ್ದು, ಸುಶೀಲಾ ಸ್ಥಳದಲ್ಲೇ ಮೃತಪಟ್ಟರು. ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದ್ದು, ಕೋವಿಡ್ ತಪಾಸಣೆ ನಂತರ ಶವಮಹಜರು ನಡೆಯಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಬದಿಯಡ್ಕ ಪೋಲೀಸರು ವಿಸ್ಕøತ ತನಿಖೆ ನಡೆಸುತ್ತಿರುವರು.