ಮಂಗಳೂರು: ಪಡುಕುತ್ಯಾರಿನಲ್ಲಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪೀಠ ಕಟಪಾಡಿಯ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಶ್ರೀ ಮಹಾಸ್ವಾಮಿಗಳ ಶಾರ್ವರಿ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯು ಜರಗುತ್ತಿದ್ದು, ಈ ಸಂದರ್ಭದಲ್ಲಿ ಮಂಗಳೂರಿನ ಕಲಾವಿದೆಯೋರ್ವೆ ತನ್ನ ಕಲಾತ್ಮಕ ಕೈಚಳಕದಿಂದ ಪೆನ್ಸಿಲ್ ಡ್ರಾಯಿಂಗ್ ಮೂಲಕ ಗುರುಗಳ ಚಿತ್ರಪಟಲ ರಚಿಸಿ ಅನಾವರಣಗೊಳಿಸಿರುವುದು ವಿಶೇಷವಾಗಿದೆ.
ದ.ಕ.ಜಿಲ್ಲೆಯ ಮಂಗಳೂರಿನ ಬಜಾಲ್ ನಿವಾಸಿಯಾದ ಶಿವರಾಯ ಆಚಾರ್ಯ-ಸುಮಂಗಲಾ ದಂಪತಿಗಳ ಪುತ್ರಿಯಾದ ಸುಶ್ಮಿತಾ ಎಸ್.ಎಂಬ ಯುವತಿ ಈ ರೀತಿ ಶ್ರೀ ಕಾಳ ಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಚಿತ್ರವನ್ನು ಪೆನ್ಸಿಲ್ ಕಲೆಯ ಮೂಲಕ ಪಡಿ ಮೂಡಿಸಿ ನೋಡುಗರ ಮೂಕ ವಿಸ್ಮಿತಗೊಳಿಸಿದ ಯುವ ಚಿತ್ರ ಕಲಾವಿದೆ.
ಭಿ-ಪಾರ್ಮ ಪದವಿ ವಿದ್ಯಾರ್ಥಿನಿಯಾದ ಸುಶ್ಮಿತಾ ಎಸ್. ಪೆನ್ಸಿಲ್ ಡ್ರಾಯಿಂಗ್,ವರ್ಣ ಚಿತ್ರ,ರಂಗೋಲಿ ರಚನೆ ಮೆಹಂದಿ ರಚನೆಯಲ್ಲಿ ಅಭಿರುಚಿ ಹೊಂದಿದ್ದಾಳೆ.
ಈ ಹಿಂದೆ ಹಲವಾರು ಪೈಟಿಂಗ್ಸ್ ,ಪೆನ್ಸಿಲ್ ಡ್ರಾಯಿಂಗ್ ರಚಿಸಿದ್ದರೂ ಕೂಡಾ ವ್ಯಕ್ತಿ ಚಿತ್ರ ರಚನೆಯಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಮಹಾಸ್ವಾಮಿಗಳ ಚಿತ್ರ ರಚಿಸಿ ಅವರ ಚಾತುರ್ಮಾಸ್ಯ ಸಂದರ್ಭದಲ್ಲಿ ತನ್ನ ತಂದೆ ತಾಯಿ ಬಂಧುಗಳ ಸಮ್ಮುಖದಲ್ಲಿ ಗುರುಗಳಿಗೆ ಸಮರ್ಪಿಸಿರುವುದು ಬದುಕಿನ ಅತ್ಯಂತ ಸ್ಮರಣೀಯ ಕ್ಷಣವಾಗಿದೆ ಎಂದು ಸುಶ್ಮಿತಾ ತನ್ನ ಸಂಭ್ರಮವನ್ನು ಹಂಚಿಕೊಂಡರು.
ತಮ್ಮ ಚಿತ್ರಪಟಲವನ್ನು ಪೆನ್ಸಿಲ್ ಡ್ರಾಯಿಂಗ್ ಮೂಲಕ ರಚಿಸಿದ ಸುಶ್ಮಿತಾ ಅವರ ಕಲಾ ಸಾಧನೆಯನ್ನು ಶ್ರೀ ಕಾಳ ಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳವರು ಸಂಸ್ಥಾನದ ವತಿಯಿಂದ ಶಾಲು ಹೊದಿಸಿ ಪ್ರತಿಭಾ ಪೆÇ್ರೀತ್ಸಾಹ ನೀಡಿ ಹರಸಿದರು
ತನ್ನ ಕರದಲ್ಲಿ ಕಲಾ ವಿಸ್ಮಯತೆ ಸೃಷ್ಟಿಸುವ ಸುಶ್ಮಿತಾ ಅವರ ಈ ಎಲ್ಲಾ ಸಾಧನೆಗಳಿಗೆ ಮನೆಯಲ್ಲಿ ತಂದೆ ತಾಯಿ ಅಲ್ಲದೆ ಈಕೆಯ ಸಹೋದರ ಸುರಕ್ಷಿತ್ ಆಚಾರ್ಯ ಪೆÇ್ರೀತ್ಸಾಹ ಸದಾ ನೀಡುತ್ತಿದ್ದಾರೆ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿದರು.