ಕಾಸರಗೋಡು: ಕಣ್ಣೂರು ವಿವಿಯೊಂದಿಗೆ ಅಫಿಲಿಯೇಟ್ ನಡೆಸಿರುವ ಮಂಜೇಶ್ವರ, ಚೀಮೇನಿ, ಪಯ್ಯನ್ನೂರು, ಪಟ್ಟುವಂ, ಕೂತ್ತುಪರಂಬ, ಮಾನಂತವಾಡಿ ಅಪ್ಲೈಡ್ ಸಯನ್ಸ್ ಕಾಲೇಜುಗಳಿಗೆ 2020-21 ಶೈಕ್ಷಣಿಕ ವರ್ಷದಲ್ಲಿ ಸ್ನಾತಕೋತ್ತರ ಪದವಿ ತರಗತಿಗಳಿಗೆ ಆನ್ ಲೈನ್, ಆಫ್ ಲೈನ್ ರೂಪದಲ್ಲಿ ಪ್ರವೇಶಾತಿಗೆ ಅರ್ಜಿ ಕೋರಲಾಗಿದೆ.http://ihrd.kerala.gov.in/
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವೇಳೆ ಅರ್ಜಿ ಫಾರಂ ಭರ್ತಿಗೊಳಿಸಿ ಪ್ರವೇಶಾತಿ ಬಯಸುವ ಕಾಲೇಜಿನ ಪ್ರಾಂಶುಪಾಲರ ಹೆಸರಲ್ಲಿ ಬದಲಿಸಬಹುದಾದ 500 ರೂ.ನ ಡಿಡಿ ಸಹಿತ( ಪರಿಶಿಷ್ಟ ಜಾತಿ-ಪಂಗಡದವರಿಗೆ 200 ರೂ.) ಸಂಬಂಧಪಟ್ಟ ಕಾಲೇಜಿಗೆ ಸಲ್ಲಿಸಬೇಕು. ಕಾಲೇಜಿಗೆ ನೇರವಾಗಿ ಶುಲ್ಕ ಪಾವತಿಸಬಹುದಾಗಿದೆ. ಮಾಹಿತಿಗೆ : www.ihrd.ac.in ದೂರವಾಣಿ ಸಂಖ್ಯೆ: ಮಂಜೇಶ್ವರ-04998215615, 8547005058., ಚೀಮೇನಿ-04672257541, 8547005051, ಪಯ್ಯನ್ನೂರು-04972877600, 8547005059, ಕೂತ್ತುಪರಂಬ-04602362123, 8547005052, ಪಟ್ಟುವಂ-04602206050, 8547005048, ಮಾನಂತವಾಡಿ-04935245484, 8547005060.