ಕುಂಬಳೆ: ಕಾಸರಗೋಡಿನ ಬಹುಮುಖಿ ಕಲಾವಿದ ಹರಿದಾಸ ಜಯಾನಂದಕುಮಾರ ಹೊಸದುರ್ಗ ಅವರ ನಿಸ್ಪೃಹ ಬದುಕನ್ನು ಆದರಿಸಿ ಪತ್ರಕರ್ತ,ಲೇಖಕ ರವಿ ನಾಯ್ಕಾಪು ಅವರು ಬರೆದು ಸುಬ್ಬಯಕಟ್ಟೆ ಕೈರಳಿ ಪ್ರಕಾಶನ ಪ್ರಕಟಿಸಿದ ಸಾಹಿತ್ತಿಕ ಗ್ರಂಥ "ಗಾನಗಂಗೆ" ಕೃತಿಯ ಲೋಕಾರ್ಪಣೆ ಬೆಂಗಳೂರಲ್ಲಿ ಸೋಮವಾರ ಜರಗಿತು.
ಸೋಮವಾರ ಪೂರ್ವಾಹ್ನ ಕರ್ನಾಟಕ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ಮಾತನಾಡಿದ ಅವರು ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಲೇಖಕ ಹಾಗೂ ಪ್ರಕಾಶಕರ ಪ್ರಯತ್ನವನ್ನು ಸ್ಲಾಘಿಸಿದರು. ಸದ್ರಿ ಕೃತಿಯು ಕನ್ನಡ ಸಾರಸ್ವತ ಲೋಕಕ್ಕೆ ಅಮೂಲ್ಯ ನಿಧಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಪ್ರಕಾಶಕ ಎ.ಆರ್. ಸುಬ್ಬಯಕಟ್ಟೆ, ಲೇಖಕ ರವಿ ನಾಯ್ಕಾಪು, ಸಾಹಿತ್ಯ ಸಂಘಟಕ ಪಮ್ಮಿ ಕೊಡಿಯಾಲಬೈಲು, ಹರಿದಾಸ ಜಯಾನಂದಕುಮಾರ, ಅಖಿಲೇಶ್ ನಗುಮುಗಂ, ಝಡ್ ಎ ಕಯ್ಯಾರ್, ಅಕ್ಷಯ್ ಮುಂತಾದವರು ಉಪಸ್ಥಿತರಿದ್ದರು.