ಕಾಸರಗೋಡು: ಕೋವಿಡ್‍ಗೆ ಸಂಬಂಧಿಸಿದ ಸಾವುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುವಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 'ದಿ ಎಂಡ್ ಆಫ್ ರಿಮೈಂಡರ್' ಕಿರುಚಿತ್ರದ ಚಿತ್ರೀಕರಣ ಚೆಂಗಳದಲ್ಲಿ ಪ್ರಾರಂಭವಾಗಿದೆ.
ಆರೋಗ್ಯ ಇಲಾಖೆ ಮತ್ತು ಚೆಂಗಳ ಗ್ರಾಮ ಪಂಚಾಯತಿ 7 ನೇ ವಾರ್ಡ್ ವಿಜಿಲೆನ್ಸ್ ಸಮಿತಿಯ ಸಹಯೋಗದೊಂದಿಗೆ, ಪೈಕದ ಯುವಕರ ಗುಂಪು ಫರಿಸ್ತಾ ಕ್ರಿಯೆಷನ್ಸ್ ಬ್ಯಾನರ್ ಅಡಿಯಲ್ಲಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪೈಕ ಬಾಲಡ್ಕದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ವರ್ಣಚಿತ್ರಕಾರ ಪಿ.ಎಸ್.ಪುಣಿಚಿತ್ತಾಯ ಸ್ವಿಚ್ ಆನ್ ಮಾಡಿ ಚಾಲನೆ ನೀಡಿದರು.
ಆರೋಗ್ಯ ಮೇಲ್ವಿಚಾರಕ ಬಿ ಅಶ್ರಫ್ ಚಿತ್ರದ ಪೆÇೀಸ್ಟರ್ ಅನ್ನು ಪಿ.ಎಸ್.ಪುಣಿಂಚಿತಾಯ ಅವರಿಗೆ ಹಸ್ತಾಂತರಿಸಿದರು. ಶಫಿ ಪೈಕ ನಿರ್ದೇಶನ ನೀಡುತ್ತಿದ್ದು ಬಿ.ಸಿ.ಕುಮಾರನ್ ಕಥೆ ಬರೆದಿದ್ದಾರೆ. ಮನಾಫ್ ಪೈಕ, ರಹೀಂ ಪೈಕ ಮತ್ತು ರಾಶಿ ಪರಪ್ಪಳ್ಳಿ ಅವರು ಕ್ಯಾಮೆರಾ ನಿರ್ವಹಿಸಲಿದ್ದಾರೆ. ಚಿತ್ರ ಅಕ್ಟೋಬರ್ 10 ರಂದು ಬಿಡುಗಡೆಯಾಗಲಿದೆ. ಚೆಂಗಳ ಆರೋಗ್ಯ ನಿರೀಕ್ಷಕ ಕೆ.ಎಸ್.ರಾಜೇಶ್, ಕಿರಿಯ ಆರೋಗ್ಯ ನಿರೀಕ್ಷಕ ಹಸಿಫ್ ಸುಲೈಮಾನ್, ಕಿರಿಯ ಸಾರ್ವಜನಿಕ ಆರೋಗ್ಯ ದಾದಿ ಅಶಾಮೋಲ್, ವಾರ್ಡ್ ಹೆಡ್ ನೋಡಲ್ ಅಧಿಕಾರಿ ರತೀಶ್ ನೆಕ್ರಾಜೆ, ಶಫಿ ಚೂರಿಪ್ಪಳ್ಳ, ಬಿ.ಆರ್.ಪೆÇೀಲಪನ್, ಬಿ ಮೊಯ್ದೀನ್ ಕುಂಞÂ, ಒ.ಪಿ.ಹನೀಫ್, ಬಿ.ಎ.ಹಮೀದ್, ಕುಮಾರನ್, ನಿತ್ಯನ್ ನೆಲ್ಲಿತ್ತಲ ಮತ್ತು ಬಿ.ಕೆ.ಬಶೀರ್ ಪೈಕ ಮಾತನಾಡಿದರು.