ಕುಂಬಳೆ: ಕರ್ನಾಟಕಕ್ಕೆ ಕೇರಳದಿಂದ ಹೋಗುವ ಎಲ್ಲಾ ಗಡಿ ತೆರೆದು ಮುಕ್ತ ಅಂತರಾಜ್ಯ ಪ್ರಯಾಣಕ್ಕೆ ಕೇರಳ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮುಕ್ತ ಸಂಚಾರಕ್ಕಾಗಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಅದರ ಮೇಲಿನ ವಿಚಾರಣೆ ನಡೆಸಿ ಕೇರಳ ಹೈಕೋರ್ಟ್ ಈ ಮಹತ್ವದ ತೀರ್ಪು ನೀಡಿದೆ.
ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮಧ್ಯೆ ಕೊರೋನ ಹಿನ್ನೆಲೆಯಲ್ಲಿ ಎಲ್ಲಾ ಗಡಿಗಳು ಮುಚ್ಚಲ್ಪಟ್ಟಿದ್ದವು. ಅನ್ ಲಾಕ್- 3 ರ ಬಳಿಕ ಕೇರಳ ಸರ್ಕಾರ ಹಾಗೂ ಕಾಸರಗೋಡು ಜಿಲ್ಲಾಡಳಿತ ಅಂತಾರಾಜ್ಯ ಮುಕ್ತ ಸಂಚಾರಕ್ಕೆ ಅನುಮತಿ ಕೊಟ್ಟಿರಲಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ಕಾಸರಗೋಡಿನಲ್ಲಿ ಕೊರೋನ ಹೆಚ್ಚಿದ್ದ ಹಿನ್ನೆಲೆಯಲ್ಲಿ ಕರ್ನಾಟಕವು ಮೊದಲಿಗೆ ತನ್ನೆಲ್ಲ ಕೇರಳದ ಗಡಿಗಳನ್ನು ಮಣ್ಣು ಹಾಕಿ ಮುಚ್ಚಿತ್ತು. ಆದರೆ ನಂತರ ಪಾಸ್ ಮೂಲಕ ಕಾಸರಗೋಡಿನವರು ಬರಲು ಅನುಮತಿ ನೀಡಿತ್ತು. ಆದರೆ ಏಕಾಏಕಿ ಜುಲೈ 6 ರಿಂದ ಕಾಸರಗೋಡು ಜಿಲ್ಲಾಡಳಿತ ಎಲ್ಲಾ ಪಾಸ್ ವ್ಯವಸ್ಥೆ ನಿಲ್ಲಿಸಿತ್ತು. ಮಂಗಳೂರಿಗೆ ಹೋಗುವ ಉದ್ಯೋಗಿಗಳು , ವಿದ್ಯಾರ್ಥಿಗಳು ಹಾಗೂ ರೋಗಿಗಳು ಇದರಿಂದ ಸಾಕಷ್ಟು ತೊಂದರೆಗೆ ಒಳಗಾಗಿದ್ದರು. ಇದರಿಂದಾಗಿ ಕಾಸರಗೋಡು ಜಿಲ್ಲಾಡಳಿತ ಈ ನಿರ್ಧಾರ ವ್ಯಾಪಕವಾದ ಜನಾಕ್ರೋಶಕ್ಕೆ ಕಾರಣವಾಗಿತ್ತು.
ಹೋರಾಟದ ಹಾದಿಗಳು: ಕರ್ನಾಟಕ ಮೊದಲಿಗೆ ಗಡಿ ಮುಚ್ಚಿದ ನಂತರ ಕಾಸರಗೋಡು ಜಿಲ್ಲೆಯಿಂದ ಮಂಗಳೂರು ತೆರಳುವವರು ಸಹಯಾತ್ರಿ ಎಂಬ ತಂಡ ಕಟ್ಟಿ ಕಾಸರಗೋಡು ಜಿಲ್ಲೆಯ ಜನರ ಸಮಸ್ಯೆಗೆ ಧ್ವನಿಯಾಗಿತ್ತು. ಸಹಯಾತ್ರಿ ತಂಡವು ಸಾಮಾಜಿಕ ತಾಣಗಳ ಮೂಲಕ ಕಾಸರಗೋಡು ಜಿಲ್ಲಾಧಿಕಾರಿ ಶ್ರೀ ಸಜಿತ್ ಬಾಬು ಕಾಸರಗೋಡು ಉಸ್ತುವಾರಿ ಸಚಿವ ಇ. ಚಂದ್ರಶೇಖರ್, ಕೇರಳ ರಾಜ್ಯಪಾಲರು, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಅಜಯ್ ಭಲ್ಲಾ, ಪ್ರಧಾನಮಂತ್ರಿಗಳ ಸಾರ್ವಜನಿಕ ದೂರು ವಿಭಾಗಕ್ಕೆ ಕಾಸರಗೋಡು ಜಿಲ್ಲೆಯ ಜನರ ಸಮಸ್ಯೆಗಳನ್ನು ಇ-ಮೇಲ್, ವಾಟ್ಸ್ ಆಫ್, ಟ್ವಿಟ್ಟರ್ ಹಾಗೂ ಣತಿiಣಣeಡಿ ಹಾಗೂ ಇತರ ಸಾಮಾಜಿಕ ತಾಣಗಳ ಮೂಲಕ ತಿಳಿಸುವ ಕೆಲಸ ಮಾಡಿತ್ತು.
ಕಾಸರಗೋಡು ಜಿಲ್ಲೆಯ ಜನಪ್ರತಿನಿಧಿಗಳು ಕಾಸರಗೋಡಿನ ಜನರ ಸಂಕಷ್ಟಕ್ಕೆ ಸ್ಪಂದಿಸದೆ ಇದ್ದುದಕ್ಕೆ ಸಾರ್ವಜನಿಕರು ಆಕ್ರೋಶ ಹೊಂದಿದ್ದರು. ಆದರೆ ನ್ಯಾಯವಾದಿ. ಶ್ರೀಕಾಂತ ಅವರ ನೇತೃತ್ವದಲ್ಲಿ ಬಿಜೆಪಿ ಯು ಕಾಸರಗೋಡು ಜಿಲ್ಲೆಯ ಜನರ ಕಷ್ಟಗಳಿಗೆ ಮೊದಲಿನಿಂದಲೇ ಸ್ಪಂದಿಸಿದ್ದು ಮೊದಲು ಕರ್ನಾಟಕ ಕಾಸರಗೋಡಿನ ಜನರಿಗೆ ಪಾಸ್ ನೀಡುವಲ್ಲಿ ಸಾಕಷ್ಟು ಶ್ರಮ ವಹಿಸಿತ್ತು. ಅನ್ ಲಾಕ್ 3 ಜಾರಿಯಾದ ಮೇಲೆಯೂ ಕಾಸರಗೋಡು ಜಿಲ್ಲಾಡಳಿತ ಮುಕ್ತ ಸಂಚಾರಕ್ಕೆ ಅವಕಾಶ ಮಾಡದ ಹಿನ್ನೆಲೆಯಲ್ಲಿ ಹಲವಾರು ಹೋರಾಟಗಳನ್ನು ಭಾಜಪ ನಡೆಸಿತ್ತು. ಕೊನೆಯದಾಗಿ ಕಾಸರಗೋಡು ಜನರು ಮುಕ್ತವಾಗಿ ದಕ್ಷಿಣ ಕನ್ನಡ ಹೋಗಲು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ. ಶ್ರೀಕಾಂತ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು ಇಂದು ಮುಕ್ತ ಸಂಚಾರ ನೀಡಬೇಕೆಂಬ ಮಹತ್ವದ ತೀರ್ಪು ಬಂದಿರುತ್ತದೆ.
ಅಭಿಮತ:: ಅಂತಾರಾಜ್ಯ ಗಡಿಗಳನ್ನು ತೆರವುಗೊಳಿಸಲು ಸನ್ಮಾನ್ಯ ಹೈಕೋರ್ಟ್ ಆದೇಶ ಸ್ವಾಗತಾರ್ಹ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಜನರ ಸಮಸ್ಯೆಗೆ ಧ್ವನಿಯಾದ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಶ್ರೀ ಅಡ್ವೋಕೇಟ್ ಶ್ರೀಕಾಂತ್ ಹಾಗೂ ಹಗಲು-ರಾತ್ರಿ ಎಂದು ಇಲ್ಲದೆ ಭಾಜಪದ ಕಾರ್ಯಕರ್ತರಿಗೆ ಹಾಗೂ ಸಹಯಾತ್ರಿ ತಂಡದ ಎಲ್ಲರಿಗೂ ಅಭಿನಂದನೆಗಳು.