ಕಾಸರಗೋಡು: ಮಾಜಿ ರಾಷ್ಟ್ರಪತಿ ಪ್ರಣಬ್ ಕುಮಾರ್ ಮುಖರ್ಜಿ ಅವರ ನಿಧನದಲ್ಲಿ ಸೆ.9 ವರೆಗೆ ಶೋಕಾಚರಣೆ ಘೋಷಿಸಿರುವ ಹಿನ್ನೆಲೆಯಲ್ಲಿ ಸೆ.3ರಂದು ನಡೆಸಲು ನಿರ್ಧರಿಸಿದ್ದ ಶಿಕ್ಷಣ ಸೌಲಭ್ಯ ವಿತರಣೆ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಇಲಾಖೆಯ ಜಿಲ್ಲಾ ಕಾರ್ಯಕಾರಿ ಅಧಿಕಾರಿ ತಿಳಿಸಿರುವರು. ಮುಂದೆ ಈ ಸಮಾರಂಭವನ್ನು ನಡೆಸುವ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದವರು ಹೇಳಿರುವರು.