ಕಾಸರಗೋಡು: ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಕಲ್ಯಾಣ ಕಾಲ್ ಸೆಂಟರ್ ಚಟುವಟಿಕೆ ಆರಂಭಿಸಿದೆ.ಕೋವಿಡ್-19 ಸೋಂಕು ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಿವರ್ಸ್ ಕ್ವಾರೆಂಟೈನ್‍ನಲ್ಲಿ ದಾಖಲಾಗಿರುವ ವಯೋವೃದ್ಧರಿಗಾಗಿ ಈ ಸೌಲಭ್ಯ ಆರಂಭಿಸಲಾಗಿದೆ. ಹಿರಿಯ ಪ್ರಜೆಗಳ ಆರೋಗ್ಯ ಸಂರಕ್ಷಣೆ, ಟೆಲಿ ಮೆಡಿಸಿನ್‍ಸೌಲಭ್ಯಗಳು, ಆರೋಗ್ಯ ಸುರಕ್ಷೆ ಇತ್ಯಾದಿ ಖಚಿತಪಡಿಸುವ ನಿಟ್ಟಿನಲ್ಲಿ ಕಾಞಂಗಾಡಿನ ಚೆಮ್ಮಟ್ಟುಂವಯಲ್ ನ ವಿಜ್ಞಾನ ಪಾರ್ಕ್ ಮಟ್ಟದಲ್ಲಿ ಜಿಲ್ಲಾ ವಯೋಜನ ಕಾಲ್ ಸೆಂಟರ್ ಆರಂಭಿಸಲಾಗಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಹಿರಿಯ ನಾಗರಿಕರೊಬ್ಬರಿಗೆ ಕರೆಮಾಡಿ ಆರೋಗ್ಯ ವಿಚಾರಣೆ ನಡೆಸುವ ಮೂಲಕ ಕೇಂದ್ರದ ಚಟುವಟಿಕೆಗಳಿಗೆ ಚಾಲನೆ ನೀಡಿದರು.ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ಉಪ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಸಹಾಯಕ ಜಿಲ್ಲಾಲ್ಲಾ ವೈದ್ಯಧಿಕಾರಿ ಡಾ.ಎ.ಟಿ.ಮನೋಜ್, ರಾಷ್ಟ್ರೀಯ ಆರೋಗ್ಯದೌತ್ಯ ಜಿಲ್ಲಾ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ ಸ್ವಾತಿವಾಮನ್, ಜಿಲ್ಲಾ ಸಮಾಜ ನೀತಿ ಅಧಿಕಾರಿ ಪಿ.ಬಿಜು, ಐ.ಸಿ.ಡಿ.ಎಸ್. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್,ಕೆ.ಎಸ್.ಎಂ. ಜಿಲ್ಲಾ ಸಂಚಾಲಕಿ ಜಿಷೋ ಜೇಮ್ಸ್, ಬಿ.ಎಸ್.ಎನ್.ಎಲ್. ಉಪ ವಿಭಾಗ ಇಂಜಿನಿಯರ್ ಪಿ.ಪಿ.ಸುರೇಂದ್ರನ್, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಷೈನಿ, ಕುಟುಂಬಶ್ರೀ, ಐ.ಸಿ.ಡಿ.ಎಸ್., ನ್ಯಾಷನಲ್ ನ್ಯೂಟ್ರೀಷಿಯನ್ ಮಿಷನ್, ಆರೋಗ್ಯ ಇಲಾಖೆಪ್ರತಿನಿಧಿಗಳು ಉಪಸ್ಥಿತರಿದ್ದರು.
ಹಿರಿಯ ಪ್ರಜೆಗಳು 04672289000 ಎಂಬ ನಂಬ್ರಕ್ಕೆ ಕರೆ ಮಾಡಿ ಸೇವೆ ಪಡೆಯಬಹುದು. ಈ ಸೆಂಟರ್ ಗಾಗಿ ಎರಡು ಪಾಳಿಗಳಲ್ಲಾಗಿ 4 ಬ್ಯಾಚ್ ನಲ್ಲಿ 40 ಸಿಬ್ಬಂದಿ ಸ್ವಯಂ ಸೇವೆ ನಡೆಸಲಿದ್ದಾರೆ. ವಯೋವೃದ್ಧರಿಗಿರುವ ಔಷಧ, ಟೆಲಿ ಮೆಡಿಸಿನ್, ವೈದ್ಯರ ಸಹಾಯ ಇತ್ಯಾದಿ ಸಂಬಂಧ ಸೇವೆಗಳಿಗೆ ಕರೆಮಾಡಬಹುದು. ದೂರುಗಳಿದ್ದಲ್ಲಿ ಅವುಗಳ ಪರಿಹಾರಕ್ಕೆ ಕಾಸರಗೋಡು ಜಿಲ್ಲೆಯ ಎಲ್ಲವಯೋಮಿತ್ರ ಯೂನಿಟ್ ಗಳ ಸೇವೆ ಬಳಸಿಕೊಳ್ಳಲಾಗುವುದು ಎಂದು ಸಮಾಜ ನೀತಿ ಅಧಿಕಾರಿ ಪಿ.ಬಿಜು ತಿಳಿಸಿದರು.