ಕಾಸರಗೋಡು: ಚೆಮ್ನಾಡಿನಲ್ಲಿ ನಿರ್ಮಿಸಲಾಗುವ ಲೈಫ್ ಮಿಷನ್ ವಸತಿ ಸಮುಚ್ಚುಯದ ನಿರ್ಮಾಣಕ್ಕೆ ಚಾಲನೆ ಲಭಿಸಿದೆ. ವೀಡಿಯೋ ಕಾನ್ ಫೆರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿದರು.
ಜಾಗವಿಲ್ಲದ, ವಸತಿ ರಹಿತರಿಗೆ ಸೂರು ಒದಗಿಸುವ ಲೈಫ್ ಮಿಷನ್ ಯೋಜನೆಯ ಮೂರನೇ ಹಂತದ ಅಂಗವಾಗಿ ಕಾಸರಗೋಡು ಜಿಲ್ಲೆಯ ಪೈಲೆಟ್ ಯೋಜನೆ ನಿರ್ಮಾಣ ಉದ್ಘಾಟನೆ ಈ ವೇಳೆ ಜರುಗಿದೆ.
101 ವಸತಿ ಸಮುಚ್ಚಯಗಳ ನಿರ್ಮಾಣ ಮುಂದಿನ ವರ್ಷ ಪೂರ್ಣ:
ಈ ವೇಳೆ ಮಾತನಾಡಿ ಲೈಫ್ ಮಿಷನ್ ಯೋಜನೆ ಮೂಲಕದ 101 ವಸತಿ ಸಮುಚ್ಚಯಗಳ ನಿರ್ಮಾಣ ಮುಂದಿನ ವರ್ಷ ಪೂರ್ಣ ಗೊಳಿಸಲು ರಾಜ್ಯ ಸರಕಾರ ಉದ್ದೇಶಿಸಿದೆ ಎಂದು ತಿಳಿಸಿದರು.
ಚೆಮ್ನಾಡಿನಲ್ಲಿ ಯೋಜನೆಯ ಅಂಗವಾಗಿ ನಿರ್ಮಾಣಗೊಳ್ಳಲಿರುವ ವಸತಿಸಮುಚ್ಚಯದ ನಿರ್ಮಾಣ ಉದ್ಘಾಟನೆಯನ್ನು ವೀಡಿಯೋ ಕಾನ್ ಫೆರೆನ್ಸ್ ಮೂಲಕ ನಡೆಸಿ ಅವರು ಮಾತನಾಡಿದರು. ಈ ವೇಳೆ ವಿವಿಧ ಜಿಲ್ಲೆಗಳಲ್ಲಿ ನಿರ್ಮಾಣಗೊಳ್ಳಿರುವ 29 ಲೈಫ್ ಮಿಷನ್ ವಸತಿ ಸಮುಚ್ಚಯಗಳ ನಿರ್ಮಾಣ ಚಟುವಟಿಕೆಗಳಿಗೂ ಅವರು ಚಾಲನೆ ನೀಡಿದರು.
1285 ಕುಟುಂಬಗಳಿಗೆ ಸ್ವಂತ ಮನೆಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ 29 ಲೈಫ್ ಮಿಷನ್ ವಸತಿ ಸಮುಚ್ಚಯ ನಿರ್ಮಾಣಗೊಳ್ಳಲಿವೆ. ಕಾಸರಗೋಡಿನ ಚೆಮ್ನಾಡ್ ಪಂಚಾಯತ್ ನಿಂದ ತಿರುವನಂತಪುರಂ ಜಿಲ್ಲೆಉಯ ಮಡವೂರು ವರೆಗೆ 181.22 ಕೋಟಿ ರೂ. ವೆಚ್ಚದಲ್ಲಿ ವಸತಿ ಸಮುಚ್ಚಯಗಳು ಒಂದು ವರ್ಷದ ಅವಧಿಯಲ್ಲಿ ನಿರ್ಮಾಣ ಪೂರ್ತಿಗಳ್ಳಲಿವೆ ಎಂದರು.
ಆಶ್ರಯ ವಂಚಿತರಾದ ಜನತೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ರಾಜ್ಯ ಸರಕಾರ ಕಟಿಬದ್ಧವಾಗಿದೆ. ಲೈಫ್ ಯೋಜನೆಯ ಮೂಲಕ 2,26,518 ಕುಟುಂಬಗಳು ಸ್ವಂತ ಮನೆಗಳಿಗೆ ಸ್ಥಳಾಂತರಗೊಂಡಿದ್ದಾರೆ. 1.5 ಮಂದಿಗಾಗಿ ವಸತಿಗಳು ನಿರ್ಮಾಣಗೊಳ್ಳುತ್ತಿವೆ. ಯೋಜನೆಯ ಮೊದಲ ಹಂತದಲ್ಲಿ 676 ಕೋಟಿ ರೂ. ವೆಚ್ಚದಲ್ಲಿ 52,307 ಮನೆಗಳ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಎರಡನೇ ಹಂತದಲ್ಲಿ 81,840 ಫಲಾನುಭವಿಗಳಿಗಾಗಿ ಮನೆ ನಿರ್ಮಾಣ ಪೂರ್ಣಗೊಂಡಿವೆ. ಪಿ.ಎಂ.ವೈ. ಗ್ರಾಮೀಣ ವಲಯದಲ್ಲಿ 16,996 ಮನೆಗಳು, ಪಿ.ಎ.ಂ.ಎ.ವೈ.ಅರ್ಬನ್ ವಲಯದಲ್ಲಿ 48,445 ಮನೆಗಳು ಲಭಿಸಿವೆ. ಕೇಂದ್ರ ಸರಕಾರಿ ಯೋಜನೆಗಳ ಪ್ರಯೋಜನೆ ಫಲಾನುಭವಿಗಳಿಗೆ ಲಭಿಸಬೇಕು ಎಂಬ ಉದ್ದೇಶದಿಂದ ಲೈಫ್ ಮಿಷನ್ ಯೋಜನೆಯೊಂದಿಗೆ ಸಂಯೋಜಿತವಾಗಿ ಜಾರಿಗೊಳಿಸಲಾಗುತ್ತಿದೆ. ಲೈಫ್ ಮಿಷನ್ ಯೋಜನೆಯ ಮೂರನೇ ಹಂತದಲ್ಲಿ ಅರ್ಹರಿಗೆ ವಸತಿ ಒದಗಿಸುವ ಪ್ರಕ್ರಿಯೆ ನಡೆದುಬರುತ್ತಿದೆ ಎಂದವರು ತಿಳಿಸಿದರು.