ಪೆರ್ಲ:ಪೆರ್ಲ ಪೇಟೆಯಲ್ಲಿ ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ನಿರ್ಮಿಸಲಾದ ಮಹಿಳೆಯರ ಸ್ನಾನ ಗೃಹ, ಶಿಶು ಆರೈಕೆ, ಎದೆ ಹಾಲುಣಿಸುವ ಪ್ರತ್ಯೇಕ ಕೊಠಡಿ ಒಳಗೊಂಡ, ಸರ್ವ ಸುಸಜ್ಜಿತ 'ಶೀ ಲಾಂಚ್' ಮಹಿಳೆಯರ ವಿಶ್ರಾಂತಿ ಕೊಠಡಿಯನ್ನು ಬುಧವಾರ ಉದ್ಘಾಟಿಸಲಾಯಿತು.
ಕೋವಿಡ್ ಮಾನದಂಡಗಳನ್ನು ಪಾಲಿಸಿ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಶಿಲಾ ಫಲಕ ಅನಾವರಣ ಗೊಳಿಸುವ ಮೂಲಕ ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ.ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾ ಅಮೆಕ್ಕಳ, ಪಂಚಾಯಿತಿ ಸದಸ್ಯರಾದ ಪ್ರೇಮ, ಸಿದ್ದಿಕ್ ಒಳಮೊಗರು, ಪುಷ್ಪಾ ವಿ., ಕಾರ್ಯದರ್ಶಿ ಮರಿಯಾ ಗೊರೋತಿ ಉಪಸ್ಥಿತರಿದ್ದರು.
ಪಂಚಾಯಿತಿ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಸ್ವಾಗತಿಸಿದರು.ಪಂಚಾಯಿತಿ ಆರೋಗ್ಯ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ.ವಂದಿಸಿದರು.ಜಿಲ್ಲಾ ಪಂಚಾಯಿತಿಯ 7 ಲಕ್ಷ ಮತ್ತು ಎಣ್ಮಕಜೆ ಪಂಚಾಯಿತಿಯ 3 ಲಕ್ಷ ಅನುದಾನದಲ್ಲಿ ಪೆರ್ಲ ಪೇಟೆಯಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿ ನಿರ್ಮಾಣಗೊಂಡಿದೆ.
'ಶೀ ಲಾಂಚ್' ಕಟ್ಟಡ ನಿರ್ಮಾಣಕ್ಕಾಗಿ ಪೆರ್ಲ ಪೇಟೆಯ ಗಾಂಧಿಕಟ್ಟೆ ಬಳಿ ಅರ್ಧ ಶತಮಾನಗಳಿಗೂ ಹಿಂದೆ ನಿರ್ಮಿಸಲಾಗಿದ್ದ ಐತಿಹಾಸಿಕ ಸ್ಮಾರಕ ರೇಡಿಯೋ ಹೌಸ್ ಕಳೆದ ಅಕ್ಟೋಬರ್ 2 ರಂದು ಕೆಡವಲಾಗಿತ್ತು.