ನಿನ್ನೆಯ ಮುಂದುವರಿದ ಭಾಗ:
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಮೊದಲು ಜಿಲ್ಲೆಯ 38 ಪಂಚಾಯಿತಿಗಳ ಮೀಸಲು ವಾರ್ಡ್‍ಗಳ ಡ್ರಾ ಪೂರ್ಣಗೊಂಡಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಆನ್ ಲೈನ್‍ನಲ್ಲಿ ಜಿಲ್ಲಾಧಿಕಾರಿಗಳ ಕಾನ್ಫರೆನ್ಸ್ ಹಾಲ್‍ನಲ್ಲಿ ನೇರಪ್ರಸಾರ ನಡೆಸಲಾಯಿತು. ಜಿಲ್ಲೆಯಲ್ಲಿ ಕೋವಿಡ್ ರೋಗ ಹರಡಿದ ಹಿನ್ನೆಲೆಯಲ್ಲಿ, ಸಂಪರ್ಕದ ಮೂಲಕ ರೋಗ ಹರಡುವುದನ್ನು ನಿಯಂತ್ರಿಸಲು ಆನ್ ಲೈನ್ ಲಾಟರಿ ಆಯೋಜಿಸಿದ್ದು ಗಮನಾರ್ಹವಾಯಿತು. ಡ್ರಾ ನಡೆದ ಸ್ಥಳದಲ್ಲಿ ವಿವಿಧ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳು, ರಾಜಕೀಯ ಪಕ್ಷಗಳ ಜಿಲ್ಲಾ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಹಾಜರಿದ್ದರು.ಆದರೆ ಪಂಚಾಯತ್ ಗಳ ಜನರ ಪ್ರತಿನಿಧಿಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಡ್ರಾ ವೀಕ್ಷಿಸಲು ಅನುಕೂಲ ಮಾಡಲಾಗಿತ್ತು. ಸಹ ಜಿಲ್ಲಾಧಿಕಾರಿಗಳಾದ ಕೆ.ರವಿಕುಮಾರ್ ಮತ್ತು ಎ.ಕೆ.ರಾಮೇಂದ್ರನ್, ಪಂಚಾಯತ್ ಉಪನಿರ್ದೇಶಕ ಜಾಯ್ಸನ್ ಮ್ಯಾಥ್ಯೂ ಮತ್ತು ಹಣಕಾಸು ಅಧಿಕಾರಿ ಕೆ.ಸತೀಶನ್ ಅವರು ಡ್ರಾವನ್ನು ನಿರ್ವಹಿಸಿದರು.
ಮೀಸಲಾತಿ ವಾರ್ಡ್ ಗಳ ವಿವರ(ನಿನ್ನೆಯ ಸಂಚಿಕೆಯ ಮುಂದುವರಿದ ಭಾಗ...ಗಮನಿಸಿ.......ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ ಪಂಚಾಯತಿಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ.
ಸಂಪಾದಕ ಮಂಡಳಿ...ಸಮರಸ ಸುದ್ದಿ.
ಚೆಂಗಳ ಗ್ರಾಮ ಪಂಚಾಯಿತಿ:
ಮಹಿಳಾ ಮೀಸಲಾತಿ - 3 ನೇ ವಾರ್ಡ್ ನೆಲ್ಲಿಕಟ್ಟೆ, 4 ನೇ ವಾರ್ಡ್ ಪಿಲಾಂಕಟ್ಟೆ, 7 ನೇ ವಾರ್ಡ್ ಬಾಲಡ್ಕ, 10 ನೇ ವಾರ್ಡ್ ಆಲಂಪಾಡಿ, 11 ನೇ ವಾರ್ಡ್ ಪಡಿಂಞರ್ ಮೂಲೆ, 12 ನೇ ವಾರ್ಡ್ ತೈವಳಪ್ಪು, 14 ನೇ ವಾರ್ಡ್ ಚೆರ್ಕಳ, 15 ನೇ ವಾರ್ಡ್ ಬರ್ಕಾ, 20 ನೇ ವಾರ್ಡ್ ಪನೆಯಾಲ, 21 ನೇ ವಾರ್ಡ್ ನಾಯಮ್ಮರ್ಮೂಲೆ, 22 ನೇ ವಾರ್ಡ್ ಸಿವಿಲ್ ಸ್ಟೇಷನ್, 23 ನೇ ವಾರ್ಡ್, ಎರುತ್ತುಕಡವು.
ಪರಿಶಿಷ್ಟ ಜಾತಿ ಮೀಸಲಾತಿ - 18 ನೇ ವಾರ್ಡ್, ಚೆರೂರು
ಬುಡಕಟ್ಟು ಮೀಸಲಾತಿ- ಒಂಬತ್ತನೇ ವಾರ್ಡ್
ಚೆಮ್ನಾಡ್ ಗ್ರಾಮ ಪಂಚಾಯಿತಿ:
ಮಹಿಳಾ ಮೀಸಲಾತಿ - 4 ನೇ ವಾರ್ಡ್ ತಲಕೈ, 7 ನೇ ವಾರ್ಡ್ ದಕ್ಷಿಣ, 9 ನೇ ವಾರ್ಡ್ ಪರಂಬಾ, 11 ನೇ ವಾರ್ಡ್ ಬೆಂಡಿಚ್ಚಾಲ್, 12 ನೇ ವಾರ್ಡ್ ಅಣಿಂಜೆ, 13 ನೇ ವಾರ್ಡ್ ದೇಳಿ, 14 ನೇ ವಾರ್ಡ್ ಅರಮಂಗಾನ, 15 ನೇ ವಾರ್ಡ್ ಕಳನಾಡ್, 16 ನೇ ವಾರ್ಡ್ ಕೊಕ್ಕಲ್, 17 ನೇ ವಾರ್ಡ್ ಚತ್ತಂಗೈ, 20 ನೇ ವಾರ್ಡ್ ಕೀಳಿಞರ್, 22 ನೇ ವಾರ್ಡ್ ಚಳಿಯಂಗೋಡ್.
ಪರಿಶಿಷ್ಟ ಜಾತಿ ಮೀಸಲಾತಿ - 19 ನೇ ವಾರ್ಡ್, ಚೆಂಬೆರಿಕೆ
ಬದಿಯಡ್ಕ ಗ್ರಾಮ ಪಂಚಾಯಿತಿ:
ಮಹಿಳಾ ಮೀಸಲಾತಿ - 1 ನೇ ವಾರ್ಡ್ ಕಿಳಿಂಗಾರು, 2 ನೇ ವಾರ್ಡ್ ನೀರ್ಚಾಲ್, 5 ನೇ ವಾರ್ಡ್ ಪಳ್ಳತ್ತಡ್ಕ, 8 ನೇ ವಾರ್ಡ್ ವಿದ್ಯಾಗಿರಿ, 11 ನೇ ವಾರ್ಡ್ ಚೆಡೇಕಲ್, 12 ನೇ ವಾರ್ಡ್ ಪೆರಡಾಲ, 15 ನೇ ವಾರ್ಡ್ ಮಾನ್ಯ, 16 ನೇ ವಾರ್ಡ್ ಬಿರ್ಮಿನಡ್ಕ, 17 ನೇ ವಾರ್ಡ್ ಮಲ್ಲಡ್ಕ
ಪರಿಶಿಷ್ಟ ಜಾತಿ ಮಹಿಳಾ ಮೀಸಲಾತಿ - ಆರನೇ ವಾರ್ಡ್, ಕೆಡಂಜಿ
ಪರಿಶಿಷ್ಟ ಜಾತಿ ಮೀಸಲಾತಿ - 19 ನೇ ವಾರ್ಡ್, ಬೇಳ
ಕುಂಬಳೆ ಗ್ರಾಮ ಪಂಚಾಯಿತಿ:
ಮಹಿಳಾ ಮೀಸಲಾತಿ - ಮೂರನೇ ವಾರ್ಡ್ ಕಕ್ಕಳಕುನ್ನು, ನಾಲ್ಕನೇ ವಾರ್ಡ್ ಬಂಬ್ರಾಣ, ಏಳನೇ ವಾರ್ಡ್ ಕಳತ್ತೂರು, 9 ನೇ ವಾರ್ಡ್ ಕೊಡ್ಯಮೆ, 10 ನೇ ವಾರ್ಡ್ ಇಚ್ಲಂಪಾಡಿ, 11 ನೇ ವಾರ್ಡ್ ಮುಜುಂಗಾವು, 12 ನೇ ವಾರ್ಡ್ ಕೋಟೆಕ್ಕಾರ್ , 16 ನೇ ವಾರ್ಡ್ ಪೇರಾಲ್, 19 ನೇ ವಾರ್ಡ್ ಕೊಪ್ಪಳ, 20 ನೇ ವಾರ್ಡ್ ಕೊಯಿಪ್ಪಾಡಿ ಕಡಪ್ಪರ, 22 ನೇ ವಾರ್ಡ್ ಬತ್ತೇರಿ, 23 ನೇ ವಾರ್ಡ್ ಕುಂಬಳೆ
ಪರಿಶಿಷ್ಟ ಜಾತಿ ಮೀಸಲಾತಿ- ಎಂಟನೇ ವಾರ್ಡ್ ಮಡ್ವ
ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯಿತಿ:
ಮಹಿಳಾ ಮೀಸಲಾತಿ - 1 ನೇ ವಾರ್ಡ್ ಮೊಗರ್, 2 ನೇ ವಾರ್ಡ್ ಬಳ್ಳೂರ್, 3 ನೇ ವಾರ್ಡ್ ಕೊಟಕುನ್ನು, 6 ನೇ ವಾರ್ಡ್ ಮಜಲ್, 7 ನೇ ವಾರ್ಡ್ ಆಜಾದ್ ನಗರ, 9 ನೇ ವಾರ್ಡ್ ಕೇಳುಗುಡ್ಡೆ ಬಲ್ಲಿಮೊಗರ್, 12 ನೇ ವಾರ್ಡ್ ಚೌಕಿ ಕುನ್ನಿಲ್, 13 ನೇ ವಾರ್ಡ್ ಕಾವುಗೋಳಿ ಬೀಚ್
ಪರಿಶಿಷ್ಟ ಜಾತಿ ಮೀಸಲಾತಿ - 14 ನೇ ವಾರ್ಡ್, ಕಲ್ಲಂಗೈ
ಮಧೂರು ಗ್ರಾಮ ಪಂಚಾಯಿತಿ:
ಮಹಿಳಾ ಮೀಸಲಾತಿ - 1 ನೇ ವಾರ್ಡ್ ಮಾಯಿಪ್ಪಾಡಿ, 2 ನೇ ವಾರ್ಡ್ ಪಟ್ಲ, 5 ನೇ ವಾರ್ಡ್ ಮಧೂರು, 8 ನೇ ವಾರ್ಡ್ ಉದಯಗಿರಿ, 9 ನೇ ವಾರ್ಡ್ ಕೋಟೆಕಣಿ, 12 ನೇ ವಾರ್ಡ್ ಕೇಳುಗುಡ್ಡೆ, 13 ನೇ ವಾರ್ಡ್ ಕಳಿಯಂಕಂಡ, 14 ನೇ ವಾರ್ಡ್ ರಾಮದಾಸ್ ನಗರ, 15 ನೇ ವಾರ್ಡ್ ಕೂಡ್ಲು, 19 ನೇ ವಾರ್ಡ್ ಭಗವತಿ ನಗರ.
ಪರಿಶಿಷ್ಟ ಜಾತಿ ಮೀಸಲಾತಿ - 20 ನೇ ವಾರ್ಡ್, ಶಿರಿಬಾಗಿಲು.