ಬದಿಯಡ್ಕ: ಅಟಲ್‍ಜೀ ಸೇವಾ ಟ್ರಸ್ಟ್ ಬದಿಯಡ್ಕ ಇದರ ವತಿಯಿಂದ ಕೆಡೆಂಜಿಯಲ್ಲಿ ನಿರ್ಮಿಸಿದ ಶೌಚಾಲಯವನ್ನು ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಡಿ. ಶಂಕರ ಅವರ ಉಪಸ್ಥಿತಿಯಲ್ಲಿ ಕಾಲನಿಯ ಎರಡು ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.
ನ್ಯಾಯವಾದಿ ಬಿ.ಗಣೇಶ್, ವಿಶ್ವನಾಥ ಪ್ರಭು ಕರಿಂಬಿಲ, ದಾಮೋದರ ಚೆಟ್ಟಿಯಾರ್, ವಿಜಯಸಾಯಿ, ಭಾಸ್ಕರ ಬದಿಯಡ್ಕ, ಬಿ.ನರಸಿಂಹ ಶೆಣೈ, ರಾಜೇಶ್ ಬಿ.ಕೆ. ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಅಟಲ್ ಜೀ ಸೇವಾ ಟ್ರಸ್ಟ್ ವತಿಯಿಂದ ಬದಿಯಡ್ಕದಲ್ಲಿ ಅಂಬ್ಯುಲೆನ್ಸ್ ವಾಹನವೂ ಲಭ್ಯವಿದ್ದು, ಈಗಾಗಲೇ ಅನೇಕ ತುರ್ತು ಸಂದರ್ಭಗಳಲ್ಲಿ ಜನಸೇವೆಯನ್ನು ಕೈಗೊಂಡಿದೆ.