ಮಂಜೇಶ್ವರ: ಗ್ರಂಥಾಲಯ ದಿನಾಚರಣೆ ಅಂಗವಾಗಿ ಸದಾಶಿವ ಮಾಸ್ತರ್ ಪೆÇಯ್ಯೆ ಪುಸ್ತಕಗಳನ್ನು ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ಗುವೇದಪಡ್ಪು ಇಲ್ಲಿಗೆ ಇತ್ತೀಚೆಗೆ ದೇಣಿಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯ ಶ್ಲಾಘನೀಯವಾಗಿದ್ದು ಗ್ರಂಥಾಲಯಗಳ ಮೂಲಕ ಓದಿ ಬೆಳೆಯುವ ಹವ್ಯಾಸ ಎಲ್ಲರಲ್ಲೂ ಮೂಡಲಿ ಎಂದು ಶುಭ ಹಾರೈಸಿದರು. ಶಿವಪ್ರಸಾದ್ ಮಾಸ್ತರ್ ಅವರೂ ಈ ಸಂದರ್ಭ ಪುಸ್ತಕಗಳನ್ನು ದೇಣಿಗೆ ಯಾಗಿಯೂ ನೀಡಿದರು. ಗ್ರಂಥಾಲಯ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಹಾಗೂ ಗ್ರಂಥಾಲಯ ಸದಸ್ಯರು ಉಪಸ್ಥಿತರಿದ್ದರು.