HEALTH TIPS

ಇ-ಫೈಲ್‍ಗಳು ಮತ್ತು ಭೌತಿಕ ಫೈಲ್‍ಗಳು; ನಾವೆಲ್ಲರೂ ಸಹಿ ಹಾಕಿದ್ದೇವೆ: ಥಾಮಸ್ ಐಸಾಕ್


        ತಿರುವನಂತಪುರಂ: ಬಿಜೆಪಿ ಎತ್ತಿರುವ 'ನಕಲಿ ಸಹಿ' ಆರೋಪಕ್ಕೆ ಸಚಿವ ಥಾಮಸ್ ಐಸಾಕ್ ಪ್ರತಿಕ್ರಿಯಿಸಿದ್ದಾರೆ. "ಬಿಜೆಪಿ ಅವಿವೇಕತನದ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ, ಆದ್ದರಿಂದ ಆಶ್ಚರ್ಯವೇನಿಲ್ಲ. ಸಚಿವಾಲಯವು ಹೇಗೆ ಕಾರ್ಯನಿರ್ವಹಿಸುತ್ತದೆ ಅಥವಾ ಫೈಲ್ ಅನ್ನು ಹೇಗೆ ನಿರ್ವಹಿಸಬೇಕು ಎಂದು ಅವರಿಗೆ ತಿಳಿದಿಲ್ಲ ಎಂದು ಐಸಾಕ್ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ತಿಳಿಸಿದ್ದಾರೆ.

     "ನಾನು ಆಲಪ್ಪುಳದಲ್ಲಿ ಅಥವಾ ಕಚೇರಿಯ ಹೊರಗೆ ಇರುವಾಗ ನಾನು ಫೈಲ್‍ಗಳಿಗೆ ಸಹಿ ಮಾಡುತ್ತೇನೆ. ಇದು ಇ-ಫೈಲ್ ಆಗಿದ್ದರೆ, ಡಿಜಿಟಲ್ ಸಹಿಯನ್ನು ಬಳಸಲಾಗುತ್ತದೆ ಎಂದವರು ಪುರಾವೆಯೊಂದಿಗೆ ತಿಳಿಸಿದರು.

     "ಬಿಜೆಪಿ ನೀಡಿರುವ ಆರೋಪ ಸಂದರ್ಭದಲ್ಲಿ, ಮಲಯಾಳಂ ಮಿಷನ್ ನ ಒಂದು ಫೈಲ್ ನ್ನು ಸಾಕ್ಷಿಯಾಗಿ ಬಳಸಲಾಗಿದೆ. ಅದು ಮ್ಯಾನ್ಯವೆಲ್  ಫೈಲ್ ಆಗಿತ್ತು. ಇದನ್ನು ಸ್ಕ್ಯಾನ್ ಮಾಡಿ ಕಳುಹಿಸಿ  ಸಹಿ ಮಾಡಿ ನಕಲಿಸಲಾಗಿದೆ ಮತ್ತು ಫೈಲ್‍ನಲ್ಲಿ ಅಂಟಿಸಲಾಗಿದೆ. ಇದು ಸತ್ಯ ಎಂದು ಐಸಾಕ್ ಸ್ಪಷ್ಟಪಡಿಸಿದರು.

  ಏತನ್ಮಧ್ಯೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸೆಪ್ಟೆಂಬರ್ 2, 2018 ರಂದು ಚಿಕಿತ್ಸೆಗಾಗಿ ಯುಎಸ್ ಗೆ ತೆರಳಿದ್ದಾಗ ಸಚಿವ ಇಪಿ ಜಯರಾಜನ್ ಅವರು ಮುಖ್ಯಮಂತ್ರಿಯ ಅನುಪಸ್ಥಿತಿಯಲ್ಲಿ ಕ್ಯಾಬಿನೆಟ್ ಸಭೆಯ ಉಸ್ತುವಾರಿ ವಹಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದರು. ಮುಖ್ಯಮಂತ್ರಿಯ ಜವಾಬ್ದಾರಿಯನ್ನು ಬೇರೆ ಯಾರಿಗೂ ನೀಡಿರಲಿಲ್ಲ. ಇ-ಫೈಲಿಂಗ್ ಮೂಲಕ ಮುಖ್ಯಮಂತ್ರಿಯ ಕರ್ತವ್ಯವನ್ನು ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದರು. ಇದು ಆಗ ಸುದ್ದಿಯಾಗಿತ್ತು. 2018 ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಈ ಫೈಲ್‍ಗೆ ಸಹಿ ಹಾಕಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಸೆಪ್ಟೆಂಬರ್ 2 ರಂದು ಮುಖ್ಯಮಂತ್ರಿ ಸೆಪ್ಟೆಂಬರ್ 2 ರಂದು ಅಮೆರಿಕಕ್ಕೆ ತೆರಳಿದಾಗ ಫೈಲ್‍ಗೆ ಸಹಿ ಹಾಕಿದ್ದಾರೆ ಎಂದು ಬಿಜೆಪಿ ವಕ್ತಾರ ಸಂದೀಪ್ ವಾರಿಯರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಮುಸ್ಲಿಂ ಲೀಗ್ ಮುಖಂಡ ಕುಞಲಿಕುಟ್ಟಿ ಅವರು ಸಹಿ ಖೋಟಾ ಮಾಡಿದರೆ ಘಟನೆ ಗಂಭೀರವಾಗಲಿದೆ ಎಂದು ಆರೋಪಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries