ಮಂಜೇಶ್ವರ: ಓಬಿಸಿ ಮೋರ್ಚಾ ಮಂಜೇಶ್ವರ ಪಂಚಾಯತಿ ಸಮಿತಿ ವತಿಯಿಂದ ವಿಶ್ವಕರ್ಮ ದಿನಾಚರಣೆ ಬುಧವಾರ ಜರಗಿತು. ಸರ್ಕಾರದ ಕೋವಿಡ್ ನಿಯಮ ಪಾಲಿಸಿಕೊಂಡು ಸರಳವಾಗಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಓಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ ನ್ಯಾಯವಾದಿ. ನವೀನ್ ರಾಜ್ ಕೆ.ಜೆ ದೀಪಪ್ರಜ್ವಲನೆಗೈದು ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ದಿನಾಚರಣೆಯ ಮಹತ್ವವನ್ನು ವಿವರಿಸುತ್ತಾ ಮಾತನಾಡಿದ ಅವರು ವಿಶ್ವಕ್ಕೆ ಅಪ್ರತಿಮ ಕೊಡುಗೆಯನ್ನು ನೀಡಿದ ಭಗವಾನ್ ಶ್ರೀವಿಶ್ವಕರ್ಮನ ಆರಾಧನೆ ಸನಾತನ ಸಂಸ್ಕøತಿಯ ದ್ಯೋತಕವಾಗಿದೆ. ಸರ್ವರಿಗೂ ಅತೀ ಅಗತ್ಯವಾಗಿರುವ ವಿಶ್ವಕರ್ಮ ದೇವನ ಅನುಗ್ರಹ ಸರ್ವ ಶ್ರಮ ಜೀವಿಗಳಿಗೂ ಪ್ರಾಪ್ತಿಯಾಗಲೆಂದು ಶುಭ ಹಾರೈಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನ ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಪದ್ಮನಾಭ ಕಡಪ್ಪರ ವಹಿಸಿದ್ದರು.ಈ ಸಂದರ್ಭದಲ್ಲಿ ಓಬಿಸಿ ಮೋರ್ಚಾ ಮಂಜೇಶ್ವರ ಮಂಡಲ ಅಧ್ಯಕ್ಷ ಚಂದ್ರಹಾಸ ಪೂಜಾರಿ ಕಡಂಬಾರು, ಓಬಿಸಿ ಮೋರ್ಚಾ ಮಂಜೇಶ್ವರ ಪಂಚಾಯತಿ ಸಮಿತಿ ಪ್ರಧಾನ ಕಾರ್ಯದರ್ಶಿ ದಯಾ ಪ್ರಸನ್ನ ಆಚಾರ್ಯ, ಯುವ ಮೋರ್ಚಾ ನೇತಾರ ಗುರು ಕಿರಣ್ ಆಚಾರ್ಯ ಕಾಳಿಕಾಂಬ, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಗುರುಸ್ವಾಮಿ ಉದಯ ಪಾವಳ, ಮೋಹನ್‍ದಾಸ್ ಸುಂಕದಕಟ್ಟೆ, ಪದ್ಮನಾಭ ಆಚಾರ್ಯ ಮೀಯಪದವು ಮೊದಲಾದವರು ಉಪಸ್ಥಿತರಿದ್ದರು.
ಓಬಿಸಿ ಮೋರ್ಚಾ ಮೀಡಿಯಾ ಸೆಲ್ ಕನ್ವಿನರ್ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿ, ಓಬಿಸಿ ಮೋರ್ಚಾ ಮಂಜೇಶ್ವರ ಪಂಚಾಯತಿ ಸಮಿತಿ ಕಾರ್ಯದರ್ಶಿ ದಯಾಪ್ರಸನ್ನ ಆಚಾರ್ಯ ವಂದಿಸಿದರು.