ನವದೆಹಲಿ: ಕೋವಿಡ್ ಕಾಲಾವಧಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಕೇಂದ್ರವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಪರೀಕ್ಷಾ ಸಭಾಂಗಣದಲ್ಲಿ ಕನಿಷ್ಠ ಆರು ಅಡಿಗಳಷ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಮಾಸ್ಕ್ ಮತ್ತು ಕೈಗವಚ ಬಳಸುವುದು ಮತ್ತು ಹ್ಯಾಂಡ್ ಸ್ಯಾನಿಟೈಜರ್‍ಗಳನ್ನು ಕಡ್ಡಾಯವಾಗಿ ಬಳಸುವುದು ಮುಖ್ಯ ನಿರ್ದೇಶನಗಳಾಗಿವೆ.
ಪರೀಕ್ಷೆ ಆರಂಭಕ್ಕೂ ಮೊದಲು ಕನಿಷ್ಠ 40-60 ಸೆಕೆಂಡುಗಳ ಕಾಲ ಕೈಗಳನ್ನು ಸಾಬೂನಿನಿಂದ ತೊಳೆಯುವುದು ಕಡ್ಡಾಯವಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಆರೋಗ್ಯ ಸೇತು ಆಪ್ ಮೂಲಕ ಕಡ್ಡಾಯ ವಿವರ ನಮೂದಿಸುವಿಕೆಗೆ ನಿರ್ದೇಶನ ನೀಡಲಾಗಿದೆ.
ಕಂಟೋನ್ಮೆಂಟ್ ಪ್ರದೇಶದ ಹೊರಗೆ ಮಾತ್ರ ಪರೀಕ್ಷಾ ಕೇಂದ್ರಗಳನ್ನು ಅನುಮತಿಸಲಾಗುವುದು. ರೋಗಲಕ್ಷಣವಿಲ್ಲದವರಿಗೆ ಮಾತ್ರ ಪರೀಕ್ಷಾ ಸಭಾಂಗಣಗಳಿಗೆ ಪ್ರವೇಶಿಸಲು ಅವಕಾಶವಿದೆ. ಕಂಟೋನ್ಮೆಂಟ್ ಪ್ರದೇಶದ ವಿದ್ಯಾರ್ಥಿಗಳು ಮತ್ತು ಇನ್ವಿಜಿಲೇಟರ್ ಗಳು ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗಿಲ್ಲ. ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಅಂತವರಿಗೆ ಪ್ರತ್ಯೇಕ ವಿಶೇಷ ವ್ಯವಸ್ಥೆ ಕಲ್ಪಿಸಲು ನಿರ್ದೇಶನ ನೀಡಲಾಗಿದೆ.
ಪರೀಕ್ಷಾ ಕೇಂದ್ರದ ಪ್ರವೇಶದ್ವಾರದಲ್ಲಿ ದೇಹದ ಉಷ್ಣತೆ ತಪಾಸಣೆ(ಥರ್ಮಲ್ ಟೆಸ್ಟ್) ಮಾಡಲಾಗುವುದು. ಸ್ಕ್ರೀನಿಂಗ್‍ನಲ್ಲಿ ರೋಗಲಕ್ಷಣಗಳನ್ನು ತೋರಿಸುವವರನ್ನು ಪ್ರತ್ಯೇಕಿಸಲು ಮತ್ತು ಪರೀಕ್ಷೆಯನ್ನು ಬರೆಯಲು ಸೌಲಭ್ಯಗಳನ್ನು ಒದಗಿಸಬೇಕು. ಕಂಪ್ಯೂಟರ್‍ಗಳು ಸೇರಿದಂತೆ ಆನ್‍ಲೈನ್ ಪರೀಕ್ಷೆಗಳನ್ನು ಸೋಂಕು ನಿವಾರಕಗೊಳಿಸುವ ಅಗತ್ಯವನ್ನು ಸಹ ಮಾರ್ಗಸೂಚಿಗಳು ಒಳಗೊಂಡಿವೆ.