ಕಾಸರಗೋಡು: ಶಿಕ್ಷಕರ ದಿನವಾದ ನಿನ್ನೆ ನಿಲೇಶ್ವರ ನಗರ ಸಭೆಯ ತಂಡ ಶಿಕ್ಷಕ ದಂಪತಿಗಳನ್ನು ಗೌರವಿಸಿ ಮಾದರಿಯಾಯಿತು.
ಎಂ.ಶಂಕರನ್ ನಂಬಿಯಾರ್ ಮಾಸ್ತರ್ - ಸಿ.ಎಂ.ಭಾರ್ಗವಿ ಶಿಕ್ಷಕ ದಂಪತಿಗಳು, ರಾಮರಂ ಮುಹಮ್ಮದ್ ಮಾಸ್ತರ್ - ಲೈಲಾ ಶಿಕ್ಷಕ ದಂಪತಿ ಮತ್ತು ಪಿ.ವಿ.ಕುಞÂ್ಞ ರಾಮನ್ ಮಾಸ್ತರ್ - ಪಟ್ಲದ ಪದ್ಮಾವತಿ ಶಿಕ್ಷಕ ದಂಪತಿಗಳನ್ನು ಶಿಕ್ಷಕರ ದಿನದಂದು ಅವರ ಮನೆಗಳಲ್ಲಿ ಸನ್ಮಾನಿಸಲಾಯಿತು.
ಎಂ.ಶಂಕರನ್ ನಂಬಿಯಾರ್ ಮಾಸ್ತರ್, ರಾಮರಂ ಮುಹಮ್ಮದ್ ಮಾಸ್ತರ್ ಮತ್ತು ಪಿ.ವಿ.ಕುಞÂ್ಞ ರಾಮನ್ ಮಾಸ್ತರ್ ಅವರನ್ನು ಪ್ರೊ. ಕೆ.ಪಿ.ಜಯರಾಜನ್ ಪೆÇನ್ನಡಾ ಅವರು ಗೌರವಿಸಿದರು. ಶಿಕ್ಷಣ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ರಾಧಾ, ಪದ್ಮಾವತಿ, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎಂ. ಸಂಧ್ಯಾ ಮತ್ತು ಕೌನ್ಸಿಲರ್ ಪಿ.ಭಾರ್ಗವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೀಲೇಶ್ವರ ಪಂಚಾಯತ್ ಮಂಡಳಿಯ ಸದಸ್ಯರಾಗಿದ್ದ ಭಾರ್ಗವಿ ಟೀಚರ್ ಅವರನ್ನು ಆಗಿನ ಶಿಕ್ಷಣ ಸ್ಥಾಯಿ ಸಮಿತಿಯ ಸಹ ಸದಸ್ಯರಾದ ಪಿ.ಪಿ. ಮೊಹಮ್ಮದ್ ರಫಿ ಮತ್ತು ಎರುವತ್ ಮೋಹನನ್ ಅವರು ಸನ್ಮಾನಿಸಿದರು.
ಕೌನ್ಸಿಲರ್‍ಗಳಾದ ಪಿ.ಕುಞÂ್ಞ ಕೃಷ್ಣ, ಎ.ವಿ.ಸುರೇಂದ್ರನ್ ಮಾಸ್ತರ್, ವಿ.ಕೆ.ರತೀಶ, ವಿ.ವಿ.ರಾಧಾಕೃಷ್ಣನ್ ಉಪಸ್ಥಿತರಿದ್ದು ಶುಭಹಾರೈಸಿದರು.