ಕಾಸರಗೋಡು: ರಾಜಪುರಂ ಬಳಾಲ್ ರಸ್ತೆಯ ಕೋಟೆಕುನ್ನು ಪ್ರದೇಶದಲ್ಲಿ ಬಿರಿಸಿನ ಮಳೆಗೆ ಬಂಡೆಕಲ್ಲು ಉರುಳಿ ಹಾನಿ ಸಂಭವಿಸಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇತೃತ್ವದ ತಂಡ ಭಾನುವಾರ ಭೇಟಿ ನೀಡಿದೆ. ಇಲ್ಲಿನ 13 ಕುಟುಂಬಗಳನ್ನು ಸುರಕ್ಷಿತ ತಾಣಕ್ಕೆ ವರ್ಗಾವಣೆ ನಡೆಸಲು ಜಿಲ್ಲಧಿಕಾರಿ ಆದೇಶ ನೀಡಿದರು. ರಾಜಪುರಂ ಬಳಾಲ್ ರಸ್ತೆಯ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ವೆಳ್ಳಿಕುಂಡ್ ಕಿರು ಸಿವಿಲ್ ಸ್ಟೇಷನ್ ನಿರ್ಮಾಣ ಪ್ರದೇಶ ಮತ್ತು ನೀರ್ಮರಿ ಪ್ರದೇಶಗಳಿಗೂ ಜಿಲ್ಲಾಧಿಕಾರಿ ಭಾನುವಾರ ಭೇಟಿ ನೀಡಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ತಹಸೀಲ್ದಾರ್ ಪಿ.ಕುಂuಟಿಜeಜಿiಟಿeಜಕಣ್ಣನ್, ಜಿಲ್ಲಾ ಮಣ್ಣು ಸಂರಕ್ಷಣೆ ಅಧಿಕಾರಿ ವಿ.ಎಂ.ಅಶೋಕ್ ಕುಮಾರ್ ಜತೆಗಿದ್ದರು.