ಕೋಝಿಕ್ಕೋಡ್: ಕಳೆದ ವಾರ ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟ ಡ್ರಗ್ ಗ್ಯಾಂಗ್ ನೊಂದಿಗೆ ಚಲನಚಿತ್ರ ತಾರೆ ಮತ್ತು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಸಂಬಂಧ ಹೊಂದಿದ್ದಾರೆ ಎಂದು ಯೂತ್ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಫಿರೋಜ್ ಆರೋಪಿಸಿದ್ದಾರೆ. ಬಂಧಿತನಾಗಿರುವ ಮೊಹಮ್ಮದ್ ಅನೂಪ್ ಗೆ ಬಿನೀಶ್ ಕೊಡಿಯೇರಿ ಹಣ ಪಾವತಿಸುತ್ತಿದ್ದಾರೆ ಮತ್ತು ಇಬ್ಬರಿಗೂ ನಿಕಟ ಸಂಬಂಧವಿದೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಅನಿಕಾ ಅವರೊಂದಿಗೆ ಇದ್ದ ಮೊಹಮ್ಮದ್ ಅನೂಪ್ ಮತ್ತು ರಿಜೇಶ್ ರವೀಂದ್ರನ್ ಅವರೊಂದಿಗೆ ಬಿನೀಶ್ ಕೊಡಿಯೇರಿ ನಿಕಟ ಸಂಬಂಧ ಹೊಂದಿದ್ದಾರೆ. ತನಿಖಾ ಅಧಿಕಾರಿಗಳಿಗೆ ಮೊಹಮ್ಮದ್ ಅನೂಪ್ ನೀಡಿದ ಹೇಳಿಕೆಯಿಂದ ಇದು ಸ್ಪಷ್ಟವಾಗಿದೆ ಎಂದು ಪಿಕೆ ಫಿರೋಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಟೆಲಿವಿಷನ್ ಧಾರಾವಾಹಿ ನಟಿ ಅನಿಕಾ, ಅನೂಪ್ ಮೊಹಮ್ಮದ್ ಮತ್ತು ರಿಜೇಶ್ ರವೀಂದ್ರನ್ ಅವರನ್ನು ಮಾದಕ ದ್ರವ್ಯಗಳಿಗೆ ಸಂಬಂಧಿಸಿದಂತೆ ಮಾದಕವಸ್ತು ನಿಯಂತ್ರಣ ಬ್ಯೂರೋ ಬಂಧಿಸಿದೆ.
ಬಂಧಿತರೊಂದಿಗೆ ಲಾಕ್ ಡೌನ್ ಸಮಯದಲ್ಲಿ ಜೂನ್ 19 ರಂದು ಕುಮರಗಂನಲ್ಲಿ ನಡೆದ ರಾತ್ರಿ ಪಾರ್ಟಿಯಲ್ಲಿ ಬಿನೀಶ್ ಕೊಡಿಯೇರಿ ಭಾಗವಹಿಸಿದ್ದರು ಎಂದು ಫಿರೋಜ್ ಆರೋಪಿಸಿದ್ದಾರೆ. ಕುಮರಕಂ ನಲ್ಲಿ ಅನೂಪ್ ಮೊಹಮ್ಮದ್ ಪಾನಮತ್ತನಾಗಿ ರಾತ್ರಿ ಪಾರ್ಟಿ ನಡೆಸಿದ್ದಾರೆ ಮತ್ತು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಫಿರೋಜ್ ಒತ್ತಾಯಿಸಿರುವರು.
ಅನೂಪ್ ಕಮ್ಮನಹಳ್ಳಿ ಅವರು 2015 ರಲ್ಲಿ ಪ್ರಾರಂಭಿಸಿದ ಹೋಟೆಲ್‍ನಲ್ಲಿ ಬಿನೀಶ್ ಕೊಡಿಯೇರಿ ಹೂಡಿಕೆ ಮಾಡಿದ್ದಾರೆ. 2019 ರಲ್ಲಿ ಅನೂಪ್ ಮತ್ತೊಂದು ಹೋಟೆಲ್ ನ ಬಗ್ಗೆ ಅಭಿನಂದನೆ ಸಲ್ಲಿಸಿ ಅದನ್ನು ತನ್ನ ಫೇಸ್‍ಬುಕ್ ಪುಟದಲ್ಲಿ ನೇರಪ್ರಸಾರ ಮಾಡಿದ್ದರು. ತನಿಖಾಧಿಕಾರಿಗಳು ಆರೋಪಿಗಳ ಫೆÇೀನ್ ದಾಖಲೆಗಳನ್ನು ಪರಿಶೀಲಿಸುವಾಗ ಆಘಾತಕಾರಿ ಮಾಹಿತಿಯನ್ನು ಪಡೆದಿರುವರು. ಚಿನ್ನ ಕಳ್ಳಸಾಗಣೆ ಪ್ರಕರಣದ ಮುಖ್ಯ ಆರೋಪಿ ಸ್ವಪ್ನಾ ಸುರೇಶ್ ಅವರು ಕೇರಳವನ್ನು ತೊರೆದ ಬಳಿಕ ಜುಲೈ 10 ರಂದು ಅನೂಪ್ ಮತ್ತು ಬಿನೀಶ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದರು ಎಂದು ಫಿರೋಜ್ ಹೇಳಿದ್ದಾರೆ.
ಜುಲೈ 10 ರಂದು ಬಿನೀಶ್ ಕೊಡಿಯೇರಿ ಬೆಂಗಳೂರಿನಲ್ಲಿದ್ದರು. ಬಂಧಿತ ವ್ಯಕ್ತಿಗಳು ಕೇರಳ ಚಲನಚಿತ್ರೋದ್ಯಮ, ರಾಜಕೀಯ ನಾಯಕತ್ವ ಮತ್ತು ಚಿನ್ನದ ಕಳ್ಳಸಾಗಾಣಿಕೆದಾರರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಬಂಧಿತ ವ್ಯಕ್ತಿಗಳ ರಿಮಾಂಡ್ ವರದಿಯಲ್ಲಿ ಅಂತಹ ಲಿಂಕ್‍ಗಳ ಬಗ್ಗೆಯೂ ಉಲ್ಲೇಖವಿದೆ. ಈ ಸಂದರ್ಭದಲ್ಲಿ, ತನಿಖೆಯನ್ನು ದಿಕ್ಕುತಪ್ಪಿಸುವ ಸಾಧ್ಯತೆಯಿದೆ.
ಸುದ್ದಿಗೆ ಪ್ರತಿಕ್ರಿಯಿಸಿದ ಬಿನೀಶ್ ಕೊಡಿಯೇರಿ ಅವರು 2013 ರಿಂದ ಅನೂಪ್ ಅವರ ಪರಿಚಯವಿರುವುದು ಹೌದು. ಆದರೆ ಮಾದಕವಸ್ತು ಕಳ್ಳಸಾಗಣೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಏಷ್ಯಾನೆಟ್ ನ್ಯೂಸ್‍ಗೆ ಬಿನೀಶ್ ಅವರ ಪ್ರತಿಕ್ರಿಯೆ. 'ನನಗೆ ಅನೂಪ್ ಮೊಹಮ್ಮದ್ ಚೆನ್ನಾಗಿ ಗೊತ್ತು. ವರ್ಷಗಳ ಅನುಭವ ಮತ್ತು ಸ್ನೇಹವಿದೆ. ಅನೂಪ್ ಅಂತಹ ಪ್ರಕರಣದಲ್ಲಿ ಭಾಗಿಯಾಗಿರುವುದು ನಂಬಲಾಗದ ಸುದ್ದಿ. ಇದು ಅವರಿಗೆ ಮಾತ್ರವಲ್ಲದೆ ಅವರ ಸ್ನೇಹಿತರಿಗೂ ದೊಡ್ಡ ಆಶ್ಚರ್ಯವಾಗಿದೆ ಎಂದು ಬಿನೀಶ್ ಹೇಳಿರುವರು.