ಕಾಸರಗೋಡು: ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 60ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಬುಧವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 108 ಕಾಯಿಗಳ ಗಣ ಹೋಮ, ಶ್ರೀಸೂಕ್ತ ಹೋಮ, ಶ್ರೀದೇವರ ಪೂಜೆ, ಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಬಳಿಕ ಶ್ರೀಗಳಿಂದ ಸೀಮೋಲ್ಲಂಘನ, ಮೃತ್ತಿಕಾ ವಿಸರ್ಜನೆ, ಬಳಿಕ ಪುರ ಪ್ರವೇಶ ನಡೆಯಿತು. ಸಂಜೆ ಉಷಾ ಈಶ್ವರ ಭಟ್ ಹಾಗೂ ವಿದ್ವಾನ್. ಯೋಗೀಶ ಶರ್ಮ ಬಳ್ಳಪದವು ಅವರಿಂದ ಭಜನಾ ನಾಮ ಸಂಕೀರ್ತನೆ ನಡೆಯಿತು. ಹಿಮ್ಮೇಳದಲ್ಲಿ ವಿದ್ವಾನ್ ಈಶ್ವರ ಭಟ್ ಕಾಸರಗೋಡು ಹಾಗೂ ಲವ ಕುಮಾರ ಐಲ ಸಹಕರಿಸಿದರು. ಬಳಿಕ ಭಜನಾ ಮಂಗಳಾಚರಣೆ ನೆರವೇರಿತು. ಶ್ರೀಗಳು ಶುಭ ಹಾರೈಸಿ ಆಶೀರ್ವಚನ ನೀಡಿದರು.