HEALTH TIPS

ಸಮಾಜ ಘಾತುಕರ ಹುಟ್ಟಡಗಿಸಲು ಪೋಲೀಸರಿಂದ ವಿಶೇಷ ಕಾರ್ಯಾಚರಣೆ

 

       ಮಂಜೇಶ್ವರ: ಕರ್ನಾಟಕ ಹಾಗೂ ಕೇರಳದ ವಿವಿಧ ಜಿಲ್ಲೆಗಳಲ್ಲಿ ಇತ್ತೀಚೆಗೆ ಗಣನೀಯ ಪ್ರಮಾಣದಲ್ಲಿ ಸೆರೆಯಾಗುತ್ತಿರುವ ಗಾಂಜಾ, ಕಾಳ ಧನ ಸಾಗಾಟ ಹಾಗೂ ಇತರ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿಯಾಗಿರುವವರಲ್ಲಿ ಹೆಚ್ಚಿನ ಮಂದಿಗಳೂ ಮಂಜೇಶ್ವರ ಠಾಣಾ ವ್ಯಾಪ್ತಿಯವರಾಗಿರುವ ಹಿನ್ನೆಲೆಯಲ್ಲಿ ಅಂತಹ ಕ್ರಿಮಿನಲ್ ಅಪರಾಧಿಗಳು ಇರುವ ಪ್ರದೇಶಗಳನ್ನು ಕೇಂದ್ರೀಕರಿಸಿ ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠರ ನಿರ್ದೇಶನದಂತೆ ಕಾಸರಗೋಡು ಡಿ ವೈ ಎಸ್ಪಿ ಬಾಲಕೃಷ್ಣ, ಮಂಜೇಶ್ವರ ವೃತ್ತ ನಿರೀಕ್ಷಕ ಅನೂಪ್ ಕುಮಾರ್ ಹಾಗೂ ಮಂಜೇಶ್ವರ ಎಸ್.ಐ. ರಾಘವನ್ ನೇತೃತ್ವದಲ್ಲಿ ಹಲವು ಕಡೆ ದಾಳಿಗಳು ನಡೆಯುತ್ತಿವೆ. 

        ಮಂಜೆಶ್ವರ ಪೆÇಲೀಸ್ ಠಾಣಾ ವ್ಯಾಪ್ತಿಯ ಕನಿಯಾಲ, ಬಳ್ಳೂರು, ಬೆಜ್ಜಂಗಳ, ಮೀಯಪದವು, ಧರ್ಮತ್ತಡ್ಕ, ಕುರುಡಪದವು ಮೊದಲಾದ ಸ್ಥಳಗಳಲ್ಲಿ ವಿಶೇಷ ತರಬೇತಿ ಪಡೆದ ಪೆÇಲೀಸ್ ಶ್ವಾನದೊಂದಿಗೆ ಪೆÇಲೀಸರು ದಾಳಿ ನಡೆಸಿದರು.

        ರಾಜ್ಯದ ಹೊರಗೆ ಹಾಗೂ ಒಳಗೆ ಭೂಗತ ಪಾತಕಿಗಳೊಂದಿಗೆ ಸಂಪರ್ಕ ಇರುವವರು, ಗಾಂಜಾ ಮಾಫಿಯಾಗಳು ಹಾಗೂ ಇತರ ಕ್ರಿಮಿನಲ್ ಹಿನ್ನೆಲೆಯಲ್ಲಿರುವವರು ತಂಗಿದ್ದಾರೆಂಬ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆಸಿರುವುದಾಗಿ ಕಾಸರಗೋಡು ಡಿ ವೈ ಎಸ್ಪಿ  ಸಮರಸ ಸುದ್ದಿಗೆ  ಪ್ರತಿಕ್ರಿಯಿಸಿದ್ದಾರೆ. ಈ ದಾಳಿಗಳು ಮಾಫಿಯಾಗಳನ್ನು ಸದ್ದಡಗಿಸುವ ತನಕ ಮುಂದುವರಿಯಲಿರುವುದಾಗಿ ಅವರು ಹೇಳಿದರು.

        ಗಡಿ ಪ್ರದೇಶದಲ್ಲಿ ರಾತ್ರಿ ಕಾಲದಲ್ಲಿ ಅನಧಿಕೃತ ಮರಳು ದಂಧೆ ನಡೆಸುವ ತಂಡದೊಂದಿಗೆ ನಿಕಟ ಸಂಪರ್ಕ ಹೊಂದಿರುವ ಬಗ್ಗೆ ಪೆÇಲೀಸರಿಗೆ ಮಾಹಿತಿ ಲಭಿಸಿದೆ. ಈ ಆಧಾರದಲ್ಲಿ ಮರಳು ದಂಧೆಗೆ ರಾತ್ರಿ ಕಾಲದಲ್ಲಿ ಬೆಂಗಾವಲಾಗಿ ನಿಲ್ಲುವವರ ಬಗ್ಗೆ ಕೂಡಾ ಪೆÇಲೀಸರು ನಿಗಾದಲ್ಲಿ ಇರಿಸಿರುವರು. ಜೊತೆಗೆ ರಾತ್ರಿ ಕಾಲದಲ್ಲಿ ವಿನಾ ಕಾರಣ ತಿರುಗಾಡುತ್ತಿರುವವರ ವಿರುದ್ದವೂ ಕಠಿಣ ಕ್ರಮ ಜರಗಿಸುವುದಾಗಿ ಪೆÇಲೀಸರು ತಿಳಿಸಿದ್ದಾರೆ.

        ಕ್ರಿಮಿನಲ್ ಹಿನ್ನೆಲೆಯಿರುವ ಮನೆಗಳನ್ನು ಪೆÇಲೀಸ್ ಡಾಗ್ ಸ್ಕ್ವಾಡ್ ತಂಡ ಪರಿಶೋಧನೆ ನಡೆಸಿದೆ.      


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries