ನವದೆಹಲಿ: ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮೋದಿ ಸರ್ಕಾರ ಆರಂಭಿಸಿರುವ 'ಪ್ರಧಾನಮಂತ್ರಿ ಸ್ವನಿಧಿ' ಯೋಜನೆಯನ್ನು ಶ್ಲಾಘಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಈ ಯೋಜನೆಯು ಭಾರತದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಸಬಲೀಕರಣಗೊಳಿಸುವ ಗುರಿ ಹೊಂದಿದೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಬೀದಿವ್ಯಾಪಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ 'ಸ್ವನಿಧಿ ಸಂವಾದ್' ನಡೆಸಿದ ಅಮಿತ್ ಷಾ ಅವರು, ಪ್ರತಿಯೊಬ್ಬ ನಾಗರಿಕರ ಏಳಿಗೆಯ ಮೇಲೆ ಭಾರತದ ಅಭಿವೃದ್ಧಿ ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ಸಮಾಜದ ಎಲ್ಲಾ ವರ್ಗಗಳ ಸಬಲೀಕರಣಕ್ಕೆ ಬದ್ಧರಾಗಿದ್ದಾರೆ.
ಬೀದಿ ಬದಿ ವ್ಯಾಪಾರಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಮೋದಿಯವರ ದೂರದೃಷ್ಟಿಯ ದೃಷ್ಟಿ ಮತ್ತು ಬಡವರ ಕಲ್ಯಾಣದ ಬಗೆಗಿನ ಅವರ ಸೂಕ್ಷ್ಮತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಪ್ರಧಾನಮಂತ್ರಿ-ಸ್ವನಿಧಿ ಯೋಜನೆಯು ಕೋವಿಡ್ -19ರ ಸಂಕಷ್ಟದ ಸಮಯದಲ್ಲಿ ಕೋಟ್ಯಂತರ ಬಡವರಿಗೆ ಜೀವನೋಪಾಯವನ್ನು ಪುನರುಜ್ಜೀವನಗೊಳಿಸುವ ಮೂಲಕ ಸೇವೆ ಸಲ್ಲಿಸುತ್ತಿದೆ. ಸಣ್ಣ ಉದ್ಯಮಗಳನ್ನು ಆತ್ಮ ನಿರ್ಭರ್ ಯೋಜನೆ ಸಕಾರಗೊಳಿಸುವುದರ ಮೂಲಕ ನವಭಾರತ ಕಲ್ಪನೆಯನ್ನು ಸಕಾರಗೊಳಿಸಲಾಗುತ್ತಿದೆ ಎಂದು ಹೇಳಿದ್ದಾರೆ.