ತ್ರಿಶೂರ್: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಗೆ ನಿನ್ನೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು. ಸ್ವಪ್ನಾ ಅವರನ್ನು ತ್ರಿಶೂರ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‍ಐ ವರದಿ ಮಾಡಿದೆ. ಸ್ವಪ್ನಾ ರನ್ನು ವಿಯೂರ್ ಮಹಿಳಾ ಕಾರಾಗೃಹದಲ್ಲಿ ದಾಖಲಿಸಲಾಗಿತ್ತು.
ವಿಯೂರ್ ಜೈಲಿನ ವೈದ್ಯರು ನಿನ್ನೆ ಮಧ್ಯಾಹ್ನ ಅನಾರೋಗ್ಯಕ್ಕೀಡಾದ ಸಪ್ನಾ ರನ್ನು ಪರೀಕ್ಷಿಸಿದರು. ನಂತರ ಅವರನ್ನು ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಲಾಯಿತು. ಸಪ್ನಾ ಪ್ರಸ್ತುತ ವೈದ್ಯಕೀಯ ಕಾಲೇಜಿನಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಸ್ವಪ್ನಾಳ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೂ ಮೊದಲು ಸ್ವಪ್ನಾ ಸುರೇಶ್ ವಿಚಾರಣೆ ವೇಳೆ ಎದೆ ನೋವಿನಿಂದ ಬಳಲುತ್ತಿದ್ದರು. ಆ ಸಮಯದಲ್ಲಿ, ಸ್ವಪ್ನಾಳ ಇಸಿಜಿ ಪರೀಕ್ಷೆ ನಡೆಸಲಾಗಿದ್ದು, ವೈಪರೀತ್ಯ ಕಂಡುಬಂದಿತ್ತೆಂದು ಎನ್ ಐ ಎ ಮೂಲಗಳು ತಿಳಿಸಿವೆ. ಆಗಸ್ಟ್ 17 ರಂದು ಇಸಿಜಿ ನಡೆಸಲಾಗಿತ್ತು.
ಪ್ರಕರಣದ ಇತರ ಎಂಟು ಆರೋಪಿಗಳಾದ ಸರಿತ್, ಸಂದೀಪ್ ನಾಯರ್, ರೆಮಿಸ್ ಮತ್ತು ಸಂಜು ಅವರನ್ನು ವಿಯೂರ್ ಹೈ ಸೆಕ್ಯುರಿಟಿ ಜೈಲಿನಲ್ಲಿ ಇರಿಸಲಾಗಿದೆ. ಈ ಹಿಂದೆ ಕಕ್ಕನಾಡ್ ಜೈಲಿನಲ್ಲಿ ದಾಖಲಾಗಿದ್ದ ಸಪ್ನಾ ಅವರನ್ನು ತನಿಖಾ ವಿಧೇಯತೆಗಳು ಮುಗಿದ ಕಾರಣ ಶುಕ್ರವಾರ ಮಧ್ಯರಾತ್ರಿ ವಿಯೂರ್‍ಗೆ ಕರೆತರಲಾಗಿತ್ತು. ಜೈಲಿನಲ್ಲಿ ವಿಶೇಷ ಮಹಿಳಾ ಬ್ಲಾಕ್ ಇಲ್ಲದ ಕಾರಣ ಸ್ವಪ್ನಾ ಅವರನ್ನು ಕಕ್ಕನಾಡ್ ಜೈಲಿನಲ್ಲಿ ಇರಿಸಲಾಗಿತ್ತು.