ಕಾಸರಗೊಡು:ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳನ್ನು ಸೇರಿಸಿ ಅಭಿವೃದ್ಧಿಯ ಹಾದಿಗೆ ರಾಜ್ಯ ಸರಕಾರದ ಕೊಡುಗೆ ನೀಡಲು ಯೋಜನೆ ಹಮ್ಮಿಕೊಂಡಿದೆ ಎಂದು ಪ್ರವಾಸೋದ್ಯಮ ಸಚಿವ ಕಡಕಂಪಳ್ಳಿ ಸುರೇಂದ್ರನ್ ನುಡಿದರು.
ಪ್ರವಾಸೋದ್ಯಮ ವಲಯದ ಅಭಿವೃದ್ಧಿಗಾಗಿ ಕಾಞಂಗಾಡು ನಗರದಲ್ಲಿ ನಿರ್ಮಿಸುವ ಟೌನ್ ಸ್ಕ್ವೇರ್ ನಿರ್ಮಾಣಕ್ಕೆ ವೀಡಿಯೋ ಕಾನ್ ಪೆರೆನ್ಸ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. 5 ಕೋಟಿ ರೂ.ನಲ್ಲಿ ನಿರ್ಮಾಣಗೊಳ್ಳಿರುವ ಯೋಜನೆ ಈ ಮೂಲಕ ಪ್ರಾರಂಭ ಲಭಿಸಿದೆ.
ಮಲಬಾರ್ ಪ್ರದೇಶದ ಉತ್ತರ ಭಾಗಗಳಲ್ಲಿ ಪ್ರವಾಸೋದ್ಯಮ ಸಾಧ್ಯತೆಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ನಾಡಿನ ಸ್ವಂತಿಕೆಗೆ, ಪ್ರಕೃತಿಗೆ ಧಕ್ಕೆ ಬಾರದಂತೆ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ನುಡಿದರು.
ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಮುಖ್ಯ ಅತಿಥಿಯಾಗಿದ್ದರು. ಕಾಞಂಗಾಡ್ ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ನಗರಸಭೆ ಉಪಾಧ್ಯಕ್ಷೆ ಎನ್.ಸುಲೈಖಾ, ವಾರ್ಡ್ ಸದಸ್ಯ ಎಚ್.ರಂಷೀದಾ ಮೊದಲಾದವರು ಉಪಸ್ಥಿತರಿದ್ದರು.