ಕೊಚ್ಚಿ: ಉಗ್ರ ಸಂಘಟನೆಯಾದ ಐಎಸ್ ನೊಂದಿಗೆ ಸೇರಿ ಏಷ್ಯಾ ರಾಷ್ಟ್ರಗಳ ವಿರುದ್ದ ಆಕ್ರಮಣಗಳಲ್ಲಿ ಭಾಗಿಯಾದ ತೊಡುಪುರ ಮಾರುಕಟ್ಟೆ ರಸ್ತೆಯ ಸುಬಾನಿ ಹಾಜ ಮೊಯ್ದೀನ್ ನಿಗೆ ಎನ್.ಐ.ಎ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜೊತೆಗೆ 2,10,000 ರೂ.ಗಳ ದಂಡವನ್ನೂ ವಿಧಿಸಿದೆ.
ಐಎಸ್ ನೊಂದಿಗೆ ಸೇರಿ ವಿದೇಶ ರಾಷ್ಟ್ರಗಳಲ್ಲಿ ಭಾರತದ ಸ್ನೇಹಶೀಲ ರಾಷ್ಟ್ರಗಳಲ್ಲಿ ಆಕ್ರಮಣ ನಡೆಸಿದ ಆರೋಪದಲ್ಲಿ ಎನ್.ಐ.ಎ. ರಾಜ್ಯದಲ್ಲೇ ದಾಖಲಿಸಿದ ಮೊತ್ತಮೊದಲ ಪ್ರಕರಣ ಇದಾಗಿದೆ. ಪ್ರಕರಣ ಸಂಬಂಧ ಅಪರಾಧಿಗೆ ಯು.ಎ.ಪಿ.ಎ.20 ಪ್ರಕರಣದಡಿ ಜೀವಾವಧಿ ಶಿಕ್ಷೆಯನ್ನೂ ಒಂದು ಲಕ್ಷ ರೂ.ಗಳ ದಂಡವನ್ನೂ ಎನ್‍ಐಎ ನ್ಯಾಯಾಲಯ ವಿಧಿಸಿದೆ. 120 ಬಿ. ಪ್ರಕರಣದಡಿ 5 ವರ್ಷಗಳ ಜೈಲು ಶಿಕ್ಷೆಯನ್ನೂ 10 ಸಾವಿರ ರೂ.ಗಳ ದಂಡವನ್ನೂ ವಿಧಿಸಲಾಗಿದೆ. ಐವಿಸಿ 125 ಪ್ರಕರಣದಡಿ ಏಳು ವರ್ಷಗಳ ಜೈಲು ಒಂದು ಲಕ್ಷ ರೂ.ಗಳ ದಂಡವನ್ನೂ, ಯುಎವಿಐ 38,39 ಪ್ರಕರಣದಂತೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗಿದೆ.
ಸುಬಾನಿ ಹಾಜ ಮೊಯ್ದೀನ್(34) ತಪ್ಪಿತಸ್ಥನೆಂದು ಎನ್ ಐ ಎ ಪ್ರತ್ಯೇಕ ನ್ಯಾಯಾಲಯವು ಈ ಬಗ್ಗೆ ತೀರ್ಪುನೀಡಿದೆ. ಇರಾಕ್ ರಾಷ್ಟ್ರದ ಎದುರು ಶಸ್ತ್ರಸಜ್ಜಿತ ಹೋರಾಟ ನಡೆಸಿದ ಅಪರಾಧವನ್ನು ಆಲಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ. ಭಾರತದ ಸ್ನೇಹಿತ ರಾಷ್ಟ್ರಗಳ ವಿರುದ್ದ ಭಾರತದ ಪ್ರಜೆ ಯುದ್ದ ಹೂಡುವುದರ ಅಡಿಯಲ್ಲಿ ಕೇರಳದಲ್ಲೇ ದಾಖಲಾದ ಮೊತ್ತಮೊದಲ ದೂರು ಇದಾಗಿದೆ.
ಜೀವಾವಧಿ ಶಿಕ್ಷೆ, ದಂಡ ವಿಧಿಸಬಹುದಾದ ಕುಕೃತ್ಯಗಳ ಬಗ್ಗೆ ಸುಬಾನಿಯನ್ನು ಸಮಗ್ರ ವಿಚಾರಣೆ ನಡೆಸಲಾಗಿತ್ತು. ಭಾರತದ ಶಿಕ್ಷಾ ನಿಬಂಧನೆಗಳ 125, 122, 120 ಬಿ ಕಾಯ್ದೆ, ಯುಎಪಿಎ (ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ)20,38, 39 ಕಾಯ್ದೆ ಯನ್ವಯ ಶಿಕ್ಷೆ ನೀಡಲಾಯಿತು. ಈ ಪೈಕಿ ಐಪಿಸಿ 122 ಕಾಯ್ದೆಯ ಹೊರತು ಮಿಕ್ಕುಳಿದವುಗಳಲ್ಲಿ ಸುಬಾನಿ ಅಪರಾಧಿಯೆಂದು ಖಾತ್ರಿಪಡಿಸಲಾಗಿದೆ. ಭಾರತದ ವಿರುದ್ದ ಹೋರಾಡಲು ಆಯುಧ ಶೇಖರಿಸಿ, ಜನರನ್ನು ಸಂಘಟಿಸಿದ ಕಾಯ್ದೆಯನ್ವಯ (ಐವಿಸಿ 122) ಸಾಕ್ಷಿಗಳ ಕೊರತೆಯಿಂದ ಆ ಒಂದು ದೂರನ್ನು ಕೈಬಿಡಲಾಯಿತು. ಎನ್.ಐ.ಎ. ಐ.ಎಸ್.ವಿ., ಎ.ಐ.ಶೌಕತಲಿ ತನಿಖೆ ನಡೆಸಿದ ವಾದದಂತೆ ನ್ಯಾಯಾಧೀಶ ವಿ.ಕೃಷ್ಣಕುಮಾರ್ ಆರೋಪಿ ಅಪರಾಧಿಯೆಂದು ತೀರ್ಪು ನೀಡಿದವರು.
2015ರಲ್ಲಿ ತುರ್ಕಿ ರಾಷ್ಟ್ರದ ಮೂಲಕ ಇರಾಕಿಗೆ ತೆರಳಿ ಸುಬಾನಿ ಐಎಸ್ ಗೆ ಸೇರ್ಪಡೆಗೊಂಡು ಶಸ್ತ್ರಾಸ್ತ್ರ ತರಬೇತಿ ಪಡೆದು ಮೊಸುಲ್ ನ ಯುದ್ದಭೂಮಿಯಲ್ಲಿ ಇತರರೊಂದಿಗೆ ಸೇರಿ ಚಟುವಟಿಕೆ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ. 2016ರಲ್ಲಿ ಕಣ್ಣೂರು ಕನಕಮಲೆಯಲ್ಲಿ ರಾಷ್ಟ್ರ ವಿರುದ್ದ ಚಟುವಟಿಕೆಗಳಿಗೆ ಗೂಢಾಲೋಚನೆ ನಡೆಸಿದ ಪ್ರಕರಣದ ಪ್ರತಿಗಳೊಂದಿಗೆ ಸುಬಾನಿಯನ್ನು ಎನ್.ಐ.ಎ. ವಶಕ್ಕೆ ಪಡೆದುಕೊಂಡಿತ್ತು.