ಕಾಸರಗೋಡು: ಕಾಞಂಗಾಡ್ ಉಪ ಜಿಲ್ಲಾಧಿಕಾರಿಯಾಗಿ ಮೇಘಶ್ರೀ ಡಿ.ಆರ್. ಪದಗ್ರಹಣ ಮಾಡಿದ್ದಾರೆ. ಅವರು ಕರ್ನಾಟಕದ ಚಿತ್ರದುರ್ಗ ನಿವಾಸಿಯಾಗಿದ್ದಾರೆ. ಕಂಪ್ಯೂಟರ್ ಸಯನ್ಸ್ ನಲ್ಲಿ ಇಂಜಿನಿಯರಿಂಗ್ ಪದವೀಧರರು. ಸಿವಿಲ್ ಸರ್ವೀಸ್ ಲಭಿಸಿದ ನಂತರ ಮೊದಲ ನೇಮಕಾತಿ ಇದಾಗಿದೆ. ಕೋಯಿಕೋಡ್ ನಲ್ಲಿ ಸಹಾಯಕ ಜಿಲ್ಲಾಧಿಕಾರಿಯಾಗಿ ಹೊಣೆಗಾರಿಕೆಯಲ್ಲಿದ್ದ ವೇಳೆ ಕಾಞಂಗಾಡ್ ಉಪ ಜಿಲ್ಲಾಧಿಕಾರಿಯಾಗಿ ಬಡ್ತಿ ಲಭಿಸಿದೆ.