ಕಾಸರಗೋಡು: ಸ್ವಚ್ಛ್ ಭಾರತ್ ಮಿಷನ್ ತ್ಯಾಜ್ಯ ಮುಕ್ತ ಭಾರತ ಅಭಿಯಾನ ಅಂಗವಾಗಿ ಜಿಲ್ಲಾ ಶುಚಿತ್ವ ಮಿಷನ್ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಿದ ಆನ್ ಲೈನ್ ಸ್ಪರ್ಧೆ ವಿಜೇತರ ಹೆಸರು ಘೋಷಿಸಲಾಗಿದೆ.
ಕನ್ನಡ ಪ್ರಬಂಧ ರಚನೆಯಲ್ಲಿ ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ವೈಷ್ಣವಿ ಪ್ರಥಮ ಬಹುಮಾನ, ಪೂಜಾ ಕೆ. ದ್ವಿತೀಯ ಬಹುಮಾನ, ಕಾಸರಗೋಡು ಬಿ.ಇ.ಎಂ. ಹೈಯರ್ ಸೆಕೆಂಡರಿ ಶಾಲೆಯ ಗಗನ್ ತೃತೀಯ ಬಹುಮಾನ ಪಡೆದರು. ಚಿತ್ರರಚನೆಯಲ್ಲಿ ಕೋಟಿಕುಳಂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೇವಾನಂದ ಪ್ರಥಮ ಬಹುಮಾನ, ಚಾಯೋತ್ ಸಿ.ಜಹಿ. ಹೈಯರ್ ಸೆಕೆಂಡರಿ ಶಾಲೆಯ ಲಕ್ಷ್ಮಿ ಪ್ರಿಯ ದ್ವಿತೀಯ ಬಹುಮಾನ, ಕುಂಡಂಕುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಬವುಷ್ ಭುವೇಷ್ ತೃತೀಯ ಬಹುಮಾನ ಗಳಿಸಿದ್ದಾರೆ. ಭಿತ್ತಿಪತ್ರ ರಚನೆಯಲ್ಲಿ ಕುಂಡಂಕುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ನವ್ಯಾ ಸಿ., ಉಜ್ವಲ್ ಪಿ. ದ್ವಿತೀಯ ಬಹುಮಾನ, ತಾಯಿನೇರಿ ಎಸ್.ಎ.ಬಿ.ಟಿ.ಎಂ. ಹೈಯರ್ ಸೆಕೆಂಡರಿ ಶಾಲೆಯ ರಿಸ್ವಾ ಇಸ್ಮಾಯಿಲ್ ತೃತೀಯ ಬಹುಮಾನ ಗಳಿಸಿರುವರು.