HEALTH TIPS

ಕೋವಿಡ್ ಪರೀಕ್ಷೆಗಳಲ್ಲಿ ಹೊಸ ನಿಯಮಾವಳಿ ಜಾರಿ- ಆರ್‍ಟಿ-ಪಿಸಿಆರ್ ಕಡ್ಡಾಯ

 

      ತಿರುವನಂತಪುರ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಗುರುವಾರ ಮತ್ತೆ ಹೊರಡಿಸಿದೆ. ಕೋವಿಡ್ ರೋಗಲಕ್ಷಣಗಳನ್ನು ಹೊಂದಿರುವವರಲ್ಲಿ ಪ್ರತಿಜನಕ ಪರೀಕ್ಷೆಯು ನಕಾರಾತ್ಮಕವಾಗಿದ್ದರೂ ಸಹ ಆರ್ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯವಾಗಿ ನಡೆಸಬೇಕೆಂದು ಆರೋಗ್ಯ ಇಲಾಖೆ ಶಿಫಾರಸು ಮಾಡಿದೆ.  ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ. 

      ಆರ್‍ಟಿ-ಪಿಸಿಆರ್ ಪರೀಕ್ಷೆಯು ನಿಖರ ಫಲಿತಾಂಶವನ್ನು ನೀಡುವುದರಿಂದ ಆರೋಗ್ಯ ಇಲಾಖೆ ಇಂತಹದೊಂದು ನಿಯಮವನ್ನು ಕಡ್ಡಾಯಮಾಡಲು ಸೂಚಿಸಿದೆ ಎಂದು ತಿಳಿದುಬಂದಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ದಿನಕ್ಕೆ 5,000 ಮೀರಿದರೆ, ಪರೀಕ್ಷೆಗಳನ್ನು ತ್ವರಿತವಾಗಿ ನಡೆಸಬೇಕು ಮತ್ತು ಫಲಿತಾಂಶಗಳು ಲಭ್ಯವಿರಬೇಕು ಎಂದು ಸರ್ಕಾರ ಮತ್ತು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.

        ಕೋವಿಡ್ ರೋಗಲಕ್ಷಣಗಳನ್ನು ಹೊಂದಿರುವ ಜನರಿಗೆ ಆಂಟಿಜೆನ್ ಪರೀಕ್ಷೆಯ ಫಲಿತಾಂಶವು ನಕಾರಾತ್ಮಕವಾಗಿದ್ದರೆ ಮಾತ್ರ ಪಿಸಿಆರ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕೋವಿಡ್ ಧನಾತ್ಮಕತೆಯನ್ನು ಕಂಡುಹಿಡಿಯಲು ಪರೀಕ್ಷೆಯು ಸವಾಲಾಗುತ್ತಿದೆ ಎಂಬ ಶೋಧನೆಯ ಅನುಸಾರ ಆಂಟಿಜೆನ್ ಪರೀಕ್ಷೆ ನಕಾರಾತ್ಮಕವಾಗಿದ್ದರೂ ಆರ್‍ಟಿ-ಪಿಸಿಆರ್ ನಡೆಸಬೇಕು ಎಂದು ಆರೋಗ್ಯ ಇಲಾಖೆ ಸ್ಪಷ್ಟ ನಿರ್ದೇಶನ ನೀಡಿದೆ.

      ಕೋವಿಡ್ ಬಾಧಿತರ ಸಂಖ್ಯೆ ಶೀಘ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಸ್ಕ್ರೀನಿಂಗ್ ವ್ಯವಸ್ಥೆಯನ್ನು ಬದಲಾಯಿಸುತ್ತಿದೆ. ರೋಗಲಕ್ಷಣಗಳಿಲ್ಲದೆ ಸೋಂಕಿನಿಂದ ಬಳಲುತ್ತಿರುವವರು ಮನೆಯಲ್ಲಿಯೇ ಇರಬೇಕು ಎಂದು ಸೂಚಿಸಲಾಗಿದೆ. ರೋಗಲಕ್ಷಣಗಳನ್ನು ತೋರಿಸುವವರಿಗೆ ಮತ್ತು ಇತರ ಕಾಯಿಲೆ ಇರುವವರನ್ನು ಚಿಕಿತ್ಸಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಹೇಳಿದ್ದಾರೆ.

       ಆರೋಗ್ಯ ಇಲಾಖೆಯ ಪ್ರಕಾರ ರಾಜ್ಯದ ಐದು ಜಿಲ್ಲೆಗಳಲ್ಲಿ ಕೋವಿಡ್ ಹರಡುವಿಕೆ ಹೆಚ್ಚಾಗಿದೆ. ತಿರುವನಂತಪುರ, ಆಲಪ್ಪುಳ, ಪತ್ತನಂತಿಟ್ಟು, ಕೋಝಿಕ್ಕೋಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಏಕಾಏಕಿ ಸೋಂಕು ಉಲ್ಬಣಗೊಂಡಿರುವುದು ಕಂಡುಬರುತ್ತಿದೆ. ರಾಜ್ಯದ ಕೋವಿಡ್ ಹರಡುವಿಕೆಯ ಅಂಕಿಅಂಶಗಳನ್ನು ಆಧರಿಸಿದ ಸಾಪ್ತಾಹಿಕ ವರದಿಯು ಈ ಜಿಲ್ಲೆಗಳ ಪರಿಸ್ಥಿತಿ ಕಳವಳಕಾರಿ ಎಂದು ಬೊಟ್ಟುಮಾಡಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries