ನವದೆಹಲಿ: ವಿಶ್ವದ ಜನಪ್ರಿಯ ಮೆಸೆಜಿಂಗ್ ಆ್ಯಪ್ ವಾಟ್ಸಪ್ ಬಳಕೆದಾರರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಶೀಘ್ರ ಚಾಟಿಂಗ್ ವಾಲ್ ಪೇಪರ್ ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿದೆ.
ಬಳಕೆದಾರರ ಆಸಕ್ತಿಯನ್ನು ಉಳಿಸಿಕೊಳ್ಳಲು, ವಾಟ್ಸಪ್ ಸಂಸ್ಥೆ ನಿರಂತರವಾಗಿ ಹೊಸ ನವೀಕರಣಗಳನ್ನು ತರುತ್ತಿದೆ. ಈಗ ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ವಾಟ್ಸಪ್ ತನ್ನ ಬಳಕೆದಾರರಿಗೆ ಹೊಸ ಮೆಸೇಜಿಂಗ್ ವೈಶಿಷ್ಟ್ಯಗಳನ್ನು ನೀಡುತ್ತಿದೆ.
ವಾಟ್ಸಪ್ ನಲ್ಲಿ ಚಾಟ್ ಮಾಡಲು ವಿಭಿನ್ನ ವಾಲ್‌ಪೇಪರ್‌ಗಳನ್ನು ಬಳಸುವ ಅವಕಾಶ ನೀಡುತ್ತಿದೆ. ಈಗಾಗಲೇ ಐಒಎಸ್ ನಲ್ಲಿ ಈ ವೈಶಿಷ್ಠ್ಯಗಳು ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ಆ್ಯಂಡ್ರಾಯ್ಡ್ ಫೋನ್ ಗಳಲ್ಲಿಯೂ ಈ ವೈಶಿಷ್ಟ್ಯಗಳನ್ನು ಪರಿಚಯಿಸುವುದಾಗಿ ಹೇಳಿದೆ. WABetaInfo ಮೂಲಗಳು ತಿಳಿಸಿರುವಂತೆ ವಾಟ್ಸಪ್ ನ ನೂತನ ಅಪ್ ಡೇಟ್ ವರ್ಷನ್ v2.20.199.5 ಬೀಟಾ ಆವೃತ್ತಿಯಲ್ಲಿ ಈ ನೂತನ ವೈಶಿಷ್ಠ್ಯಗಳನ್ನು ಕಾಣಬಹುದಾಗಿದೆ.
ಬಳಕೆದಾರರು ಪ್ರತಿ ಸ್ನೇಹಿತ ಮತ್ತು ಸಂಬಂಧಿಕರಿಗೆ ವಿಭಿನ್ನ ವಾಲ್‌ಪೇಪರ್‌ಗಳನ್ನು ಆಯ್ಕೆ ಮಾಡಬಹುದು. ಚಾಟ್ ಥೀಮ್ ವಿಭಿನ್ನ ವಾತಾವರಣವನ್ನು ಸೃಷ್ಟಿಸುತ್ತದೆ ಎನ್ನಲಾಗಿದೆ.