HEALTH TIPS

ದೇರಳಕಟ್ಟೆಯ ಯಕ್ಷರಂಗ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಯಕ್ಷಗಾನ ಅಕಾಡೆಮಿ ಪ್ರಾಯೋಜಿತ ಆನ್ ಲೈನ್ ಭಾಗವತಿಕೆ ತರಬೇತಿ ಉದ್ಘಾಟನೆ

        

      ಮಂಗಳೂರು : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಪ್ರಾಯೋಜಕತ್ವದಲ್ಲಿ , ಯಕ್ಷರಂಗ ಯಕ್ಷಗಾನ ತರಬೇತಿ ಕೇಂದ್ರ ದೇರಳಕಟ್ಟೆ ಇದರ ಆಶ್ರಯದಲ್ಲಿ ಎರಡು ತಿಂಗಳ ಉಚಿತ ಆನ್ಲೈನ್ ತೆಂಕುತಿಟ್ಟು ಭಾಗವತಿಕೆ ತರಬೇತಿಯ ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ  ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ದೇರಳಕಟ್ಟೆಯಲ್ಲಿ ನೆರವೇರಿತು.

ಯಕ್ಷರಂಗದ ಉಪಾಧ್ಯಕ್ಷರಾದ ಶ್ರೀ ಸನತ್ ರೈ ಸ್ವಾಗತಿಸಿದರು. ಶ್ರೀ ವಿಶ್ವನಾಥ ಕಾಯರ ಪಳಿಕೆ ಗುರುಸ್ವಾಮಿಗಳು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

       ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಕೈದಾಟಿಸುವಲ್ಲಿ ಯಕ್ಷಗಾನ ತರಬೇತಿ ಕಾರ್ಯಕ್ರಮಗಳು ಮುಂದುವರಿಯುತ್ತಾ ಇರಬೇಕು ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಳ್ಳುವುದನ್ನು ಪ್ರಶಂಸಿದರು.

         ಯಕ್ಷರಂಗದ ಅಧ್ಯಕ್ಷೆ ಶ್ರೀಮತಿ ಕಿಶೋರಿ ಆರ್ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇದರ ಸದಸ್ಯರಾದ ಶ್ರೀ ನವನೀತ ಶೆಟ್ಟಿ ಕದ್ರಿ ಇವರು ಮಾತನಾಡಿ ಭಾಗವತರುಗಳು ಭಾಗವತಿಕೆಯೊಂದಿಗೆ ಪ್ರಸಂಗ ಜ್ನಾನ, ರಂಗನಡೆ, ಮುಂತಾದುವುಗಳನ್ನುಕರಗತ ಮಾಡಿಕೊಂಡು ಹಿರಿಯರ ಮಾರ್ಗದರ್ಶನವನ್ನು ಪಡೆದರೆ ಸಮರ್ಥ ಭಾಗವತರುಗಳಾಗಬಹುದು ಎಂಬ ಹಿತನುಡಿಗಳನ್ನು ಯಕ್ಷಗಾನ ವಿದ್ಯಾರ್ಥಿಗಳಿಗೆ ನೀಡಿದರು.

    ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ ಮಾತನಾಡಿ ಆನ್ಲೈನ್ ಯಕ್ಷಗಾನ ಭಾಗವತಿಕೆಯನ್ನು ಶ್ಲಾಘಿಸುತ್ತಾ ಇದೊಂದು ಚಾರಿತ್ರಿಕ ಕಾರ್ಯಕ್ರಮ ಇದುವರೆಗೆ ಆನ್ ಲೈನ್ ಭಾಗವತಿಕೆ ತರಬೇತಿ ನಡೆದದ್ದಿಲ್ಲ. ವಿಶ್ವದ ಎಲ್ಲಾ ರಂಗಭೂಮಿಗಳೂ ಕೊರೋನಾ ಮಹಾಮಾರಿಯ ಹೊಡೆತಕ್ಕೆ ನಲುಗಿಹೋಗಿದೆ ಆದರೆ ಯಕ್ಷಗಾನ ರಂಗಭೂಮಿ ಇದನ್ನು ಸಮರ್ಥವಾಗಿ ಎದುರಿಸಿ ಆನ್ ಲೈನ್ ಯಕ್ಷಗಾನ, ತಾಳಮದ್ದಳೆ , ಗಾನವೈಭವದಂತ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿರುವುದು ಗಮನಾರ್ಹ ಹಾಗೂ ಪ್ರಶಂಸಾರ್ಹ ವಿಚಾರ ಎಂದು ಗಮನ ಸೆಳೆದು, ಯಕ್ಷರಂಗದ ದಿಟ್ಟ ಹೆಜ್ಜೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಅಕಾಡೆಮಿಯ ವತಿಯಿಂದ ಸಹಕಾರ ನೀಡುವುದಾಗಿ ಭರವಸೆಯ ಮಾತುಗಳನ್ನಾಡಿದರು. 

      ಯಕ್ಷಗುರು ಶ್ರೀ ರಾಮ ಸಾಲ್ಯಾನ್ ಮಂಗಲ್ಪಾಡಿ ಇವರು ವಿದ್ಯಾರ್ಥಿಗಳಲ್ಲಿ ಅಚಲವಾದ ಶ್ರದ್ಧೆ ಹಾಗೂ ಪೆÇೀಷಕರ ಸಹಕಾರವಿದ್ದರೆ ಪರಿಪೂರ್ಣ ಭಾಗವತರುಗಳಾಗಿ ರೂಪುಗೊಳ್ಳುತ್ತಾರೆ ಎಂಬ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಮೊಕ್ತೇಸರ ವಹಿಸಿದ್ದ ಚಂದ್ರಹಾಸ ಅಡ್ಯಂತಾಯ ವಹಿಸಿದ್ದರು. ಶ್ರೀ ಹಿತಾ ಆರ್.ಶೆಟ್ಟಿ ಪ್ರಾರ್ಥನಾ ಗೀತೆ ಹಾಡಿದರು. ಪಶುಪತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಯಕ್ಷರಂಗದ ಸಮಿತಿ ಸದಸ್ಯೆ ಸುಜಯಾ ಕುತ್ತಾರ್ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries