ಕಾಸರಗೋಡು: ಕೇರಳ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ನೇತೃತ್ವದಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಭಾನುವಾರ ಆಚರಿಸಲಾಯಿತು. ಕೋವಿಡ್ 19 ರ ಹಿನ್ನೆಲೆಯಲ್ಲಿ ಕಾರ್ಯಕ್ರಮವು ಆನ್ಲೈನ್ ಗೂಗಲ್ ಮೀಟ್ ವೇದಿಕೆಯಲ್ಲಿ ಜರಗಿತು.
ಉಪಕುಲಪತಿ ಪೆÇ್ರ. ಹೆಚ್.ವೆಂಕಟೇಶ್ವರಲು ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅವರು ಬಳಿಕ ಮಾತನಾಡಿ ಕೇರಳದ ಗ್ರಾಮೀಣ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಮತ್ತು ನಿರ್ದಿಷ್ಟವಾಗಿ ಕಾಸರಗೋಡಿನಲ್ಲಿ ಅದರ ವಿಸ್ತರಣೆಯ ಬಗ್ಗೆ ವಿವರಿಸಿದರು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ (ಕೆಟಿಡಿಸಿ) ಪರಿಣತಿಯನ್ನು ನೀಡಲು ವಿಶ್ವವಿದ್ಯಾಲಯವು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿ) ಯೊಂದಿಗೆ ಇಂಟರ್ನ್‍ಶಿಪ್ ಕಾರ್ಯಕ್ರಮಗಳನ್ನು ಏರ್ಪಡಿಸಲು ಉಪಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಪಕುಲಪತಿಗಳು ಭರವಸೆ ನೀಡಿದರು. ಎಂಬಿಎ ಪ್ರವಾಸೋದ್ಯಮ ಮತ್ತು ಪ್ರಯಾಣ ನಿರ್ವಹಣೆಯಂತಹ ಕಾರ್ಯಕ್ರಮಗಳಿಗೆ ಪದೇ ಪದೇ ಉದ್ಯಮ ಸಂವಹನ ನಡೆಸುವ ಅವಶ್ಯಕತೆಯ ಬಗ್ಗೆ ಉಪಕುಲಪತಿಗಳು ಒತ್ತಿ ಹೇಳಿದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿವಿಧ ಪಾಲುದಾರರೊಂದಿಗೆ ವಿಶ್ವವಿದ್ಯಾನಿಲಯವು ಒಪ್ಪಂದಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು.
"ಭಾರತದಲ್ಲಿ ಗ್ರಾಮೀಣ ಪ್ರವಾಸೋದ್ಯಮಕ್ಕಾಗಿ ಮಾರ್ಕೆಟಿಂಗ್ ತಂತ್ರಗಳು" ಎಂಬ ವಿಷಯದ ಬಗ್ಗೆ ದಿಲೀಪ್ ಪಿ (ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಂಟಿಮೈಸ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್) ಮತ್ತು "ಗ್ರಾಮೀಣ ಪ್ರವಾಸೋದ್ಯಮ ಉತ್ಪನ್ನಗಳು" ಎಂಬ ವಿಷಯದ ಬಗ್ಗೆ ಕೆ.ಪಿ.ಭಾರತಿ, ( ಪೆÇ್ರೀಗ್ರಾಮ್ ಲೀಡರ್ ,ಟೂರಿಸಂ ಫಾರ್ ಡೆವಲಪ್ಮೆಂಟ್ ಧನ್ ಫೌಂಡೇಶನ್, ಮಧುರೈ) ಮಾತನಾಡಿದರು.
ಕೇರಳದ ಕೇಂದ್ರ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಎ. ರಾಧಾಕೃಷ್ಣನ್ ನಾಯರ್, ಕೇರಳದ ಕೇಂದ್ರ ವಿಶ್ವವಿದ್ಯಾಲಯದ ವಾಣಿಜ್ಯ ಅಧ್ಯಯನ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ವಿಭಾಗದ ಪೆÇ್ರ..ಟಿ ಮಲ್ಲಿಕಾರ್ಜುನಪ್ಪ,ಪಾಂಡಿಚೇರಿ ವಿಶ್ವ ವಿದ್ಯಾಲಯದ ಪ್ರವಾಸೋದ್ಯಮ ವಿಭಾಗದ ಡಾ. ಸಿಬಿ ಪಿ ಯಸ್ ಶುಭಾಶಂಸನೆ ಗೈದರು.
ಗೂಗಲ್ ಮೀಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿ ಆರ್ ಡಿ ಸಿ ಬೇಕಲದ ಪ್ರಸಾದ್, ಪ್ರವಾಸೋದ್ಯಮ ವಿಷಯದ ಪರಿಣಿತರಾದ ಮಹಾದೇವನ್ ಪಿ , ಎರ್ನಾಕುಳಂನ ಸಿಲ್ಜೋ ಸಿ, ವಯನಾಡಿನ ಪಝಶಿರಾಜ ಕಾಲೇಜ್ ನ ದಿಲೀಪ್ , ಕೇರಳ ಕೇಂದ್ರ ವಿಶ್ವವಿದ್ಯಾಲಯದ ನಾಗರಾಜ ಶರ್ಮ, ಮೊಹಮ್ಮದ್ ಅಶ್ರಫ್, ಧನ್ಯ ಸದಾನಂದನ್, ವಿದ್ಯಾರ್ಥಿಗಳು, ವಿಶೇಷ ಆಹ್ವಾನಿತರು ಭಾಗವಹಿಸಿದ್ದರು.
ರೇಶ ಬಷೀರ್ ಮತ್ತು ವಿಷ್ಣುಮಾಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಯೋಜಕ ಅರ್ಜಿತಾ ಎ ಅವರು ವಂದಿಸಿದರು. ವಿಶ್ವವಿದ್ಯಾಲಯದ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರ್ರಮವು ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು.