ಕಾಸರಗೋಡು: ಎಸ್ ವೈ ಎಸ್ ವರ್ಕಾಡಿ ಪೆÇಯ್ಯತಬೈಲ್ ಶಾಖೆಯ ಜಿ ಸಿ ಸಿ ಸಮಿತಿಯ ಸಹಕಾರದೊಂದಿಗೆ ನಾಡಿಗೆ ಸಮರ್ಪಿಸುವ ಸಾಂತ್ವನ ಆ್ಯಂಬುಲೆನ್ಸ್ ವಾಹನದÀ ಲೋಕಾರ್ಪಣೆ ಕಾರ್ಯಕ್ರಮ ಯೂತ್ ಸ್ಕ್ವೇರ್‍ನಲ್ಲಿ ಜರುಗಿತು. ಎಸ್‍ವೈಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಸಯ್ಯದ್ ಪಿ.ಎ ಆಟಕೋಯ ತಙಳ್ ಆಂಬುಲೆನ್ಸ್ ವಾಹನ ಲೋಕಾರ್ಪಣೆಗೈದರು.
ಯೂನಿಟ್ ಪ್ರಸಿಡಂಟ್ ಅಬೂಬಕ್ಕರ್ ಕಣಕ್ಕೂರ್ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಶಂಸುದ್ದೀನ್ ತಂಙಳ್ ಗಾಂಧಿನಗರ ಕಾರ್ಯಕ್ರಮ ಉದ್ಘಾಟಿಸಿದರು. ಮುಹಮ್ಮದ್ ಸಖಾಫಿ ತೋಕೆ, ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು, ಪೆÇಯ್ಯತಬೈಲ್ ಜಮಾಅತ್ ಅಧ್ಯಕ್ಷ ಡಿ.ಎಂ.ಕೆ. ಮುಹಮ್ಮದ್, ವರ್ಕಾಡಿ ಗ್ರಾಪಂ ಅಧ್ಯಕ್ಷ ಪಿ.ಬಿ. ಅಬ್ದುಲ್ ಮಜೀದ್, ಗ್ರಾಪಂ ಸದಸ್ಯ ವಸಂತ, ಜಿ.ಸಿ.ಸಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಬ್ದುಲ್ ಸಲಾಂ ಮದನಿ ಸ್ವಾಗತಿಸಿ ಕಾಸಿಂ ಪೆÇಯ್ಯತ್ತಬೈಲ್ ವಂದಿಸಿದರು.