ಕಾಸರಗೋಡು: ಕೃಷಿಕರು ಸ್ಥಳೀಯವಾಗಿ ಬೆಳೆಯುವ ಹಣ್ಣು-ತರಕಾರಿ ಖರೀದಿ ಮತ್ತು ಮಾರಾಟ ನಡೆಸುವ ನಿಟ್ಟಿನಲ್ಲಿ ಮಧ್ಯವರ್ತಿಗಳಿಲ್ಲದೆ ವ್ಯವಹಾರ ನಡೆಸಲು ಸುಭಿಕ್ಷ ಕೆ.ಎಸ್.ಡಿ. ಮೊಬೈಲ್ ಆಪ್ ಸಿದ್ಧವಾಗಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆಶಯದ ಹಿನ್ನೆಲೆಯಲ್ಲಿ ಈ ಮೊಬೈಲ್ ಆಪ್ ತಯಾರಾಗಿದೆ. ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ಜಿಲ್ಲಾ ಪಂಚಾಯತ್ ನ 2 ಲಕ್ಷ ರೂ.ನ ಸಹಾಯದೊಂದಿಗೆ ಸ್ಟಾರ್ಟ್ ಆಪ್ ಮಿಷನ್ ಆಗಿರುವ ಸೈನೆಸ್ಟ್ ಇನ್ನವೇಷನ್ ಸಂಸ್ಥೆ ಈ ಆಪ್ ತಯಾರಿಸಿದೆ. ಕೃಷಿಕರು ತಮ್ಮ ಉತ್ಪನ್ನಗಳ ಮಾರಾಟ ನಡೆಸುವ ಮತ್ತು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳ ಖರೀದಿಗೆ ನೇರ ಸಂಪರ್ಕವನ್ನು ಈ ಆಪ್ ಒದಗಿಸಲಿದೆ.
ದೇಶದಲ್ಲೇ ಪ್ರಥಮ:
ದೇಶದಲ್ಲೇ ಪ್ರಥಮ ಬಾರಿಗೆ ಹೀಗೊಂದು ಆಪ್ ನಮ್ಮ ಜಿಲ್ಲೆಯಲ್ಲಿ ಸಿದ್ಧವಾಗಿದೆ.
ಕೃಷಿಕರು ಮತ್ತು ಗ್ರಾಹಕರು ಗೂಗಲ್ ಪ್ಲೇ ಸ್ಟೋರ್ ನಿಂದ ಈ ಆಪ್ ಡೌನ್ ಲೋಡ್ ನಡೆಸಿ ಬಳಸಬಹುದು. ಹೆಸರು, ಪಿನ್ ಕೋಡ್, ಜಾಗ ಸಹಿತ ಮಾಹಿತಿಗಳನ್ನು ಗ್ರಾಹಕರು ಆಪ್ ನಲ್ಲಿ ಮೊದಲು ನೋಂದಣಿ ನಡೆಸಬೇಕು.
ನಂತರ ಉತ್ಪನ್ನ ಮಾರಾಟ ನಡೆಸುವುದಿದ್ದರೆ, ಮಾರಾಟ ಎಂಬ ಲಿಂಕ್ ನಲ್ಲಿ ಕ್ಲಿಕ್ ನಡೆಸಿ ಹಣ್ಣು, ತರಕಾರಿ, ಧಾನ್ಯ, ಮತ್ತಿತರ ಎಂಬ ಕ್ಯಾಟಗರಿಗಳಲ್ಲಿ ಬೇಕಾದುದನ್ನು ಸೆಲೆಕ್ಟ್ ಮಾಡಿ, ಮಾರಾಟ ನಡೆಸುವ ಉತ್ಪನ್ನದ ತೂಕ, ಮಾರುಕಟ್ಟೆ ದರ, ತಾವು ಮಾರಾಟ ನಡೆಸಲು ಉದ್ದೇಶಿಸುವ ದರ ಎಂಟರ್ ಮಾಡಬೇಕು. ನಂತರ ಉತ್ಪನ್ನದ ಚಿತ್ರ ಅಪ್ ಲೋಡ್ ನಡೆಸಿದರೆ ಕ್ರಮ ಪೂರ್ತಿಗೊಳ್ಳುತ್ತದೆ.
ಉತ್ಪನ್ನದ ಖರೀದಿ ನಡೆಸುವುದಿದ್ದರೆ, ಖರೀದಿ ಎಂಬ ಲಿಂಕ್ ನಲ್ಲಿ ಕ್ಲಿಕ್ ನಡೆಸಿದರೆ, ನಿಮ್ಮ ಸಮೀಪದ ಪ್ರದೇಶದಲ್ಲಿ ಆಪ್ ನಲ್ಲಿ ನೋಂದಣಿ ನಡೆಸಿರುವ ಉತ್ಪನ್ನಗಳನ್ನು ಕಾಣಭಲು ಸಾಧ್ಯ. ಖರೀದಿಸುವುದಿದ್ದರೆ ಉತ್ಪಾದಿಸಿದ ಕೃಷಿಕರನ್ನು ಸಂಪರ್ಕಸುವ ನಿಟ್ಟಿನಲ್ಲಿ ವಾಟ್ಸ್ ಆಪ್ ಯಾ ಮೊಬೈಲ್ ನಂಬ್ರ ಮೂಲಕ ಸಂಪರ್ಕಿಸುವ ಸೌಲಭ್ಯ ಆಪ್ ನಲ್ಲಿದೆ.
ಆಪ್ ಬಿಡುಗಡೆ:
ಕಾಸರಗೋಡು ಜಿಲ್ಲಾಡಳಿತೆ ಸಿದ್ಧಪಡಿಸಿರುವ ಮೊಬೈಲ್ ಆಪ್ ಸುಭಿಕ್ಷ ಕೆ.ಎಸ್.ಡಿ.ಯ ಬಿಡುಗಡೆ ಶುಕ್ರವಾರ ಜರುಗಿತು. ಜಿಲ್ಲಾಧಿಕಾರಿ ಅವರ ಕ್ಯಾಂಪ್ ಹೌಸ್ ನಲ್ಲಿ ನಡೆದ ಸಮಾರoಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸಿದರು. ಇಲ್ಲಿ ಬೆಳೆಯಲಾದ ಪಪ್ಪಾಯವನ್ನು ಈ ಆಪ್ ಮೂಲಕ ಮೊದಲ ಮಾರಾಟಕ್ಕಾಗಿ ನೋಂದಣಿ ನಡೆಸಲಾಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ. ಬಶೀರ್ ಅವರು ಖರೀದಿ ನೋಂದಣಿ ನಡೆಸಿ, ಕ್ಯಾಂಪ್ ಹೌಸ್ ಗೆ ಆಗಮಿಸಿ ಪಪ್ಪಾಯ ಖರೀದಿಸಿದರು.