ತಿರುವನಂತಪುರ: ಕೋವಿಡ್ ಕಾರಣ ಆರ್ಥಿಕ ಬಿಕ್ಕಟ್ಟಲ್ಲಿ ಸಿಲುಕಿರುವ ಕೇರಳ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‍ಆರ್‍ಟಿಸಿ) ಸವಾಲುಗಳಿಂದ ಪಾರಾಗಲು ಹೊಸ ಕಾರ್ಯಚಟುವಟಿಕೆಗಳನ್ನು ಜಾರಿಗೆ ತರಲಿದೆ. ನಿಗದಿಪಡಿಸಿದ ನಿಲ್ದಾಣಗಳ ಜೊತೆಗೆ ಪ್ರಯಾಣಿಕರು ಕೋರಿದ ಯಾವುದೇ ಸ್ಥಳದಲ್ಲಿ ಬಸ್ ಗಳು ಇನ್ನು ನಿಲುಗಡೆಗೊಳ್ಳಲಿದೆ. ದಕ್ಷಿಣ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ನಿಗದಿಯ ನಿಲ್ದಾಣಗಳ(ಅನ್ ಲಿಮಿಟೆಡ್ )ಗಳಲ್ಲಿ ಸಾಮಾನ್ಯ ಬಸ್‍ಗಳಂತೆ ಇದೀಗ ನಿಲ್ದಾಣ ಅವಕಾಶ ನೀಡಲಾಗುವುದೆಂದು ಸಾರಿಗೆ ಆಡಳಿತಾಧಿಕಾರಿ ಬಿಜು ಪ್ರಭಾಕರ್ ಹೇಳಿದ್ದಾರೆ.
ದಕ್ಷಿಣ ಜಿಲ್ಲೆಗಳಲ್ಲಿನ ಈ ಸೇವೆಗಳ ಮೂಲಕ ಪ್ರಯಾಣಿಕರ ಅಭಿಪ್ರಾಯ ಮತ್ತು ನಿರ್ಧಾರಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪ್ರಯಾಣಿಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಇದ್ದರೆ, ಇತರ ಜಿಲ್ಲೆಗಳಲ್ಲಿ ಇದೇ ರೀತಿಯ ಸೇವೆಗಳನ್ನು ಪ್ರಾರಂಭಿಸಲಾಗುತ್ತದೆ. ಪ್ರಯಾಣಿಕರಿಂದ ಬಂದ ಪ್ರತಿಕ್ರಿಯೆಯ ಆಧಾರದ ಮೇಲೆ ಅನಿಯಮಿತ ಸಾಮಾನ್ಯ ಬಸ್‍ಗಳ ಮಾರ್ಗವನ್ನು ನಿರ್ಧರಿಸಲಾಗುವುದೆಂದು ಎಂ.ಡಿ. ಹೇಳಿರುವರು.
ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣಿಕರಿಲ್ಲ ಕಾರಣ ಈ ಹಿಂದಿನ ವೇಳಾಪಟ್ಟಿಯಂತೆ ಬಸ್ ಸೇವೆ ಒದಗಿಸುವುದು ಸಾಧ್ಯವಾಗದು. ಕಡಿಮೆ ಪ್ರಯಾಣಿಕರು ಮತ್ತು ಹೆಚ್ಚುತ್ತಿರುವ ಡೀಸೆಲ್ ವೆಚ್ಚಗಳಿಂದ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡಿದೆ. ಡೀಸೆಲ್ ವೆಚ್ಚಕ್ಕಾಗಿ ದಿನದ ಮುಕ್ಕಾಲು ಪಾಲು ಆದಾಯವನ್ನು ಮೀಸಲಿಡಬೇಕಾಗುತ್ತಿದೆ ಎಂದು ಕೆಎಸ್‍ಆರ್‍ಟಿಸಿ ತಿಳಿಸಿದೆ.
ವಿವಿಧ ಘಟಕ ಅಧಿಕಾರಿಗಳು, ಇನ್ಸ್‍ಪೆಕ್ಟರ್‍ಗಳು ಮತ್ತು ಪ್ರಯಾಣಿಕರೊಂದಿಗೆ ಸಮಾಲೋಚಿಸಿ ಅನಿಯಮಿತ ಸಂಚಾರ ನಿಲುಗಡೆ ಸುಗ್ರೀವಾಜ್ಞೆಯನ್ನು ಹೊರಡಿಸಲು ಅಗತ್ಯ ನಿರ್ಧಾರ ಕೈಗೊಳ್ಳಲಾಗುವುದು. ಸೆ.29 ರ ಮೊದಲು ವರದಿ ಸಲ್ಲಿಸಬೇಕು ಎಂದೂ ನಿರ್ದೇಶನ ನೀಡಲಾಗಿದೆ. ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿದ್ದ ಪ್ರಯಾಣಿಕರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಖಾಸಗಿ ಬಸ್‍ಗಳು ಕಾರ್ಯನಿರ್ವಹಿಸುವುದಿಲ್ಲ. ಸರ್ಕಾರ ನೀಡುವ ರಿಯಾಯಿತಿಗಳು ಸಮರ್ಪಕವಾಗಿವೆ ಎಂದು ಬಸ್ ಮಾಲೀಕರು ಹೇಳಿದ್ದಾರೆ. ಕೆಎಸ್‍ಆರ್‍ಟಿಸಿ ಬಸ್‍ಗಳು ಮಾತ್ರ ಪ್ರಸ್ತುತ ಸೇವಾ ನಿರತವಾಗಿದೆ. ಈ ಸಂದರ್ಭದಲ್ಲಿಯೇ ಕೆಎಸ್‍ಆರ್‍ಟಿಸಿ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.