HEALTH TIPS

ಮಂಗಲ್ಪಾಡಿಯ ತಾಲೂಕು ಆಸ್ಪತ್ರೆಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಡಯಾಲಿಸಿಸ್ ಘಟಕ ಚಟುವಟಿಕೆ ಆರಂಭ

 

         ಮಂಜೇಶ್ವರ: ಮಂಗಲ್ಪಾಡಿಯ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಆಶ್ರಯದ ಡಯಾಲಿಸಿಸ್ ಕೇಂದ್ರ ನಿನ್ನೆಯಿಂದ ಚಟುವಟಿಕೆ  ಆರಂಭಿಸುವ ಮೂಲಕ ಮಂಜೇಶ್ವರ ತಾಲೂಕಿಗೆ ಇದೊಂದು ಜನಪರ ಕೊಡುಗೆಯಾಗಿ ಪರಿಣಮಿಸಲಿದೆ. 

       ನಿಕಟಪೂರ್ವ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅವರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ 50 ಲಕ್ಷ ರೂ. ಮಂಜೂರಾಗಿದ್ದು, ಇದನ್ನು ಬಳಸಿ ಈ ಕಟ್ಟಡ ನಿರ್ಮಿಸಲಾಗಿದೆ. ಜೊತೆಗೆ ಉಪ್ಪಳದ ಉದ್ಯಮಿ ಐಷಾ ಫೌಂಡೇಷನ್ ಅಧ್ಯಕ್ಷ, ಅಬ್ದುಲ್ ಲತೀಫ್ ಉಪ್ಪಳಗೇಟ್ ಅವರು ಕೊಡುಗೆಯಾಗಿ ನೀಡಿರುವ ಸುಮಾರು 80 ಲಕ್ಷ ರೂ. ಮೌಲ್ಯದ 10 ಡಯಾಲಿಸಿಸ್ ಯಂತ್ರಗಳನ್ನು ಇಲ್ಲಿ ಬಳಸಲಾಗುವುದು ಎಂದು ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ತಿಳಿಸಿದರು. ವಿದ್ಯುತ್ ಸಂಪರ್ಕ, ಟ್ರಾನ್ಸ್ ಫಾರ್ಮರ್ ಸ್ಥಾಪನೆ, ಜನರೇಟರ್, ಪ್ಲಂಬಿಂಗ್, ಎ.ಸಿ. ಸಹಿತ ಚಟುವಟಿಕೆಗಳಿಗೆ ಬ್ಲಾಕ್ ಪಂಚಾಯತಿ 50 ಲಕ್ಷ ರೂ. ವೆಚ್ಚ ಮಾಡಿದೆ. ಶಾಸಕರ ನಿಧಿಯಿಂದ ಆರ್.ಒ.ಘಟಕ, ಡಯಾಲಿಸಿಸ್ ಸೆಂಟರ್ ನ ಆಸನ ಸೌಲಭ್ಯ ಇತ್ಯಾದಿ ಸಿದ್ಧಗೊಂಡಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ರೋಗಿಗಳಿಗೆ ಮಂಚ, ಹಾಸುಗೆ ಸಹಿತ ಸೌಲಭ್ಯಗಳಿಗೆ 2.25 ಕೊಟಿ ರೂ.ವನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮಂಜೂರು ಮಾಡಿದ್ದಾರೆ ಎಂದವರು ತಿಳಿಸಿದರು. 


      ಸಾಮಾನ್ಯ ರೋಗಿಯೊಬ್ಬರಿಗೆ ಇಲ್ಲಿನ ಸೌಲಭ್ಯ ಒದಗುವಂತೆ ಡಯಾಲಿಸಿಸ್ ಚಿಕಿತ್ಸೆಗಾಗಿ ತಲಾ 250 ರೂ. ಶುಲ್ಕ ಈಡುಮಾಡಲಾಗುವುದು. ಬಿ.ಪಿ.ಎಲ್, ಪರಿಶಿಷ್ಟ-ಪಂಗಡದ ಜನತೆಗೆ ಚಿಕಿತ್ಸೆ ಪೂರ್ಣರೂಪದಲ್ಲಿ ಉಚಿತವಾಗಿ ಲಭಿಸಲಿದೆ ಎಂದು ಅವರು ಈ ಸಂದರ್ಭ ಸಮಗ್ರ ಮಾಹಿತಿ ನೀಡಿದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries