ಕಣ್ಣೂರು: ಕೋವಿಡ್ ಕ್ವಾರಂಟೈನ್ ಗೊಳಗಾಗಿರುವ ಕೈಗಾರಿಕಾ ಸಚಿವ ಇ.ಪಿ.ಜಯರಾಜನ್ ಅವರ ಪತ್ನಿ ಪಿ.ಕೆ. ಇಂದಿರಾ ಅವರು ಬ್ಯಾಂಕ್ ವ್ಯವಹಾರಕ್ಕಾಗಿ ಕೇರಳ ಬ್ಯಾಂಕಿನ ಕಣ್ಣೂರು ಶಾಖೆಗೆ ಸಂಶಯಾಸ್ಪದರಾಗಿ ಧಾವಿಸಿರುವುದು ಸಂಶಯಗಳಿಗೆ ಕಾರಣವಾಗಿದೆ. ಪ್ರಸ್ತುತ ಚಿನ್ನ ಕಳ್ಳಸಾಗಾಣಿಕೆಯ ವಿವಾದಗಳು ಹತ್ತಿ ಉರಿಯುತ್ತಿರುವಾಗ ತರಾತುರಿಯಲ್ಲಿ ಬ್ಯಾಂಕ್ ವ್ಯವಹಾರ ನಡೆಸಿರುವುದರ ಬಗ್ಗೆ ವಿವಾದಗಳು ಹುಟ್ಟಿಕೊಳ್ಳತೊಡಗಿವೆ.
ಜಿಲ್ಲಾ ಬ್ಯಾಂಕಿನ ಮಾಜಿ ಹಿರಿಯ ವ್ಯವಸ್ಥಾಪಕ ಇಂದಿರಾ ಅವರು ಕೋವಿಡ್ ಪತಿ ಇ.ಪಿ.ಜಯರಾಜನ್ ಕೋವಿಡ್ ಪರೀಕ್ಷೆಗೆ ಒಳಪಡುವ ಮೊದಲೇ ಬ್ಯಾಂಕಿಗೆ ಆಗಮಿಸಿದ್ದರು. ಶುಕ್ರವಾರ ಸಂಜೆ ಬ್ಯಾಂಕಿನಿಂದ ಹಿಂದಿರುಗಿ ಬಳಿಕ ಸಚಿವ ಮತ್ತು ಅವರ ಪತ್ನಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾದರು.
ಪರೀಕ್ಷೆಯ ಫಲಿತಾಂಶ ತಿಳಿಯುವ ಮುನ್ನ ಬ್ಯಾಂಕ್‍ಗೆ ಧಾವಿಸಿದ ಸಚಿವರ ಪತ್ನಿಯ ಕ್ರಮವು ಪ್ರಸ್ತುತ ಚಿನ್ನ ಸಾಗಾಣಿಕೆ ವಿವಾದದೊಂದಿಗೆ ತಳುಕಿಕೊಂಡಿದ್ದು ಅನುಮಾನವನ್ನು ಹುಟ್ಟುಹಾಕಿದೆ. ಇಂದಿರಾ ಸಂಜೆ ಕಣ್ಣೂರಿನ ಕೇರಳ ಬ್ಯಾಂಕಿನ ಮುಖ್ಯ ಶಾಖೆಗೆ ತೆರಳಿದ್ದರು.
ಸಚಿವ ಇ.ಪಿ.ಜಯರಾಜನ್ ಅವರ ಪುತ್ರ ಜೇಸನ್ ಕೂಡ ಪ್ರಸ್ತುತ ಲೈಫ್ ಮಿಷನ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿದ್ದಾರೆ. ಸ್ವಪ್ನಾ ಸುರೇಶ್ ಅವರಿಂದ ಸಚಿವರು 4.25 ಕೋಟಿ ರೂ.ಗಳಲ್ಲಿ 1 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಸಚಿವರ ಮಗನಿಗೆ ಸಪ್ನಾ ಅವರೊಂದಿಗೆ ನಿಕಟ ಸಂಬಂಧವಿದೆ ಎಂದು ತೋರಿಸುವ ಚಿತ್ರಗಳೂ ತನಿಖಾ ಸಂಸ್ಥೆಗೆ ದೊರೆತಿದೆ. ಈ ಹಿನ್ನೆಲೆಯಲ್ಲಿಯೇ ಕೋವಿಡ್ ಕ್ವಾರಂಟೈನ್ ನಲ್ಲಿರುವ ಸಚಿವರು ಮತ್ತವರ ಪತ್ನಿಯ ಬ್ಯಾಂಕ್ ವ್ಯವಹಾರ ನಿಗೂಢವಾಗಿದೆ.
ತನಿಖಾ ಸಂಸ್ಥೆಗಳು ಕಳೆದ ಕೆಲವು ದಿನಗಳಿಂದ ಸಚಿವರ ಮಗನ ಚಲನವಲನಗಳ ಮೇಲೆ ನಿಗಾ ಇರಿಸಿದೆ ಎನ್ನಲಾಗಿದೆ. ಸಚಿವರ ಪತ್ನಿಯ ಬ್ಯಾಂಕ್ ಭೇಟಿ ಮತ್ತು ವಹಿವಾಟನ್ನು ತನಿಖಾ ಸಂಸ್ಥೆಗಳು ನಿರೀಕ್ಷಿಸುತ್ತದೆ ಎಂದು ತಿಳಿದುಬಂದಿದೆ.