ನವದೆಹಲಿ: ಮಂಗಳನ(Mars) ಅಂಗಳದಲ್ಲಿ ಜೀವನದ ಅಸ್ತಿತ್ವ ಕುರಿತಾದ ಸಂಶೋಧನೆ ಮತ್ತೆ ಒಂದು ಹೆಜ್ಜೆ ಮುಂದಕ್ಕೆ ಸಾಗಿದೆ. ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ (Nasa) ವಿಜ್ಞಾನಿಗಳು ಮಂಗಳ ಗ್ರಹದ ಮೇಲ್ಮೈ ಕೆಳಗೆ ಹೂತಿರುವ ಒಟ್ಟು ಮೂರು ಸರೋರ್ವರಗಳನ್ನು ಪತ್ತೆಹಚ್ಚಿದ್ದಾರೆ. ಎರಡು ವರ್ಷಗಳ ಹಿಂದೆ ವಿಜ್ಞಾನಿಗಳು ಮಂಗಳಗ್ರಹದ ಮಂಜುಗಡ್ಡೆಯ ಮೇಲ್ಮೈ ಕೆಳಗೆ ದೊಡ್ಡ ಜಲಾಶಯವೊಂದನ್ನು ಪತ್ತೆಹಚ್ಚಿದ್ದರು.
ಮೊದಲು ಸಿಕ್ಕಿದ್ದು ಉಪ್ಪು ನೀರಿನ ಸರೋವರ
ಪರಿಸರ ನಿಯತಕಾಲಿಕೆ ನೇಚರ್ ಆಸ್ಟ್ರೋನೋಮಿಯಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ವಿಜ್ಞಾನಿಗಳು ಮೊದಲು ಉಪ್ಪು ನೀರಿನ ಸರೋವರವನ್ನು ಪತ್ತೆಹಚ್ಚಿದ್ದು, ನಂತರ ಮೇಲ್ಮೈ ಕೆಳಗೆ ಮೂರು ಸರೋವರಗಳನ್ನು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ. ಈ ಶೋಧ ಕಾರ್ಯಕ್ಕೆ ಯುರೋಪಿಯನ್ ಬಾಹ್ಯಾಕಾಶ ಸಂಷ್ಟೆಯ ರೇಡಾರ್ ದತ್ತಾಂಶಗಳನ್ನು ಬಳಸಲಾಗಿದೆ.
75 ಸಾವಿರ ವರ್ಗ ಕಿಲೋಮೀಟರ್ ಹರಡಿವೆ ಈ ಸರೋವರಗಳು
ವರದಿಯಲ್ಲಿ ಉನಿವರ್ಸಿಟಿ ಆಫ್ ರೋಮ್ ನ ಎಲೆನಾ ಪೇಟಿನೆಲಿ ದಾಖಲೆಗಳ ಉಲ್ಲೇಖ ಮಾಡಲಾಗಿದ್ದು, ಮಂಜಿನ ಮೇಲ್ಮೈ ಕೆಳಗೆ ದೊಡ್ಡ ಜಲಾಶಯವಿದ್ದು, ಇದರ ಜೊತೆಗೆ ಇತರೆ ಮೂರು ಸರೋವರಗಳು ಕೂಡ ಇವೆ ಎನ್ನಲಾಗಿದೆ. ಈ ಸರೋವರಗಳ ಒಟ್ಟು ವಿಸ್ತೀರ್ಣ 75 ಸಾವಿರ ವರ್ಗ ಕಿ.ಮೀಗಳಷ್ಟಾಗಿದ್ದು, ಮಧ್ಯದ ಸರೋವರ 30 ಕಿ.ಮೀ ಉದ್ದವಾಗಿದ್ದರೆ ಉಳಿದ ಸರೋವರಗಳು ಕೆಲವೇ ಕೆಲವು ಕಿ.ಮೀ ಅಗಲವಾಗಿವೆ ಎನ್ನಲಾಗಿದೆ.
ಮಂಗಳ ಗ್ರಹದ ಮೇಲೆ ಜೀವನದ ಅಸ್ತಿತ್ವ