HEALTH TIPS

ಇಂದು ವಿಶ್ವ ಪ್ರವಾಸೋದ್ಯಮ ದಿನ- ಜಿಲ್ಲೆಯ ಪ್ರವಾಸೋದ್ಯಮ ವಿಶೇಷತೆಗಳ ಪರಿಚಯ

  

             ಕಾಸರಗೋಡು: ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯ ಪ್ರವಾಸೋದ್ಯಮ ಮಿಷನ್ ಮಹತ್ತರ  ಬದಲಾವಣೆಯ ಹಾದಿಯಲ್ಲಿದೆ. ಗುಣಮಟ್ಟದ ಪ್ರವಾಸೋದ್ಯಮ ಫಲಿತಾಂಶಗಳನ್ನು ಸ್ಥಳೀಯರಿಗೂ ತಲಪಿಸುವ ರೀತಿಯಲ್ಲಿ ಚಟುವಟಿಕೆಗಳು ಪ್ರಗತಿಯಲ್ಲಿವೆ. ಪೂರ್ವದ ಗುಡ್ಡಗಾಡು ಪ್ರದೇಶಗಳೂ ಇಂದು ಪ್ರವಾಸೋದ್ಯಮದ ಬೆಳವಣಿಗೆಯ ಭಾಗವಾಗಿದೆ. ಇದರ ಭಾಗವಾಗಿ, ಆಸಕ್ತ ಸಣ್ಣ ಉದ್ಯಮಿಗಳು, ವಸತಿ ಸೌಕರ್ಯಗಳು ಮತ್ತು ಕಲಾತ್ಮಕ ಪ್ರತಿಭೆಯನ್ನು ಹೊಂದಿರುವ ಜನರನ್ನು ಒಗ್ಗೂಡಿಸಲು ಮೂರು ವಿಭಿನ್ನ ಆನ್‍ಲೈನ್ ಪ್ಲಾಟ್‍ಫಾರ್ಮ್‍ಗಳನ್ನು ರಚಿಸಲಾಗಿದೆ. ಮೊದಲ ಹಂತದಲ್ಲಿ 1078 ಮತ್ತು ಎರಡನೇ ಹಂತದಲ್ಲಿ 1084 ಘಟಕಗಳು. ಉತ್ಪನ್ನಗಳನ್ನು ವಿವಿಧ ಹೋಟೆಲ್‍ಗಳು ಮತ್ತು ರೆಸಾರ್ಟ್‍ಗಳಿಗೆ ಬೇಡಿಕೆಯ ಮೇರೆಗೆ ತಲುಪಿಸಲಾಗುತ್ತದೆ. ಈ ಮೂಲಕ ಘಟಕಗಳು ಕಳೆದ ವರ್ಷವಷ್ಟೇ 13344946 ರೂ. ಲಾಭ ಗಳಿಸಿದೆ.

             ಗೃಹಿಣಿಯರು ಸಹ ಪ್ರವಾಸೋದ್ಯಮದ ಭಾಗ:

     ಮಹಿಳೆಯರು ಮತ್ತು ಗೃಹಿಣಿಯರನ್ನು ಪ್ರವಾಸೋದ್ಯಮದ ಭಾಗವಾಗಿಸಲು ಪ್ರಾದೇಶಿಕ ತಿನಿಸು ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಜಿಲ್ಲೆಯ 99 ಗೃಹಿಣಿಯರು ತರಬೇತಿ ಪೂರ್ಣಗೊಳಿಸಿದ್ದಾರೆ. ಮಿಷನ್ ನೇತೃತ್ವದಲ್ಲಿ, ಘಟಕಗಳ ಕಾರ್ಯವೈಖರಿಯನ್ನು ಸುಧಾರಿಸಲು ಮತ್ತು ಹೊಸ ಉದ್ಯಮಿಗಳನ್ನು ರೂಪಿಸಲು ಜಿಲ್ಲೆಯಲ್ಲಿ ವಿವಿಧ ಉಚಿತ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಯಿತು. ವಿವಿಧ ತರಬೇತಿ ಕಾರ್ಯಕ್ರಮಗಳಲ್ಲಿ ಸುಮಾರು 600 ಜನರು ಭಾಗವಹಿಸಿದ್ದರು. ಈ ಪೈಕಿ 578 ಮಹಿಳೆಯರಾಗಿದ್ದರು. ತರಬೇತಿ ಪಡೆದವರು ಈಗ ಜಿಲ್ಲೆಯ ವಿವಿಧ ಘಟಕಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಮಿಷನ್ ಚಟುವಟಿಕೆಗಳಲ್ಲಿ ಭಾಗಿಯಾಗಲು 35 ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ಅವರು ಜಿಲ್ಲೆಯ ಮಿಷನ್ ಚಟುವಟಿಕೆಗಳಿಗೆ ಸಹಾಯ ಮಾಡುತ್ತಿದ್ದಾರೆ.


                 ಜಿಲ್ಲೆಯಲ್ಲಿ ಆರು ಗ್ರಾಮೀಣ ಪ್ಯಾಕೇಜ್ ಗಳು:

    ಜಿಲ್ಲೆಯಲ್ಲಿ ಆರು ವಿಭಿನ್ನ ಗ್ರಾಮ ಮಟ್ಟದ ವಿಶಿಷ್ಟ ಪ್ಯಾಕೇಜ್‍ಗಳಿವೆ. ಜಿಲ್ಲೆಯ ಗ್ರಾಮ ಜೀವನ ಅನುಭವ ಪ್ಯಾಕೇಜ್‍ನಲ್ಲಿ ಕಳಿ ಸಂಗ್ರಹ, ಟ್ರಾಲಿಂಗ್, ರೌಂಡ್ ಬೋಟ್ ಮೀನುಗಾರಿಕೆ, ಕುಂಬಾರಿಕೆ, ಕಾರ್ಪೆಟ್ ನೇಯ್ಗೆ ಸಹಿತ ವಿವಿಧ ನೇಯ್ಗೆಗಳು ಮತ್ತು ಕರಕುಶಲ ತಯಾರಿಕೆ ಮುಂತಾದ ವಿವಿಧ ಘಟಕಗಳಿವೆ. ಪೂರ್ವ ಗುಡ್ಡಗಾಡು ಪ್ರದೇಶದಲ್ಲಿ ಮಾಲೋಮ್ ಪುಂಗಮ್ ಚಲ್ ಪ್ರದೇಶವನ್ನು ಪ್ರಮುಖ ಪ್ರವಾಸೋದ್ಯಮ ಪ್ಯಾಕೇಜ್‍ನ ಭಾಗವಾಗಿ ಸೇರಿಸುವುದು ಬಹಳ ಪ್ರಭಾವಶಾಲಿಯಾಗಿದೆ. ಪ್ಯಾಕೇಜಿನ ಮುಖ್ಯ ಆಕರ್ಷಣೆ ಇಲ್ಲಿಯ ಸಾಂಪ್ರದಾಯಿಕ ಜ್ಯೋತಿಷ್ಯವಾಗಿದೆ. ಬಾಳೆಹಣ್ಣಿನ ಸಿಪ್ಪೆಗಳನ್ನು ಬಳಸಿ ಉಳುಕುಗಳಿಗೆ ಚಿಕಿತ್ಸೆ ನೀಡಲು ಸಾಂಪ್ರದಾಯಿಕ ಜಾನಪದ ಔಷಧಿ, ಬಿಲ್ಲುಗಾರಿಕೆ ಮತ್ತು ಮಂಗಗಳನ್ನು ಓಡಿಸಲು ಮರಗಳನ್ನು ಬಳಸಿ ಸದ್ದು ಹೊರಡಿಸುವ ತಂತ್ರಗಳನ್ನು ಇದು ಒಳಗೊಂಡಿದೆ. ನೈಸರ್ಗಿಕ ಹಣ್ಣುಗಳನ್ನು ಹೊಂದಿರುವ ಜಾನಪದ ಆಹಾರವು ಪ್ರವಾಸಿಗರಿಗೆ ಹೊಸ ಅನುಭವವಾಗಿದೆ. ಕಳೆದ ವರ್ಷ 682 ವಿದೇಶಿ ಪ್ರವಾಸಿಗರು ಪ್ಯಾಕೇಜ್ ಭಾಗವಾಗಿ ಭೇಟಿ ನೀಡಿದರು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಸಹ ಪ್ಯಾಕೇಜ್ ಅಧ್ಯಯನ ಮಾಡಲು ಭೇಟಿ ನೀಡಿದ್ದಾರೆ. ಈ ಮೂಲಕ ಗ್ರಾಮಸ್ಥರಿಗೆ ಉತ್ತಮ ಆದಾಯ ಲಭ್ಯವಾಗುತ್ತಿದೆ. 


             ನಿರುತ್ಸಾಹ ಬೇಡ!: 

   ಕೋವಿಡ್ ಹಿನ್ನೆಲೆಯಲ್ಲಿ ಯೋಜನೆಯ ರಾಜ್ಯ ಸಂಯೋಜಕ ಕೆ ರೂಪೇಶ್ ಕುಮಾರ್ ಅವರ ನೇತೃತ್ವದಲ್ಲಿ ಇನ್ನೂ ಐದು ವಿಭಿನ್ನ ಪ್ಯಾಕೇಜ್‍ಗಳನ್ನು ತಯಾರಿಸಲಾಯಿತು. ಪ್ರವಾಸಿಗರ ಸಂಖ್ಯೆ ಕಡಿಮೆಯಾದರೂ ವಾಸ್ತವ್ಯದ ದಿನಗಳನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ನಿಮ್ಮ ಕುಟುಂಬ ಪ್ಯಾಕೇಜ್ ನೊಂದಿಗಿನ ಅನುಭವ ಕೇರಳವು ಕಲಿಕೆಯ ಅನುಭವ ಪ್ಯಾಕೇಜ್, ಸ್ಥಳೀಯ ಅನುಭವ ಪ್ಯಾಕೇಜ್, ಸಾಂಸ್ಕøತಿಕ ಅನುಭವ ಪ್ಯಾಕೇಜ್, ತಿನಿಸು ಅನುಭವ ಪ್ಯಾಕೇಜ್ ಮತ್ತು ಸ್ಕೈಲ್ ಲನಿರ್ಂಗ್ ಎಕ್ಸ್‍ಪೀರಿಯನ್ಸ್ ಪ್ಯಾಕೇಜ್ ಅನ್ನು ಒಳಗೊಂಡಿದೆ.

          ಜಿಲ್ಲೆಯನ್ನು ಗುಣಮಟ್ಟದ ಪ್ರಮುಖ  ಪ್ರವಾಸೋದ್ಯಮದ ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಇಲಾಖೆ  ಹೊಂದಿದೆ.

        ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ಇನ್ನೊಂದು ಕಯ್ಯೂರ್ ಚೀಮೆನಿ ಪಂಚಾಯತ್ ನ್ನು ಕರಿಮೆಣಸು ಬೆಳೆ ಯೋಜನೆಯಲ್ಲಿ ಮತ್ತು ವಲಿಯಪರಂಬ ಪಂಚಾಯತ್ ನ್ನು ಮಾದರಿ ಪ್ರವಾಸೋದ್ಯಮ ಯೋಜನೆಯಲ್ಲಿ ಒಳಪಡಿಸುವುದಾಗಿದೆ.  ಪ್ರವಾಸೋದ್ಯಮ ಮಿಷನ್ ಚಟುವಟಿಕೆಗಳ ಮೂಲಕ ಕಾಸರಗೋಡು ಜಿಲ್ಲೆಯನ್ನು ಅತ್ಯುತ್ತಮ ಪ್ರವಾಸೋದ್ಯಮದ ಕೇಂದ್ರವನ್ನಾಗಿ ಮಾಡಲಾಗುವುದು ಎಂದು ರಾಜ್ಯ ಮಿಷನ್ ಸಂಯೋಜಕ ಕೆ. ರೂಪೇಶ್ ಕುಮಾರ್ ಹೇಳಿರುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries